Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕರಿ ಫ್ರೈಡ್ ರೈಸ್-ಸ್ಪೆಷಲ್ ರೈಸ್ ರೆಸಿಪಿ
ಫ್ರೈಡ್ ರೈಸ್ ಚೀನಾ ಮೂಲದ ಅಡುಗೆಯಾಗಿದ್ದರೂ ನಾವು ಭಾರತೀಯರು ಅದನ್ನು ನಮ್ಮ ರುಚಿಗೆ ಬದಲಾಯಿಸಿ ಮಾಡಲು ಕಲಿತ್ತಿದ್ದೇವೆ. ಅನೇಕ ರುಚಿಯಲ್ಲಿ ಫ್ರೈಡ್ ರೈಸ್ ತಯಾರಿಸಲಾಗುವುದು.
ಅನ್ನ, ಸಾರು ಮಾಡಿ ಕೊಟ್ಟರೆ ಮಕ್ಕಳಿಗೆ ಇಷ್ಟವಾಗುವುದಿಲ್ಲ. ಅದೇ ಫ್ರೈಡ್ ರೈಸ್, ಕಲರ್ ರೈಸ್ ಅಂತ ಮಾಡಿ ಕೊಡಿ, ಬಹಳ ಇಷ್ಟ ಪಟ್ಟು ತಿನ್ನುತ್ತವೆ. ಅವರ ಮೆಚ್ಚಿನ ರೈಸ್ ಬ್ರೇಕ್ ಫಾಸ್ಟ್ ಪಟ್ಟಿ ಕೇಳಿದರೆ ಫ್ರೈಡ್ ರೈಸ್ ಟಾಪ್ 1ನಲ್ಲಿರುತ್ತದೆ. ಈ ಮೊದಲೇ ಹೇಳಿದಂತೆ ಫ್ರೈಡ್ ರೈಸ್ ಅನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಇಲ್ಲಿ ನಾವು ಕರಿಬೇವಿನ ಸ್ವಾದ ಇರುವ ಸವಿರುಚಿಯ ಫ್ರೈಡ್ ರೈಸ್ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು
ಬಾಸುಮತಿ ಅಕ್ಕಿ 2 ಕಪ್
ಕರಿ ಬೇವಿನ ಎಲೆ
ಈರುಳ್ಳಿ 2
ಕ್ಯಾರೆಟ್ 1 ಕಪ್
ಬೀನ್ಸ್ 1 ಕಪ್
ಸ್ವಲ್ಪ ಗೋಡಂಬಿ
ದುಂಡು ಮೆಣಸು 2
ಸಾರಿನ ಪುಡಿ 1 ಚಮಚ
ಸೋಯಾ ಸಾಸ್ 1 ಚಮಚ
Ajinomoto 1 ಚಮಚ
ಎಣ್ಣೆ 3 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ಬಾಸು ಮತಿ ಅಕ್ಕಿಯನ್ನು ತೊಳೆದು ಫ್ರೆಶರ್ ಕುಕ್ಕರ್ ನಲ್ಲಿ ಹಾಕಿ ಅಕ್ಕಿಯ ಪ್ರಮಾಣದ ಎರಡರಷ್ಟು ನೀರು ಹಾಕಿ, ಕರಿ ಬೇವಿನ ಎಲೆ ಹಾಕಿ 2 ವಿಶಲ್ ಬರುವವರೆಗೆ ಬೇಯಿಸಿ. ನಂತರ ಕುಕ್ಕರ್ ಅನ್ನು ಉರಿಯಿಂದ ಇಳಿಸಿ 10- 15 ನಿಮಿಷ ಇಟ್ಟು, ನಂತರ ಮುಚ್ಚಳ ತೆಗೆದು ಅನ್ನವನ್ನು ಅಗಲವಾದ ತಟ್ಟೆಗೆ ಹಾಕಿಡಿ.
* ಎಲ್ಲಾ ತರಕಾರಿಯನ್ನು ಕತ್ತರಿಸಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವಾಗ ಹಸಿ ಮೆಣಸು, ದುಂಡು ಮೆಣಸು, ಕ್ಯಾರೆಟ್, ಬೀನ್ಸ್ ಹಾಕಿ 5 ನಿಮಿಷ ಹುರಿಯಿರಿ. ಈಗ ಗೋಡಂಬಿ ಹಾಕಿ, ಸಾರಿನ ಪುಡಿ ಹಾಕಿ. ಹುರಿಯಿರಿ. ಈಗ ಅಜಿನೋಮೊಟೊ(Ajinomoto) ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ತರಕಾರಿಯನ್ನು ಬೇಯಿಸಿ.
* ತರಕಾರಿ ಬೆಂದು ಮಿಶ್ರಣ ಡ್ರೈಯಾಗುವಾಗ ಬೇಯಿಸಿದ ಅನ್ನ ಹಾಕಿ ಕಲೆಸಿ, ನಂತರ ಸೋಯಾ ಹಾಕಿ 2 ನಿಮಿಷ ಬಿಸಿ ಮಾಡಿ ಉರಿಯಿಂದ ಇಳಿಸಿದರೆ ಕರಿ ಫ್ರೈಡ್ ರೈಸ್ ರೆಡಿ.



Click it and Unblock the Notifications
