Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾವಿನಕಾಯಿ ಪಲಾವ್- ಸೀಸನ್ ಫುಡ್
ಚಿತ್ರಾನ್ನ, ಪುಳಿಯೊಗರೆ ಈ ರೀತಿಯ ಅಡುಗೆಗಳನ್ನು ಎಲ್ಲಾ ಕಾಲದಲ್ಲೂ ಮಾಡಬಹುದು. ಆದರೆ ಕೆಲವೊಂದು ಅಡುಗೆಗಳನ್ನು ಸೀಸನ್ ನಲ್ಲಿ ಮಾತ್ರ ಸಾಧ್ಯ. ಪತ್ರೊಡೆಯನ್ನು ಮಳೆಗಾಲದಲ್ಲಿ ಮಾಡಲು ಸೂಕ್ತ, ಅದೇ ಮಾವಿನಕಾಯಿಯಿಂದ ಮಾಡುವ ಅಡುಗೆಗಳನ್ನು ಈ ಸಮಯದಲ್ಲಿಯೇ ಮಾಡುವುದು ಸೂಕ್ತ.
ಇಲ್ಲಿ ನಾವು ಮಾವಿನ ಕಾಯಿ ಹಾಕಿ ಮಾಡುವ ಪಲಾವ್ ನ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು
ಬಾಸುಮತಿ ಅಕ್ಕಿ 2 ಕಪ್
ಹಸಿ ಮಾವಿನಕಾಯಿ1 (ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ ಹಾಗೂ ಮಾವಿನಕಾಯಿ ತುಂಬಾ ಹುಳಿಯಿದ್ದರೆ ಅರ್ಧ ಮಾತ್ರ ಹಾಕಿ)
ಸಾಸಿವೆ ಅರ್ಧ ಚಮಚ
ಹಸಿಮೆಣಸಿನಕಾಯಿ 2
ಚಕ್ಕೆ (ಚಿಕ್ಕ ಪೀಸ್)
ಏಲಕ್ಕಿ 2-3
ಲವಂಗ 4
ಕರಿಮೆಣಸು 5-6
ಶುಂಠಿ (ಸ್ವಲ್ಪ)
ತುಪ್ಪ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಜೀರಿಗೆ 1 ಚಮಚ
ರುಚಿಗೆ ತಕ್ಕ ಉಪ್ಪು
ಕೊತ್ತಂಬರಿ ಸೊಪ್ಪು( ಚಿಕ್ಕದಾಗಿ ಕತ್ತರಿಸಿ)
ತಯಾರಿಸುವ ವಿಧಾನ:
* ಬಾಣಲಿಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ, ನಂತರ ಸಾಸಿವೆ ಹಾಕಿ. ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಹಸಿ ಮೆಣಸಿನಕಾಯಿ, ಚಕಕ್ಎ, ಲವಂಗ, ಏಲಕ್ಕಿ, ಕರಿ ಮೆಣಸಿನ್ನು ಪುಡಿ ಮಾಡಿ ಹಾಕಿ.
* ನಂತರ ಶುಂಠಿಯನ್ನು ಜಜ್ಜಿ ಹಾಕಿ. ಉರಿಯನ್ನು ಕಮ್ಮಿ ಮಾಡಿ 1 ನಿಮಿಷ ಹುರಿಯಿರಿ.
* ನಂತರ ಹಸಿ ಮಾವಿನ ಕಾಯಿಯನ್ನು ಸೇರಿಸಿ.
* ಈಗ ಅರಿಶಿಣ ಪುಡಿ ಹಾಗೂ ಜೀರಿಗೆ ಪುಡಿ ಹಾಕಿ, ನಂತರ ಬಾಸುಮತಿ ಅಕ್ಕಿ ಹಾಕಿ, ಅಕ್ಕಿಯ ಎರಡು ಪಟ್ಟು ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ 2 ವಿಶಲ್ ಬರುವವರೆಗೆ ಬೇಯಿಸಿ.
* ನಂತರ ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮ್ಯಾಂಗೋ ಪಲಾವ್ ರೆಡಿ.



Click it and Unblock the Notifications
