Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸುಲಭವಾಗಿ ತಯಾರಿಸಬಹುದು ಶುಂಠಿ ಫ್ರೈಡ್ ರೈಸ್
ಮಳೆಗಾಲದಲ್ಲಿ ಶುಂಠಿ ತಿಂದರೆ ತುಂಬಾ ಒಳ್ಳೆಯದು. ಶುಂಠಿ ಜೀರ್ಣಕ್ರಿಯೆಯನ್ನು ಹೆಚ್ಚು ಮಾಡಲು ಸಹಕಾರಿಯಾಗಿದೆ. ಈ ಶುಂಠಿ ಬಳಸಿ ಶುಂಠಿ ಫ್ರೈಡ್ ರೈಸ್ ತಯಾರಿಸಬಹುದು. ಈ ಫ್ರೈಡ್ ರೈಸ್ ಬಾಯಿಗೆ ರುಚಿ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತುಂಬಾ ಸುಲಭವಾಗಿ ತಯಾರಿಸಬಹುದಾಗಿದ್ದು ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಬಾಸುಮತಿ ಅಕ್ಕಿ
* 8-10 ಫ್ರೆಂಚ್ ಬೀನ್ಸ್
* 1 ಕ್ಯಾರೆಟ್
* 1 ಕ್ಯಾಪ್ಸಿಕಂ (ದುಂಡು ಮೆಣಸು)
* 2 ಈರುಳ್ಳಿ (ಕತ್ತರಿಸಿದ್ದು)
* ಒಂದು ಚಮಚ ಶುಂಠಿ ಪೇಸ್ಟ್
* 3 ಚಮಚ ಎಣ್ಣೆ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಅಕ್ಕಿಯನ್ನು ಚೆನ್ನಾಗಿ ತೊಳೆದು 2 ಕಪ್ ಅಕ್ಕಿಗೆ 31/2 ಕಪ್ ನೀರು ಹಾಕಿ ಬೇಯಿಸಬೇಕು (ತುಂಬಾ ಬೇಯಿಸಬಾರದು, ಅನ್ನ ಮುಕ್ಕಾಲು ಭಾಗದಷ್ಟು ಬೆಂದಿರಬೇಕು)
2. ನಂತರ ಆ ಅನ್ನವನ್ನು ಒಂದು ಅಗಲವಾದ ಪಾತ್ರೆಗೆ ಹಾಕಬೇಕು.
3. ನಂತರ ಬಾಣಲೆಗೆಎಣ್ಣೆ ಹಾಕಿ ಅದರಲ್ಲಿ ಕತ್ತರಿಸಿದ ಕ್ಯಾರೆಟ್, ಕತ್ತರಿಸಿದ ಬೀನ್ಸ್ ಮತ್ತು ದುಂಡು ಮೆಣಸಿನ ಕಾಯಿ ಹಾಕಿ ಹುರಿಯಬೇಕು, ಫ್ರೆಂಚ್ ಬೀನ್ಸ್ ಬೆಂದಾಗ ಶುಂಠಿ ಪೇಸ್ಟ್ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ, ಶುಂಠಿ ಪೇಸ್ಟ್ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
4. ನಂತರ ಬಾಸುಮತಿ ಅನ್ನವನ್ನು ಹಾಕಿ ಮಿಶ್ರ ಮಾಡಿ 2 ನಿಮಿಷ ಬಿಸಿ ಮಾಡಿ ಉರಿಯಿಂದ ಪಾತ್ರೆ ತೆಗೆದು ಆ ಪಾತ್ರೆಯ ಬಾಯಿಯನ್ನು ಮತ್ತೊಂದು ಪಾತ್ರೆಯಿಂದ ಮುಚ್ಚಿ ಸ್ವಲ್ಪ ಹೊತ್ತು ಇಟ್ಟು ನಂತರ ಬಡಿಸಬೇಕು. ಟೊಮೆಟೊ ಸಾಸ್ ಜೊತೆಗೆ ಈ ಫ್ರೈಡ್ ರೈಸ್ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
