Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಮಧ್ಯಾಹ್ನ ಊಟದ ಸವಿಯನ್ನು ಹೆಚ್ಚಿಸುವ ಕ್ಯಾರೆಟ್ ಅನ್ನ
ಬಹುಶಃ ನೀವು ಕ್ಯಾರೆಟ್‍ನಿಂದ ಮಾಡಬಹುದಾದ ಹಲವಾರು ಬಗೆಯ ಖಾದ್ಯಗಳನ್ನು ಮನೆಯಲ್ಲಿ ಪ್ರಯತ್ನಿಸಿ ನೋಡಿರಬಹುದು. ಕ್ಯಾರೆಟ್‍ಗಳು (ಗಜ್ಜರಿ) ಒಳ್ಳೆಯ ಪೋಷಕಾಂಶ ಭರಿತ ತರಕಾರಿಗಳಾಗಿದ್ದು, ಇಡೀ ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ನೀಡುವ ಪೋಷಕಾಂಶಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಅದು ತೂಕ ಇಳಿಸಿಕೊಳ್ಳುವುದಾಗಿರಲಿ ಅಥವಾ ಹೊಳೆಯುವ ತ್ವಚೆಯಾಗಿರಲಿ, ಕ್ಯಾರೆಟನ್ನು ನಿಮ್ಮ ಆಹಾರದಲ್ಲಿ ಸೇವಿಸುವುದರಿಂದ ಖಂಡಿತವಾಗಿ ನಿಮ್ಮ ಆಸೆ ಕೈಗೂಡುವುದು.
ಕ್ಯಾರೆಟ್‍ನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ, ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಗಳು ಕಡಿಮೆಯಿರುತ್ತವೆ. ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ, ಮಧುಮೇಹದ ವಿರುದ್ಧ ಹೋರಾಡುತ್ತದೆ, ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೃದ್ರೋಗವನ್ನು ಸಹ ನಿಯಂತ್ರಿಸುತ್ತದೆ. ನಿಮಗೆ ಬೇಕಾದಲ್ಲಿ ನಿಮ್ಮಿಷ್ಟ ಬಂದಷ್ಟು ಕ್ಯಾರೆಟ್ ರೆಸಿಪಿಗಳನ್ನು ನೀವು ಮನೆಯಲ್ಲಿ ತಯಾರಿಸಿಕೊಳ್ಳಬಹುದು. ಕ್ಯಾರೆಟ್ ಜ್ಯೂಸಿನಿಂದ ಹಿಡಿದು, ಕ್ಯಾರೆಟ್ ಮಂಚೂರಿಯನ್‍ವರೆಗೆ ಕ್ಯಾರೆಟ್‍ನ ಖಾದ್ಯಗಳು ಬೆಳೆಯುತ್ತ ಹೋಗುತ್ತವೆ.

ಅದರಲ್ಲೂ ಮಧ್ಯಾಹ್ನದ ಊಟಕ್ಕೆ ಕ್ಯಾರೆಟ್ ಅನ್ನ ಹೇಳಿ ಮಾಡಿಸಿದಂತಹ ಖಾದ್ಯವಾಗಿದೆ. ಇದನ್ನು ಮಾಡುವುದು ಸುಲಭ, ಜೊತೆಗೆ ಇದರ ರುಚಿ ನಿಮ್ಮನ್ನು ಇದರ ಅಭಿಮಾನಿಯನ್ನಾಗಿಸುತ್ತದೆ. ಇದು ಹೇಳಿ ಕೇಳಿ ಕ್ಯಾರೆಟ್ ರೆಸಿಪಿಯಾದರು, ಇದರಲ್ಲಿ ದಪ್ಪ ಮೆಣಸಿನಕಾಯಿ, ಈರುಳ್ಳಿಗಳು ಮತ್ತು ಬೆಳ್ಳುಳ್ಳಿಯನ್ನು ಸಹ ಬಳಸಲಾಗುತ್ತದೆ. ಆದ್ದರಿಂದ ಇದನ್ನು ಒಮ್ಮೆ ಪರೀಕ್ಷಿಸಿ ನೋಡಿಯೇ ಬಿಡಬೇಕೆಂಬ ಆಸೆ ನಿಮಗೆ ಬಂದಿರಬೇಕಲ್ಲವೇ? ಬನ್ನಿ ತಡ ಮಾಡದೆ ಇದನ್ನು ತಯಾರಿಸುವ ಬಗೆಯನ್ನು ತಿಳಿದುಕೊಳ್ಳೋಣ. ಬಾಯಿಗೆ ರುಚಿ ದೇಹಕ್ಕೆ ಹಿತ ಅಣಬೆ ಖಾದ್ಯ
*ಪ್ರಮಾಣ: 4 ಜನರಿಗೆ ಬಡಿಸಬಹುದು
*ಸಿದ್ಧತೆಗೆ ತಗುಲುವ ಸಮಯ: 10 ನಿಮಿಷ
*ಅಡುಗೆಗೆ ತಗುಲುವ ಸಮಯ: 25 ನಿಮಿಷ
ಬೇಕಾಗುವ ಪದಾರ್ಥಗಳು
*ಅನ್ನ- 2 ಕಪ್
*ಕ್ಯಾರೆಟ್‍ಗಳು- 4-5 (ಉದ್ದುದ್ದಕ್ಕೆ ಕತ್ತರಿಸಿರಬೇಕು)
*ಈರುಳ್ಳಿಗಳು - 2 (ಕತ್ತರಿಸಿದಂತಹುದು)
*ದಪ್ಪ ಮೆಣಸಿನ ಕಾಯಿ - 1 (ಕತ್ತರಿಸಿದಂತಹುದು)
*ಹಸಿ ಮೆಣಸಿನ ಕಾಯಿ- 3-4 (ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 3 (ರುಬ್ಬಿದ ಅಥವಾ ಜಜ್ಜಿದಂತಹುದು)
*ಶುಂಠಿ - ½ ಇಂಚು (ಸಣ್ಣಗೆ ಕತ್ತರಿಸಿದಂತಹುದು)
*ಅರಿಶಿಣ ಪುಡಿ- 1 ಟೀ.ಚಮಚ
*ಖಾರದ ಪುಡಿ - 1 ಟೀ.ಚಮಚ
*ಪಲಾವ್ ಮಸಾಲ - ½ 1 1 ಟೀ.ಚಮಚ
*ಕರಿ ಮೆಣಸು - ½ 1 ಟೀ.ಚಮಚ (ಪುಡಿ ಮಾಡಿದಂತಹುದು)
*ಜೀರಿಗೆ - ½ 1 ಟೀ.ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ- 2 1 ಟೀ.ಚಮಚ
*ಕೊತ್ತಂಬರಿ ಸೊಪ್ಪು - 1 ಟೀ.ಚಮಚ (ಕತ್ತರಿಸಿದಂತಹುದು)
ಮಾಡುವ ವಿಧಾನ
*ಆಳವಾದ ತಳವಿರುವ ಬಾಣಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಎಣ್ಣೆಯನ್ನು ಕಾಯಿಸಿ, ಅದು ಹಬೆಯಾಡಲು ಆರಂಭಿಸಿದಾಗ ಅದಕ್ಕೆ ಜೀರಿಗೆಯನ್ನು ಹಾಕಿ.
*ಇನ್ನು ಮಧ್ಯಮ ಗಾತ್ರದ ಉರಿಯಲ್ಲಿ ಬಾಣಲೆಯನ್ನು ಇಟ್ಟು ಅದಕ್ಕೆ ಈರುಳ್ಳಿಯನ್ನು ಹಾಕಿ, ಒಂದು ನಿಮಿಷ ಹುರಿಯಿರಿ. ನಂತರ ಶುಂಠಿ, ಬೆಳ್ಳುಳ್ಳಿ, ಕ್ಯಾರೆಟ್ ಮತ್ತು ದಪ್ಪ ಮೆಣಸಿನ ಕಾಯಿಯನ್ನು ಹಾಕಿ. ಅದಕ್ಕೆ ಉಪ್ಪು ಮತ್ತು ಅರಿಶಿಣ ಪುಡಿಯನ್ನು ಚಿಮುಕಿಸಿ.
*ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು 4-5 ನಿಮಿಷಗಳ ಕಾಲ ಚೆನ್ನಾಗಿ ಕಲೆಸುತ್ತ ಇರಿ. ಈ ತರಕಾರಿಗಳು ಸ್ವಲ್ಪ ಮೃದುವಾಗುವವರೆಗು ಇದನ್ನು ಮುಂದುವರಿಸಿ.
*ಈಗ ಇದಕ್ಕೆ ಮಸಾಲೆಯನ್ನು ಬೆರೆಸಿ, ಅಂದರೆ ಕರಿಮೆಣಸು, ಖಾರದ ಪುಡಿ, ಪುಲಾವ್ ಮಸಾಲೆ, ಹಾಗು ಹಸಿ ಮೆಣಸಿನ ಕಾಯಿಗಳನ್ನು ಬೆರೆಸಿ, ಚೆನ್ನಾಗಿ ಕಲೆಸಿ ಕೊಡಿ.
*ಇದಕ್ಕೆ ನಿಧಾನವಾಗಿ ಅನ್ನವನ್ನು ಬೆರೆಸಿ ಮತ್ತು ಮಸಾಲೆಯು ಸಂಪೂರ್ಣವಾಗಿ ಬೆರೆಸಲಾಗಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದನ್ನು ಮಧ್ಯಮ ಗಾತ್ರದ ಉರಿಯ ಮೇಲೆ ಸ್ವಲ್ಪ ಹೊತ್ತು ಇಡಿ.
*ಕ್ಯಾರೆಟ್ ರೈಸ್ ರೆಸಿಪಿ ಈಗ ಬಡಿಸಲು ಸಿದ್ಧವಾಗಿದೆ, ಒಮ್ಮೆ ರುಚಿ ನೋಡಿ. ಇದರ ಮೇಲೆ ಅಲಂಕಾರಕ್ಕಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಚಿಮುಕಿಸಿ ಮತ್ತು ರಾಯಿತ ಅಥವಾ ಸಲಾಡ್ ಜೊತೆಗೆ ಬಿಸಿ ಬಿಸಿಯಾಗಿ ಬಡಿಸಿಕೊಳ್ಳಿ. ಕ್ಯಾರೆಟ್ ಪಾಲಾಕ್ ಮಸಾಲೆ ಅನ್ನ



Click it and Unblock the Notifications
