Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರಂಜಾನ್ ಗೆ ಮುಘಲೈ ಬಿರಿಯಾನಿ ಇಲ್ಲಿದೆ

ರಂಜಾನ್ ಹಬ್ಬಕ್ಕೆಂದು ರುಚಿಕರವಾದ ಮುಘಲೈ ಬಿರಿಯಾನಿ ರೆಸಿಪಿ ಇಲ್ಲಿದೆ. ತಯಾರಿಸಲು ಸ್ವಲ್ಪ ಸಮಯ ಹಿಡಿದರೂ ತಿನ್ನಲು ಮಾತ್ರ ಬಲು ರುಚಿ. ಪರ್ಶಿಯಾ ಮತ್ತು ಟರ್ಕಿಶ್ ಫ್ಲೇವರ್ ಗಳಲ್ಲಿರುವ ಈ ಬಿರಿಯಾನಿಯನ್ನು ನೀವೂ ಟ್ರೈ ಮಾಡಿ.
ಮುಘಲೈ ಮಟನ್ ಬಿರಿಯಾನಿ ಮಾಡಲು ಬೇಕಾಗುವ ಪದಾರ್ಥಗಳು:
* ಒಂದು ಕಪ್ ಬಾಸುಮತಿ ಅಕ್ಕಿ (ತೊಳೆದು 2 ಗಂಟೆ ನೆನೆಹಾಕಿರಬೇಕು)
* 1 ಕಪ್ ಮಟನ್, 1 ಕಪ್ ಮೊಸರು
* 3 ಈರುಳ್ಳಿ, 6 ಎಸಳು ಬೆಳ್ಳುಳ್ಳಿ
* ಸ್ವಲ್ಪ ಶುಂಠಿ
* ಗೋಡಂಬಿ (ನೀರಿನಲ್ಲಿ ನೆನೆಹಾಕಿರಬೇಕು)
* 6 ಹಸಿರು ಮೆಣಸಿನಕಾಯಿ
* 2 ಚಮಚ ಕೆಂಪು ಮೆಣಸಿನ ಪುಡಿ
* ಕೊತ್ತಂಬರಿ, ಪುದೀನ
* 1 ಕಪ್ ತುಪ್ಪ
* ಕೇಸರಿ (ಹುರಿದು ಬೆಚ್ಚಗಿನ ಹಾಲಿನಲ್ಲಿ 2 ಗಂಟೆ ನೆನೆಸಿರಬೇಕು)
* ಉಪ್ಪು
* ಪುಡಿಗೆ: 1 ಚಮಚ ಜೀರಿಗೆ, 2 ಏಲಕ್ಕಿ, 2-3 ಚೆಕ್ಕೆ, ಲವಂಗ
* 2-3 ಬೇಯಿಸಿದ ಮೊಟ್ಟೆ
* 10 ಬಾದಾಮಿ, 2 ಚಮಚ ಒಣದ್ರಾಕ್ಷಿ
ಮುಘಲೈ ಮಟನ್ ಬಿರಿಯಾನಿ ತಯಾರಿಸುವುದು ಹೇಗೆ?
ಸ್ಟೆಪ್ 1: ಒಂದು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಗೋಡಂಬಿಯನ್ನು ಪೇಸ್ಟ್ ನಂತೆ ತಯಾರಿಸಿಕೊಳ್ಳಬೇಕು. ಬಾಣಲೆಗೆ ತುಪ್ಪ ಹಾಕಿ ಕಾಯಿಸಿ ಅದಕ್ಕೆ ಕತ್ತರಿಸಿದ್ದ ಎರಡು ಈರುಳ್ಳಿಯನ್ನು ಕೆಂಪಗಾಗುವ ತನಕ ಹುರಿದುಕೊಂಡು ಮೆಣಸಿನ ಕಾಯಿ ಹಾಕಬೇಕು. ಇದನ್ನು ಒಂದೆಡೆ ಇಟ್ಟುಕೊಂಡು, ಅದೇ ಬಾಣಲೆಯಲ್ಲಿ ತುಪ್ಪಕ್ಕೆ ಬಾದಾಮಿ ಮತ್ತು ಒಣದ್ರಾಕ್ಷಿ ಹಾಕಿ ಹುರಿದುಕೊಳ್ಳಬೇಕು. ಮತ್ತೆ ಅದೇ ಬಾಣಲೆಗೆ ತುಪ್ಪ ಹಾಕಿ ಮಟನ್ ಕೂಡ ಚೆನ್ನಾಗಿ ಹುರಿದುಕೊಂಡು ಪಕ್ಕಕ್ಕಿಟ್ಟುಕೊಳ್ಳಬೇಕು.
ಸ್ಟೆಪ್ 2: ಈ ಮುನ್ನ ತಯಾರಿಸಿಟ್ಟುಕೊಂಡಿದ್ದ ಪೇಸ್ಟನ್ನು ತುಪ್ಪದಲ್ಲಿ ಹುರಿದು ಅವಶ್ಯವಿದ್ದರೆ ನೀರು ಬೆರೆಸಬೇಕು. ಇದಕ್ಕೆ ಹುರಿದ ಮಟನ್ ಸೇರಿಸಿ ಮೊಸರು ಬೆರೆಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮುಚ್ಚುಳ ಮುಚ್ಚಿ ಸುಮಾರು 20 ನಿಮಿಷ ಬೇಯಿಸಬೇಕು. ನಂತರ ಜೀರಿಗೆ, ಏಲಕ್ಕಿ, ಚೆಕ್ಕೆ ಲವಂಗವನ್ನು ಪುಡಿ ಮಾಡಿ ಕೆಂಪು ಮೆಣಸಿನ ಪುಡಿ ಸಮೇತ ಮಟನ್ ಗೆ ಬೆರೆಸಬೇಕು.
ಸ್ಟೆಪ್ 3: ನೆನೆಸಿದ್ದ ಅಕ್ಕಿಯಿಂದ ಹುಡಿಹುಡಿಯಾಗಿ ಅನ್ನವನ್ನು ತಯಾರಿಸಬೇಕು. ನಂತರ ತಳ ಗಟ್ಟಿಯಿರುವ ಪಾತ್ರೆ ಅಥವಾ ಬಾಣಲೆಯನ್ನು ತೆಗೆದುಕೊಂಡು, ತಯಾರು ಮಾಡಿಟ್ಟುಕೊಂಡಿದ್ದ ಮಟನ್ ಮಿಶ್ರಣ ಮತ್ತು ಅನ್ನವನ್ನು ಚೆನ್ನಾಗಿ ಬೆರೆಸಿ, ತುಪ್ಪದಲ್ಲಿ ಹುರಿದಿಟ್ಟುಕೊಂಡ ಈರುಳ್ಳಿ, ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಮೇಲೆ ಹಾಕಬೇಕು.
ಸ್ಟೆಪ್ 4: ಕೊನೆಯಲ್ಲಿ ಹಾಲಿನಲ್ಲಿ ಸೋಕಿಸಿಟ್ಟಿದ್ದ ಕೇಸರಿ ಚುಮುಕಿಸಿ, ಮುಚ್ಚುಳ ಮುಚ್ಚಿ ಚೆನ್ನಾಗಿ ಹಿಂಗುವವರೆಗೂ ಸಣ್ಣನೆ ಉರಿಯಲ್ಲಿ ಬೇಯಿಸಬೇಕು. ಕೊತ್ತಂಬರಿ ಮತ್ತು ಪುದೀನಾ ಚಿಕ್ಕದಾಗಿ ಕತ್ತರಿಸಿಕೊಂಡು ಬಿರಿಯಾನಿಯನ್ನು ಸಿಂಗರಿಸಬೇಕು.
ಈಗ ರಂಜಾನ್ ಗೆ ರುಚಿರುಚಿಯಾದ ಮುಘಲೈ ಬಿರಿಯಾನಿ ತಿನ್ನಲು ತಯಾರಾಗಿದೆ.



Click it and Unblock the Notifications
