Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಸ್ಪೆಷಲ್ ಟೊಮೆಟೊ ರೈಸ್ ಮಾಡಿ ವೆರಿನೈಸ್ ಅನ್ನಿರಿ

ಬೇಕಾಗುವ ವಸ್ತುಗಳು
* ನಾಲ್ಕು ಟೊಮೆಟೊ
* 5 ಎಸಲು ಬೆಳ್ಳುಳ್ಳಿ
* ಅರಸಿನ ಪುಡಿ ಅರ್ಧ ಚಮಚ
* ಕೊಂಚ ಕೊತ್ತಂಬರಿ ಸೊಪ್ಪು, ಸ್ವಲ್ಪ ಖಾರದ ಪುಡಿ
* ಈರುಳ್ಳಿ ಒಂದು ಸಾಕು
* ಶುಂಠಿ ಒಂದು ಪೀಸ್, ಕರಿಬೇವು ಒಗ್ಗರಣೆಗೆ ಬೇಕಾದಷ್ಟು
* ಒಂದು ಬಟ್ಟಲು ಬಾಸುಮತಿ ಅಕ್ಕಿ
* ತೆಂಗಿನ ಹಾಲು ಒಂದು ಬಟ್ಟಲು ಸಾಕು.
* ರುಚಿಗೆ ತಕ್ಕಷ್ಟು ಉಪ್ಪು
ಮಾಡೋದು ಹೇಗೆ ?
* ಅಕ್ಕಿಯನ್ನು ಕಾಲುಗಂಟೆ ನೀರಲ್ಲಿ ನೆನೆಸಿಡಿ
* ಬಾಣಲೆಗೆ ಕೊಂಚ ನೀರು ಹಾಕಿ ಒಲೆಯ ಮೇಲಿಡಿ. ಅದಕ್ಕೆ ಸ್ವಲ್ಪ ಉಪ್ಪು ಹಾಕಿ.
* ನೀರು ಬಿಸಿಯಾದ ನಂತರ ಟೊಮೆಟೊ ದೊಡ್ಡದಾಗಿ ಕಟ್ ಮಾಡಿ ಅದಕ್ಕೆ ಹಾಕಿ. ಚೆನ್ನಾಗಿ ಟೊಮೆಟೊ ಬೇಯಲಿ.
* ಬೆಂದ ಟೊಮೆಟೊ ತಣ್ಣಗಾದ ನಂತರ ಅದನ್ನು ಮಿಕ್ಸಿಗೆ ಹಾಕಿ ರುಬ್ಬಿರಿ.
* ಬಾಣಲೆಗೆ ಎಣ್ಣೆ ಹಾಕಿ. ಕರಿಬೇವು ಇತ್ಯಾದಿ ಒಗ್ಗರಣೆ ವಸ್ತುಗಳನ್ನು ಹಾಕಿ ಒಗ್ಗರಣೆ ಮಾಡಿ.
* ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಫ್ರೈಮಾಡಿರಿ.
* ಈರುಳ್ಳಿ ಪೀಸ್ ಹಾಕಿ ಫ್ರೈ ಮಾಡಿರಿ.
* ನಂತರ ರುಬ್ಬಿದ ಟೊಮೆಟೊ ಹಾಕಿರಿ.
* ತೆಂಗಿನ ಹಾಲು ಹಾಕಿರಿ, ನಂತರ ಸ್ವಲ್ಪ ನೀರು ಹಾಕಿರಿ. ತೆಂಗಿನ ಹಾಲು ಮತ್ತು ನೀರಿನ ಪ್ರಮಾಣ ಅನ್ನ ಬೇಯಲು ಬೇಕಾದಷ್ಟಿರಲಿ.
* ನೀರು ಕುದಿಯುತ್ತಿರುವಾಗ ಅನ್ನ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ
ಅನ್ನ ಬೇಯ್ದ ಮೇಲೆ ತಿಂದು ನೋಡಿ. ನೀವು ಯಾವಾಗಲೂ ಮಾಡುವುದಕ್ಕಿಂತ ಈ ಟೊಮೆಟೊ ರೈಸ್ ಒಂಚೂರು ಸ್ಪೆಷಲ್ ಆಗಿರುತ್ತದೆ. ಟ್ರೈಮಾಡಿನೋಡಿ.



Click it and Unblock the Notifications
