Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ತುಪ್ಪದ ರುಚಿ ಜೊತೆ ಈ ಮಸಾಲೆ ಹಾಕಿ ಮಾಡಿ ಕಡ್ಲೆ ಉಸ್ಲಿ, ರುಚಿ ಸೂಪರ್ ಆಗಿರುತ್ತೆ
ಮಕ್ಕಳು ಪಿಜ್ಜಾ, ಬರ್ಗರ್ ಅಂತ ಕೇಳುತ್ತವೆ, ಆದರೆ ವಾರಕ್ಕೊಮ್ಮೆಯಾದರೂ ಕಡ್ಲೆ ಉಸ್ಲಿ ಮಾಡಿ ಕೊಡಿ ಅವರ ಬೆಳವಣಿಗೆಗೆ ತುಂಬಾ ಒಳ್ಳೆಯದು, ಇನ್ನು ದೊಡ್ಡವರು ಇದನ್ನು ತಿನ್ನುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ, ಅದರಲ್ಲಿಯೂ ಈ ತುಪ್ಪದ ಫ್ಲೇವರ್ ಉಸ್ಲಿ ರುಚಿ ಇನ್ನೂ ಸೂಪರ್ ಆಗಿರುತ್ತೆ ನೋಡಿ:

ಬೇಕಾಗುವ ಸಾಮಗ್ರಿ
ಗರಂ ಮಸಾಲ ಪುಡಿ 1 ಚಮಚ
ಜೀರಿಗೆ ಪುಡಿ 1 ಚಮಚ
ಕಲ್ಲುಪ್ಪು 1 ಚಮಚ
ಅರಿಶಿಣ ಪುಡಿ 1/2 ಚಮಚ
ತುಪ್ಪ 2 ಚಮಚ
ಕಪ್ಪುಕಡ್ಲೆ 2 ಕಪ್
ಖಾರದ ಪುಡಿ 1 ಚಮಚ (ಖಾರ ಕಡಿಮೆ ಬಯಸುವವರು 1/ 2 ಚಮಚ ಬಳಸಬಹುದು)
ಮಾಡುವ ವಿಧಾನ:
ನೀವು ಕಡ್ಲೆಯನ್ನು 5-6 ಗಂಟೆ ನೆನೆ ಹಾಕಬೇಕು
ನೀವು ಸ್ವಲ್ಪ ಉಪ್ಪು ಹಾಕಿ, 2 ಕಪ್ ನೀರು ಹಾಕಿ 2 ವಿಶಲ್ ಬರುವವರೆಗೆ ಬಯಸಿ
ಈಗ ದಪ್ಪತಳವಿರುವ ಪಾತ್ರೆ ತಗೆದು ಬಿಸಿ ಮಾಡಿ 2 ಚಮಚ ತುಪ್ಪ ಹಾಕಿ
ಈಗ ತುಪ್ಪಕ್ಕೆ ಅರಿಶಿಣ, ಖಾರದ ಪುಡಿ 1/ 2 ನಿಮಿಷ ಫ್ರೈ ಮಾಡಿ ನೋಡಿ
ಜೀರಿಗೆ ಪುಡಿ ಹಾಕಿ, ಕಲ್ಲುಪ್ಪು ಸೇರಿಸಿ
ಈಗ ಬೇಯಿಸಿದ ಕಡ್ಲೆ ಹಾಕಿ ಮಿಕ್ಸ್ ಮಾಡಿ, ಗರಂ ಮಸಾಲ ಸೇರಿಸಿ ಮಿಕ್ಸ್ ಮಾಡಿದರೆ
ರುಚಿಯಾದ ಕಡ್ಲೆ ಉಸ್ಲಿ ರೆಡಿ
ಸಲಹೆ: ಕಡ್ಲೆ ಬೇಢಯಿಸುವಾಗ ಉಪ್ಪು ಹಾಕಿದ್ದರೆ ನಂತರ
ತುಪ್ಪಕ್ಕೆ ಮೊದಲೇ ಉಪ್ಪು ಹಾಬೇಡಿ, ಬೇಕಿದ್ದರೆ ಮತ್ತೆ ಸೇರಿಸಬಹುದು
ತುಪ್ಪಕ್ಕೆ ಕರಿಬೇವು ಸೇರಿಸಿ.
ನೀವು ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಬಹುದು
ಬೇಕಿದ್ದರೆ ತೆಂಗಿನ ತುರಿ ಸೇರಿಸಬಹುದು
ಇವೆಲ್ಲಾ ಭಿನ್ನ ಫ್ಲೇವರ್ ನೀಡುತ್ತೆ
ಈ ಸ್ನ್ಯಾಕ್ಸ್ ತುಂಬಾ ರುಚಿಯಾಗಿರುವುದರಿಂದ ಮಕ್ಕಳು ಕೂಡ
ಇಷ್ಟಪಟ್ಟು ಸವಿಯುತ್ತಾರೆ.
ಇದನ್ನು ತಿನ್ನುವುದರಿಂದ ಅವರ ಬೆವಣಿಗೆಗೆ ಸಹಕಾರಿ.
ದೊಡ್ಡವರು ಇದನ್ನು ಸ್ನ್ಯಾಕ್ಸ್ ಆಗಿ ಬಳಸಿದರೆ ಈ
ಪ್ರಯೋಜನಗಳಿವೆ
ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣ ಮಾಡುತ್ತದೆ
ಕಡ್ಲೆಯಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೊಟೀನ್, ನಾರಿನಂಶ ಇರುವುದರಿಂದ ದೇಹಕ್ಕೆ
ಸಕ್ಕರೆಯಂಶ ನಿಧಾನಕ್ಕೆ ಬಿಡುಗಡೆಯಾಗುತ್ತೆ, ಹಾಗಾಗಿ ಸಕ್ಕರೆಯಂಶ
ನಿಯಂತ್ರಣದಲ್ಲಿಡಲು ಸಹಕಾರಿ.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಕಡ್ಲೆ ಸೇವನೆ ಮಾಡುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು, ಮೆದುಳು ಚುರುಕಾಗಿ ಇರುತ್ತದೆ
ತೂಕ ನಿಯಂತ್ರಣಕ್ಕೆ ಸಹಕಾರಿ
ಕಡ್ಲೆ ಉಸ್ಲಿ ತಿಂದಾಗ ಬೇಗನೆ ಹೊಟ್ಟೆ ತುಂಬುತ್ತದ, ಇದು ದೇಹಕ್ಕೆ ಪೋಷಕಾಂಶ
ನೀಡುತ್ತದೆ, ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ರಕ್ತ ಹೀನತೆ ತಡೆಗಟ್ಟುತ್ತದೆ
ಯಾರಿಗೆ ರಕ್ತಹೀನತೆ ಇದೆಯೋ ಅವರು ಈ ಕಡ್ಲೆಯನ್ನು ಸ್ನ್ಯಾಕ್ಸ್ ರೀತಿ
ಸೇವಿಸುತ್ತಾ ಬನ್ನಿ. ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗುವುದು.
ಗರ್ಭಿಣಿಯರಿಗೆ ಮಕ್ಕಳಿಗೆ ತುಂಬಾ ಒಳ್ಳೆಯದು.



Click it and Unblock the Notifications
