For Quick Alerts
ALLOW NOTIFICATIONS  
For Daily Alerts

ರವೆ ಟೋಸ್ಟ್ ರೆಸಿಪಿ

Posted By: Divya pandit Pandit
|

ರವೆಯಿಂದ ವಿವಿಧ ಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸಬಹುದು. ರವೆ ಬೆಳಗಿನ ಉಪಹಾರ ಹಾಗೂ ಕುರುಕಲು ತಿಂಡಿಯನ್ನು ತಯಾರಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ರವೆಯಲ್ಲಿ ಸೂಜಿ ರವೆ, ದಪ್ಪ ರವೆ ಸೇರಿದಂತೆ ವಿವಿಧ ಬಗೆಯ ರವೆ ಇರುವುದನ್ನು ಕಾಣಬಹುದು. ಖಾದ್ಯಗಳ ತಯಾರಿಕೆಗೆ ಅನುಗುಣವಾಗಿ ವಿವಿಧ ಬಗೆಯ ರವೆಯ ಬಳಕೆಯನ್ನು ಮಾಡಲಾಗುವುದು. ರವೆಯೊಂದಿಗೆ ವಿವಿಧ ಬಗೆಯ ತರಕಾರಿಗಳನ್ನು ಸೇರಿಸಿ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಅಂತಹ ತಿಂಡಿಗಳಲ್ಲಿ ರವೆ ಟೋಸ್ಟ್ ಸಹ ಒಂದು.

ರವೆಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸೋಡಿಯಂ ಗುಣ ಗಳಿರುವುದನ್ನು ಕಾಣಬಹುದು. ಆರೋಗ್ಯಕರವಾದ ಈ ಉತ್ಪನ್ನದಿಂದ ವಿಶೇಷ ಬಗೆಯ ಟೋಸ್ಟ್ ತಯಾರಿಸಬಹುದು. ಫ್ರೆಂಚ್ ಶೈಲಿಯ ಟೋಸ್ಟ್ ಕಾಫಿ, ಟೀ, ಸೇರಿದಂತೆ ಮನಸ್ಸಿಗೆ ಹಿತವೆನಿಸಿದಾಗಲೆಲ್ಲಾ ಸೇವಿಸಬಹುದು. ರುಚಿಕರವಾದ ಹಾಗೂ ಗರಿಗರಿಯಾದ ಟೋಸ್ಟ್ ನಾಲಿಗೆ ರುಚಿಯನ್ನು ಹೆಚ್ಚಿಸುವುದು.

ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಎನ್ನುವ ಬಯಕೆಯನ್ನು ಕೆರಳಿಸುವ ಈ ತಿಂಡಿಯನ್ನು ತಯಾರಿಸುವ ವಿಧಾನ ಬಲು ಸುಲಭ. ಬಿಡುವಿನ ಸಮಯದಲ್ಲಿ, ಸ್ನೇಹಿತರ ಆಗಮನದ ಸಂದರ್ಭದಲ್ಲಿ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಬಹಳ ಸರಳ ಹಾಗೂ ಸುಲಭ ವಿಧಾನದಲ್ಲಿ ತಯಾರಿಸಬಹುದು. ನಿಮಗೂ ಈ ಪಾಕವಿಧಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎಂದಾದರೆ ಈ ಮುಂದೆ ವಿವರಿಸಲಾದ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಿ.

Rava Toast Recipe

ರವೆ ಟೋಸ್ಟ್ ರೆಸಿಪಿ | ಸೂಜಿ ಟೋಸ್ಟ್ ರೆಸಿಪಿ | ಬ್ರೆಡ್ ಟೋಸ್ಟ್ ರೆಸಿಪಿ | ಬ್ರೆಡ್ ರವಾ ಟೋಸ್ಟ್ ರೆಸಿಪಿ | ರವಾ ಟೋಸ್ಟ್ ಸ್ಟೆಪ್ ಬೈ ಸ್ಟೆಪ್ | ರವಾ ಟೊಸ್ಟ್ ವಿಡಿಯೊ
ರವೆ ಟೋಸ್ಟ್ ರೆಸಿಪಿ | ಸೂಜಿ ಟೋಸ್ಟ್ ರೆಸಿಪಿ | ಬ್ರೆಡ್ ಟೋಸ್ಟ್ ರೆಸಿಪಿ | ಬ್ರೆಡ್ ರವಾ ಟೋಸ್ಟ್ ರೆಸಿಪಿ | ರವಾ ಟೋಸ್ಟ್ ಸ್ಟೆಪ್ ಬೈ ಸ್ಟೆಪ್ | ರವಾ ಟೊಸ್ಟ್ ವಿಡಿಯೊ
Prep Time
10 Mins
Cook Time
15M
Total Time
25 Mins

Recipe By: ಬೋಲ್ಡ್ ಸ್ಕೈ ಟೀಮ್

Recipe Type: ಉಪಹಾರ/ಕುರುಕಲು ತಿನಿಸು

Serves: 2

Ingredients
  • * ಬ್ರೆಡ್ ಸ್ಲೈಸ್ - 8-10

    * ಸೂಜಿ ರವೆ - 150 ಗ್ರಾಂ.

    * ಮೊಸರು - 100 ಗ್ರಾಂ.

    * ನೀರು - ಅಗತ್ಯಕ್ಕೆ ತಕ್ಕಷ್ಟು

    * ಕಪ್ಪು ಕಾಳಮೆಣಸು- 1/2 ಟೇಬಲ್ ಚಮಚ

    * ಉಪ್ಪು - ರುಚಿಗೆ ತಕ್ಕಷ್ಟು.

    * ಸಕ್ಕರೆ - 1 ಟೇಬಲ್ ಚಮಚ.

    * ದೊಡ್ಡ ಗಾತ್ರದ ಈರುಳ್ಳಿ- 1 ಹೆಚ್ಚಿರುವುದು.

    * ದೊಡ್ಡ ಗಾತ್ರದ ಟೊಮ್ಯಾಟೋ - 1 ಹೆಚ್ಚಿರುವುದು.

    * ಹಸಿಮೆಣಸು- ಸ್ವಲ್ಪ

    * ಕ್ಯಾಪ್ಸಿಕಮ್ - 1/2 ಕಪ್

    * ಕೊತ್ತಂಬರಿ ಸೊಪ್ಪು -ಅಗತ್ಯಕ್ಕೆ ತಕ್ಕಷ್ಟು.

    * ಬೆಣ್ಣೆ/ತುಪ್ಪಾ - ಅಗತ್ಯಕ್ಕೆ ತಕ್ಕಷ್ಟು.

Red Rice Kanda Poha
How to Prepare
  • 1. ಒಂದು ಬೌಲ್‍ಅಲ್ಲಿ ಮೊಸರು, ಕರಿಮೆಣಸಿನ ಕಾಳು, ಸೂಜಿ ರವೆ, ಉಪ್ಪು ಮತ್ತು ಸಕ್ಕರೆ ಸೇರಿಸಿ.

    2. ಎಲ್ಲವನ್ನೂ ಸೇರಿಸಿ ಮಿಶ್ರಗೊಳಿಸಿ ಹತ್ತು ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.

    3. ಹೆಚ್ಚಿಕೊಂಡ ಈರುಳ್ಳಿ, ಟೊಮ್ಯಾಟೋ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಸೇರಿಸಿ ಮಿಶ್ರಗೊಳಿಸಿ.

    4. ಮಿಶ್ರಣವನ್ನು ಬ್ರೆಡ್‍ನ ಸ್ಲೈಸ್ ಮೇಲೆ ಹರಡಿ.

    5. ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸಿ.

    6. ಬ್ರೆಡ್ ಸ್ಲೈಸ್ ಅನ್ನು ಎರಡು ಬದಿಯಲ್ಲೂ ಹೊಂಬಣ್ಣ ಬರುವವರೆಗೆ ಹುರಿಯಬೇಕು.

    7. ತ್ರಿಭುಜಾಕೃತಿಯಲ್ಲಿ ಕತ್ತರಿಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.

Instructions
  • ತಿಂಡಿಯಲ್ಲಿ ಹೆಚ್ಚಿನ ಪೋಷಕಾಂಶವನ್ನು ಪಡೆಯಲು ಹೆಚ್ಚಿನ ತರಕಾರಿಯನ್ನು ಸೇರಿಸಬಹುದು.
  • ಬ್ರೆಡ್‍ನ ಎರಡೂ ಬದಿಯಲ್ಲಿ ಅತಿಯಾಗಿ ಮಿಶ್ರಣವನ್ನು ಸೇರಿಸದಿರಿ. ಜೊತೆಗೆ ಎರಡೂ ಬದಿಯಲ್ಲೂ ಚೆನ್ನಾಗಿ ಬೇಯಿಸಿ.
Nutritional Information
  • ಕ್ಯಾಲೋರಿ - 72 ಕ್ಯಾಲ್
  • ಕೊಬ್ಬು - 3.1 ಗ್ರಾಂ.
  • ಪ್ರೋಟೀನ್ - 1.6 ಗ್ರಾಂ.
  • ಕಾರ್ಬೋಹೈಡ್ರೇಟ್ - 8.9 ಗ್ರಾಂ.
  • ಫೈಬರ್ - 0.4 ಗ್ರಾಂ.

ಹಂತ ಹಂತವಾದ ಚಿತ್ರ ವಿವರಣೆ:

1. ಒಂದು ಬೌಲ್‍ಅಲ್ಲಿ ಮೊಸರು, ಕರಿಮೆಣಸಿನ ಕಾಳು, ಸೂಜಿ ರವೆ, ಉಪ್ಪು ಮತ್ತು ಸಕ್ಕರೆ ಸೇರಿಸಿ.

Rava Toast Recipe
Rava Toast Recipe
Rava Toast Recipe

2. ಎಲ್ಲವನ್ನೂ ಸೇರಿಸಿ ಮಿಶ್ರಗೊಳಿಸಿ ಹತ್ತು ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.

Rava Toast Recipe
Rava Toast Recipe
Rava Toast Recipe

3. ಹೆಚ್ಚಿಕೊಂಡ ಈರುಳ್ಳಿ, ಟೊಮ್ಯಾಟೋ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಸೇರಿಸಿ ಮಿಶ್ರಗೊಳಿಸಿ.

Rava Toast Recipe
Rava Toast Recipe
Rava Toast Recipe

4. ಮಿಶ್ರಣವನ್ನು ಬ್ರೆಡ್‍ನ ಸ್ಲೈಸ್ ಮೇಲೆ ಹರಡಿ.

Rava Toast Recipe
Rava Toast Recipe
Rava Toast Recipe
Rava Toast Recipe

5. ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸಿ.

Rava Toast Recipe
Rava Toast Recipe
Rava Toast Recipe

6. ಬ್ರೆಡ್ ಸ್ಲೈಸ್ ಅನ್ನು ಎರಡು ಬದಿಯಲ್ಲೂ ಹೊಂಬಣ್ಣ ಬರುವವರೆಗೆ ಹುರಿಯಬೇಕು.

Rava Toast Recipe
Rava Toast Recipe
Rava Toast Recipe
Rava Toast Recipe

7. ತ್ರಿಭುಜಾಕೃತಿಯಲ್ಲಿ ಕತ್ತರಿಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.

Rava Toast Recipe
Rava Toast Recipe
Rava Toast Recipe
Rava Toast Recipe
Rava Toast Recipe
Rava Toast Recipe
[ 3.5 of 5 - 25 Users]
X
Desktop Bottom Promotion