ನವರಾತ್ರಿ ಸ್ಪೆಷಲ್: ರಸಮಲೈ ರೆಸಿಪಿ

Posted By: Lekhaka
Subscribe to Boldsky

ಸಿಹಿಯಾದ ಹಾಲಿನಲ್ಲಿ ಮುಳುಗಿ, ಕುಳಿತುಕೊಳ್ಳುವ ಸಿಹಿ ತಿಂಡಿಯೆಂದರೆ ರಸಮಲೈ. ಮಕ್ಕಳಿಂದ ಹಿಡಿದು ವಯಸ್ಕರು ಸಹ ಈ ಸಿಹಿಯನ್ನು ಸವಿಯಲು ಹಾತೊರೆಯುತ್ತಾರೆ. ನಾಲಿಗೆಗೆ ಹೆಚ್ಚು ಆಹ್ಲಾದ ನೀಡುವ ರಸಮಲೈ ಬಂಗಾಳಿಯ ವಿಶೇಷ ಸಿಹಿ ತಿಸಿಸು. ಇದನ್ನು ಹಬ್ಬ, ಉತ್ಸವ ಹಾಗೂ ಮನೆಯ ವಿಶೇಷ ಕಾರ್ಯಕ್ರಮದಲ್ಲಿ ತಯಾರಿಸುತ್ತಾರೆ.

ಹಾಲು, ಸಕ್ಕರೆ, ರಸಗುಲ್ಲಾಗಳ ಮಿಶ್ರಣದಲ್ಲಿ ತಯಾರಿಸಲಾಗುವ ರಸಮಲೈ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾದದ್ದು. ಹಾಲಿನಲ್ಲಿ ನೆನೆದಿರುವ ಸ್ಪಂಜಿನ ಉಂಡೆಯಂತಿರುವ ರಸಮಲೈ ಅನ್ನು ಸವಿಯಲು ಹೆಚ್ಚು ಖುಷಿಯನ್ನು ನೀಡುತ್ತದೆ. ಊಟದ ಜೊತೆ ಇದನ್ನು ನೀಡುವುದರಿಂದ ಭಕ್ಷ್ಯದ ಶ್ರೀಮಂತಿಕೆ ಹೆಚ್ಚಿಸಬಹುದು.

ಭಾರತದಾದ್ಯಂತ ಹೆಚ್ಚು ಪ್ರಸಿದ್ಧಿ ಪಡೆದ ಈ ಸಿಹಿ ತಿಂಡಿಯನ್ನು ತಯಾರಿಸಲು ದೀರ್ಘಕಾಲ ತಗುಲುವುದು. ಮೊದಲು ರಸಗುಲ್ಲವನ್ನು ತಯಾರಿಸಿಕೊಂಡು ನಂತರ ರಸಮಲೈ ತಯಾರಿಸಬೇಕಾಗುವುದು. ಈ ಪಾಕವಿಧಾನ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುವುದಾದರೂ ಫಲಿತಾಂಶ ಹೆಚ್ಚು ಖುಷಿಯನ್ನು ನೀಡುವುದು. ಈ ತಿಂಡಿಯನ್ನು ನೀವು ಮನೆಯಲ್ಲಿ ಮಾಡಲು ಬಯಸುವುದಾದರೆ ಈ ಕೆಳಗೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಬಹುದು.

rasmalai recipe
ರಸಮಲೈ ರೆಸಿಪಿ| ಬೆಂಗಾಳಿ ರಸಮಲೈ ಮಾಡುವುದು ಹೇಗೆ| ಸ್ಪಾಂಜಿ ರಸಮಲೈ ರೆಸಿಪಿ| ಸರಳವಾಗಿ ಮಾಡಬಹುದಾದ ರಸಮಲೈ ರೆಸಿಪಿ
ರಸಮಲೈ ರೆಸಿಪಿ| ಬೆಂಗಾಳಿ ರಸಮಲೈ ಮಾಡುವುದು ಹೇಗೆ| ಸ್ಪಾಂಜಿ ರಸಮಲೈ ರೆಸಿಪಿ| ಸರಳವಾಗಿ ಮಾಡಬಹುದಾದ ರಸಮಲೈ ರೆಸಿಪಿ
Prep Time
2 Hours
Cook Time
1H
Total Time
3 Hours

Recipe By: ಮೀನಾ ಭಂಡಾರಿ

Recipe Type: ಸಿಹಿ ತಿಂಡಿ

Serves: 7-8 ರಸಮಲೈ

Ingredients
 • ಹಾಲು - 1, 3/4 ಲೀಟರ್

  ಕೇಸರಿ ಎಳೆ - 4-5

  ಸಕ್ಕರೆ - 6 ಟೇಬಲ್ ಚಮಚ + 1/2 ಕಪ್

  ಬಾದಾಮಿ - 4

  ಪಿಸ್ತಾ - 1 ಟೀ ಚಮಚ

  ಸಿಟ್ರಿಕ್ ಆಮ್ಲದ ಹರಳು(ಸಿಟ್ರಿಕ್ ಆಸಿಡ್ ಕ್ರಿಸ್ಟಾಲ್) - 1/4 ಟೀ ಚಮಚ

  ಐಸ್ ಹರಳು (ಐಸ್ ಕ್ಯೂಬ್ಸ್) - 1 ಕಪ್

  ಕಾರ್ನ್ ಹಿಟ್ಟು - 1/4 ಟೀ ಚಮಚ

  ನೀರು - 1 ಲೀಟರ್

  ಗುಲಾಬಿ ನೀರು (ರೋಸ್ ವಾಟರ್) - 1 ಟೀ ಚಮಚ.

Red Rice Kanda Poha
How to Prepare
 • 1. ಒಂದು ಪಾತ್ರೆಯಲ್ಲಿ ಒಂದು ಲೀಟರ್ ಹಾಲನ್ನು ಹಾಕಿ ಬಿಸಿ ಮಾಡಿ.

  2. ಹಾಲು ಕುದಿಯುತ್ತಲೇ ಅರ್ಧದಷ್ಟು ಪ್ರಮಾಣಕ್ಕೆ ಕುಗ್ಗಲು ಮುಚ್ಚಳವನ್ನು ಮುಚ್ಚಿ, 7-10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬತ್ತಲು ಬಿಡಿ.

  3. ಮುಚ್ಚಳವನ್ನು ತೆಗೆದು, ಮಲೈ ತಳ ಹಿಡಿಯದಂತೆ ಚೆನ್ನಾಗಿ ಕಲುಕಿ.

  4. ಕೇಸರಿ ಎಳೆಯಯನ್ನು ಹಾಕಿ ಪುನಃ ಕಲುಕಿ.

  5. 6 ಟೇಬಲ್ ಚಮಚ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಕರಗುವವರೆಗೂ ಚೆನ್ನಾಗಿ ಕದಡುತ್ತಿರಿ.

  6. ಪುನಃ ಮುಚ್ಚಳವನ್ನು ಮುಚ್ಚಿ, 5 ನಿಮಿಷ ಕುದಿಯಲು ಬಿಡಿ.

  7. ಈ ಮಧ್ಯೆ, ಬಾದಾಮಿಯನ್ನು ತೆಳುವಾದ ಸ್ಲೈಸ್‍ನಂತೆ ಹೆಚ್ಚಿಕೊಳ್ಳಿ.

  8. ಮುಚ್ಚಳವನ್ನು ತೆಗೆದು ಚೆನ್ನಾಗಿ ಕಲುಕಿ. ಹೀಗೆ ಮಾಡುವುದರಿಂದ ಮಲೈ ಪಾತ್ರೆಯ ಸುತ್ತ ಮತ್ತು ತಳ ಹಿಡಿಯದು.

  9. 1,1/2 ಟೇಬಲ್ ಚಮಚ ಹೆಚ್ಚಿದ ಬಾದಾಮಿ ಸ್ಲೈಸ್‍ಗಳನ್ನು ಸೇರಿಸಿ.

  10. ಹೆಚ್ಚಿಕೊಂಡ ಪಿಸ್ತವನ್ನು ಸೇರಿಸಿ.

  11. ಚೆನ್ನಾಗಿ ಬೆರೆಸಿ ಒಂದೆಡೆ ಇಡಿ.

  12. 3/4 ಲೀಟರ್ ಹಾಲನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ.

  13. 2-3 ನಿಮಿಷಗಳ ಕಾಲ ಕುದಿಸಿ, ನಂತರ ಉರಿಯನ್ನು ಆರಿಸಿ.

  14. ಸಿಟ್ರಿಕ್ ಆಮ್ಲದ ಹರಳನ್ನು ಸೇರಿಸಿ.

  15. 2-3 ನಿಮಿಷಗಳ ಕಾಲ ನಿರಂತರವಾಗಿ ಕಲುಕಿರಿ. ಇದರಿಂದ ಹಾಲು ಹೊಸರು ಒಡೆದಂತಾಗುವುದು.

  16. ಹಾಲು ಮೊಸರೊಡೆದಂತಾದ ನಂತರ ಐಸ್ ಕ್ಯೂಬ್ಸ್ ಗಳನ್ನು ಸೇರಿಸಿ, ಅವು ಕರಗಲು ಬಿಡಿ.

  17. ಒಂದು ಬೌಲ್‍ಅನ್ನು ತೆಗೆದುಕೊಂಡು ಅದರ ಮೇಲೆ ಅಡುಗೆ ಬಟ್ಟೆ/ಟವೆಲ್‍ಅನ್ನು ಇರಿಸಿ.

  18. ಮೊಸರೊಡೆದ ಹಾಲನ್ನು ಟವೆಲ್‍ನ ಮೇಲೆ ಸುರಿಯಿರಿ.

  19. ಟವೆಲ್‍ನ ಸುತ್ತಲ ತುದಿಯನ್ನು ಹಿಡಿದು ಮೇಲೆತ್ತಿ, ನೀರು ಬಸಿದು ಹೋಗುವಂತೆ ಮಾಡಿ.

  20. ನಂತರ ಟವೆಲ್‍ಅನ್ನು ಮೇಲೆ 10 ನಿಮಿಷ ತೂಗಲು ಹಾಕಿ. ಹೀಗೆ ಮಾಡುವುದರಿಂದ ನೀರನ್ನು ಸಂಪೂರ್ಣವಾಗಿ ಬಸಿಯಬಹುದು.

  21. ಟವೆಲ್‍ಅನ್ನು ಬಿಚ್ಚಿ ನೀರಿನಿಂದ ಬೇರ್ಪಟ್ಟ ಹೂರಣವನ್ನು ತೆಗೆಯಿರಿ.

  22. ಅದನ್ನು ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ.

  23. ಕಾರ್ನ್ ಹಿಟ್ಟನ್ನು ಸೇರಿಸಿ ರುಬ್ಬಿ. ಅದು ಕಾಳುಕಾಳಾದ ಮಿಶ್ರಣದಂತೆ ಆಗುವುದು.

  24. ಇದನ್ನು ಒಂದು ಪ್ಲೇಟಿಗೆ ವರ್ಗಾಯಿಸಿ.

  25. ಅಂಗೈನಲ್ಲಿ ನಾದುವುದರ ಮೂಲಕ ಗಂಟು ಗಂಟಾಗುವುದನ್ನು ತಡೆಯಿರಿ.

  26. ಒಂದು ಮೃದುವಾದ ಹಿಟ್ಟಿನ ಮಿಶ್ರಣವಾಗುವಂತೆ ನಾದಿ/ಕಲಸಿ.

  27. ಸಮ ಪ್ರಮಾಣದಲ್ಲಿ ಹಿಟ್ಟನ್ನು ತೆಗೆದುಕೊಳ್ಳಿ.

  28. ಅದನ್ನು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ.

  29. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಕುದಿಯಲು ಇಡಿ.

  30. 1/2 ಕಪ್ ಸಕ್ಕರೆಯನ್ನು ಸೇರಿಸಿ.

  31. ಮುಚ್ಚಳವನ್ನು ಮುಚ್ಚಿ, ಸಕ್ಕರೆಯು ಕರಗಿ ಪಾಕಬರಲು 4-5 ನಿಮಿಷಗಳಕಾಲ ಕುದಿಯಲು ಬಿಡಿ.

  32. ಪಾಕಕ್ಕೆ ಉಂಡೆಯನ್ನು ಸೇರಿಸಿ, ಪುನಃ ಮುಚ್ಚಳವನ್ನು ಮುಚ್ಚಿ.

  33. 15 ನಿಮಿಷಗಳ ಕಾಲ ಬೇಯಲು ಬಿಡಿ.

  34. ಗುಲಾಬಿ ನೀರನ್ನು ಸೇರಿಸಿ, 10 ನಿಮಿಷ ಆರಲು ಬಿಡಿ.

  35. ಮಾಡಿಕೊಂಡ ಮಲೈ/ಹಾಲನ್ನು ಪುನಃ ಬಿಸಿಮಾಡಲು ಇಡಿ.

  36. ರಸಗುಲ್ಲವನ್ನು ಮಲೈ/ಹಾಲಿನಲ್ಲಿ ಹಾಕಿ.

  37. ದೊಡ್ಡ ಉರಿಯಲ್ಲಿ 2-3 ನಿಮಿಷ ಕುದಿಯಲು ಬಿಡಿ.

  38. ಇದನ್ನು ಒಂದು ಬೌಲ್‍ಗೆ ವರ್ಗಾಯಿಸಿ.

  39. 10 ನಿಮಿಷಗಳ ಕಾಲ ಆರಲು ಬಿಡಿ.

  40. ಕಡಿಮೆ ಎಂದರೂ 2 ಗಂಟೆಗಳ ಕಾಲ ಫ್ರಿಜ್‍ನಲ್ಲಿ ಇಡಿ.

  41. ತಂಪು ತಂಪಾಗಿರುವಾಗಲೇ ಸವಿಯಲು ನೀಡಿ.

Instructions
 • 1. ಮೊಸರು, ನಿಂಬೆ ರಸ ಅಥವಾ ವೆನೆಗರ್ ಬಳಸಿ ಹಾಲನ್ನು ಮೊಸರುಗೊಳಿಸಬಹುದು. ವಿನೆಗರ್ ಬಹಳ ಪ್ರಬಲವಾಗಿರುವುದರಿಂದ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಪ್ರಬಲತೆಯನ್ನು ಕಡಿಮೆ ಮಾಡಿಕೊಳ್ಳಬೇಕು.
 • 2. ರಸಗುಲ್ಲಾ ಉಂಡೆಗಳು ಒಡೆಯುವ ಸಾಧ್ಯತೆ ಇರುತ್ತವೆ. ಹಾಗಾಗಿ ಯಾವುದೇ ಬಿರುಕುಗಳಾಗದಂತೆ ಉಂಡೆ ಕಟ್ಟಿಕೊಳ್ಳಬೇಕು.
 • 3. ಸಕ್ಕರೆ ಪಾಕವನ್ನು ದೊಡ್ಡ/ವಿಶಾಲವಾದ ಪಾತ್ರೆಯಲ್ಲಿ ಮಾಡಿ. ಇದರಿಂದ ರಸಗುಲ್ಲಾ ಉಂಡೆಯನ್ನು ಬೇಯಿಸಲು ಸುಲಭವಾಗುವುದು.
 • 4. ಮಲೈ/ಹಾಲನ್ನು ದೊಡ್ಡ/ವಿಶಾಲವಾದ ಪಾತ್ರೆಯಲ್ಲಿ ಬಿಸಿ ಮಾಡಿ. ಇದರಿಂದ ರಸಗುಲ್ಲಾ ಮಲೈಅನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯವಾಗುವುದು.
Nutritional Information
 • ಸರ್ವಿಂಗ್ ಸೈಜ್ - 1 ಮಲೈ
 • ಕ್ಯಾಲೋರಿ - 188 ಕ್ಯಾಲ್
 • ಫ್ಯಾಟ್ - 2.9 ಗ್ರಾಂ.
 • ಪ್ರೋಟೀನ್ - 2.5 ಗ್ರಾಂ.
 • ಕಾರ್ಬೋಹೈಡ್ರೇಟ್ - 39.4 ಗ್ರಾಂ.
 • ಸಕ್ಕರೆ - 39 ಗ್ರಾಂ.
 • ಫೈಬರ್ - 0.2 ಗ್ರಾಂ.

ಹಂತ ಹಂತವಾದ ಚಿತ್ರವಿವರಣೆ

1. ಒಂದು ಪಾತ್ರೆಯಲ್ಲಿ ಒಂದು ಲೀಟರ್ ಹಾಲನ್ನು ಹಾಕಿ ಬಿಸಿ ಮಾಡಿ.

rasmalai recipe

2. ಹಾಲು ಕುದಿಯುತ್ತಲೇ ಅರ್ಧದಷ್ಟು ಪ್ರಮಾಣಕ್ಕೆ ಕುಗ್ಗಲು ಮುಚ್ಚಳವನ್ನು ಮುಚ್ಚಿ, 7-10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬತ್ತಲು ಬಿಡಿ.

rasmalai recipe
rasmalai recipe

3. ಮುಚ್ಚಳವನ್ನು ತೆಗೆದು, ಮಲೈ ತಳ ಹಿಡಿಯದಂತೆ ಚೆನ್ನಾಗಿ ಕಲುಕಿ.

rasmalai recipe

4. ಕೇಸರಿ ಎಳೆಯಯನ್ನು ಹಾಕಿ ಪುನಃ ಕಲುಕಿ.

rasmalai recipe
rasmalai recipe

5. 6 ಟೇಬಲ್ ಚಮಚ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಕರಗುವವರೆಗೂ ಚೆನ್ನಾಗಿ ಕದಡುತ್ತಿರಿ.

rasmalai recipe
rasmalai recipe

6. ಪುನಃ ಮುಚ್ಚಳವನ್ನು ಮುಚ್ಚಿ, 5 ನಿಮಿಷ ಕುದಿಯಲು ಬಿಡಿ.

rasmalai recipe

7. ಈ ಮಧ್ಯೆ, ಬಾದಾಮಿಯನ್ನು ತೆಳುವಾದ ಸ್ಲೈಸ್‍ನಂತೆ ಹೆಚ್ಚಿಕೊಳ್ಳಿ.

rasmalai recipe
rasmalai recipe

8. ಮುಚ್ಚಳವನ್ನು ತೆಗೆದು ಚೆನ್ನಾಗಿ ಕಲುಕಿ. ಹೀಗೆ ಮಾಡುವುದರಿಂದ ಮಲೈ ಪಾತ್ರೆಯ ಸುತ್ತ ಮತ್ತು ತಳ ಹಿಡಿಯದು.

rasmalai recipe
rasmalai recipe

9. 1,1/2 ಟೇಬಲ್ ಚಮಚ ಹೆಚ್ಚಿದ ಬಾದಾಮಿ ಸ್ಲೈಸ್‍ಗಳನ್ನು ಸೇರಿಸಿ.

rasmalai recipe

10. ಹೆಚ್ಚಿಕೊಂಡ ಪಿಸ್ತವನ್ನು ಸೇರಿಸಿ.

rasmalai recipe

11. ಚೆನ್ನಾಗಿ ಬೆರೆಸಿ ಒಂದೆಡೆ ಇಡಿ.

rasmalai recipe
rasmalai recipe

12. 3/4 ಲೀಟರ್ ಹಾಲನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ.

rasmalai recipe

13. 2-3 ನಿಮಿಷಗಳ ಕಾಲ ಕುದಿಸಿ, ನಂತರ ಉರಿಯನ್ನು ಆರಿಸಿ.

rasmalai recipe
rasmalai recipe

14. ಸಿಟ್ರಿಕ್ ಆಮ್ಲದ ಹರಳನ್ನು ಸೇರಿಸಿ.

rasmalai recipe

15. 2-3 ನಿಮಿಷಗಳ ಕಾಲ ನಿರಂತರವಾಗಿ ಕಲುಕಿರಿ. ಇದರಿಂದ ಹಾಲು ಹೊಸರು ಒಡೆದಂತಾಗುವುದು.

rasmalai recipe

16. ಹಾಲು ಮೊಸರೊಡೆದಂತಾದ ನಂತರ ಐಸ್ ಕ್ಯೂಬ್ಸ್ ಗಳನ್ನು ಸೇರಿಸಿ, ಅವು ಕರಗಲು ಬಿಡಿ.

rasmalai recipe
rasmalai recipe

17. ಒಂದು ಬೌಲ್‍ಅನ್ನು ತೆಗೆದುಕೊಂಡು ಅದರ ಮೇಲೆ ಅಡುಗೆ ಬಟ್ಟೆ/ಟವೆಲ್‍ಅನ್ನು ಇರಿಸಿ.

rasmalai recipe
rasmalai recipe

18. ಮೊಸರೊಡೆದ ಹಾಲನ್ನು ಟವೆಲ್‍ನ ಮೇಲೆ ಸುರಿಯಿರಿ.

rasmalai recipe

19. ಟವೆಲ್‍ನ ಸುತ್ತಲ ತುದಿಯನ್ನು ಹಿಡಿದು ಮೇಲೆತ್ತಿ, ನೀರು ಬಸಿದು ಹೋಗುವಂತೆ ಮಾಡಿ.

rasmalai recipe

20. ನಂತರ ಟವೆಲ್‍ಅನ್ನು ಮೇಲೆ 10 ನಿಮಿಷ ತೂಗಲು ಹಾಕಿ. ಹೀಗೆ ಮಾಡುವುದರಿಂದ ನೀರನ್ನು ಸಂಪೂರ್ಣವಾಗಿ ಬಸಿಯಬಹುದು.

rasmalai recipe

21. ಟವೆಲ್‍ಅನ್ನು ಬಿಚ್ಚಿ ನೀರಿನಿಂದ ಬೇರ್ಪಟ್ಟ ಹೂರಣವನ್ನು ತೆಗೆಯಿರಿ.

rasmalai recipe

22. ಅದನ್ನು ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ.

rasmalai recipe

23. ಕಾರ್ನ್ ಹಿಟ್ಟನ್ನು ಸೇರಿಸಿ ರುಬ್ಬಿ. ಅದು ಕಾಳುಕಾಳಾದ ಮಿಶ್ರಣದಂತೆ ಆಗುವುದು.

rasmalai recipe
rasmalai recipe

24. ಇದನ್ನು ಒಂದು ಪ್ಲೇಟಿಗೆ ವರ್ಗಾಯಿಸಿ.

rasmalai recipe

25. ಅಂಗೈನಲ್ಲಿ ನಾದುವುದರ ಮೂಲಕ ಗಂಟು ಗಂಟಾಗುವುದನ್ನು ತಡೆಯಿರಿ.

rasmalai recipe

26. ಒಂದು ಮೃದುವಾದ ಹಿಟ್ಟಿನ ಮಿಶ್ರಣವಾಗುವಂತೆ ನಾದಿ/ಕಲಸಿ.

rasmalai recipe

27. ಸಮ ಪ್ರಮಾಣದಲ್ಲಿ ಹಿಟ್ಟನ್ನು ತೆಗೆದುಕೊಳ್ಳಿ.

rasmalai recipe

28. ಅದನ್ನು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ.

rasmalai recipe

29. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಕುದಿಯಲು ಇಡಿ.

rasmalai recipe

30. 1/2 ಕಪ್ ಸಕ್ಕರೆಯನ್ನು ಸೇರಿಸಿ.

rasmalai recipe

31. ಮುಚ್ಚಳವನ್ನು ಮುಚ್ಚಿ, ಸಕ್ಕರೆಯು ಕರಗಿ ಪಾಕಬರಲು 4-5 ನಿಮಿಷಗಳಕಾಲ ಕುದಿಯಲು ಬಿಡಿ.

rasmalai recipe

32. ಪಾಕಕ್ಕೆ ಉಂಡೆಯನ್ನು ಸೇರಿಸಿ, ಪುನಃ ಮುಚ್ಚಳವನ್ನು ಮುಚ್ಚಿ.

rasmalai recipe

33. 15 ನಿಮಿಷಗಳ ಕಾಲ ಬೇಯಲು ಬಿಡಿ.

rasmalai recipe

34. ಗುಲಾಬಿ ನೀರನ್ನು ಸೇರಿಸಿ, 10 ನಿಮಿಷ ಆರಲು ಬಿಡಿ.

rasmalai recipe
rasmalai recipe

35. ಮಾಡಿಕೊಂಡ ಮಲೈ/ಹಾಲನ್ನು ಪುನಃ ಬಿಸಿಮಾಡಲು ಇಡಿ.

rasmalai recipe

36. ರಸಗುಲ್ಲವನ್ನು ಮಲೈ/ಹಾಲಿನಲ್ಲಿ ಹಾಕಿ.

rasmalai recipe

37. ದೊಡ್ಡ ಉರಿಯಲ್ಲಿ 2-3 ನಿಮಿಷ ಕುದಿಯಲು ಬಿಡಿ.

rasmalai recipe

38. ಇದನ್ನು ಒಂದು ಬೌಲ್‍ಗೆ ವರ್ಗಾಯಿಸಿ.

rasmalai recipe

39. 10 ನಿಮಿಷಗಳ ಕಾಲ ಆರಲು ಬಿಡಿ.

rasmalai recipe

40. ಕಡಿಮೆ ಎಂದರೂ 2 ಗಂಟೆಗಳ ಕಾಲ ಫ್ರಿಜ್‍ನಲ್ಲಿ ಇಡಿ.

rasmalai recipe

41. ತಂಪು ತಂಪಾಗಿರುವಾಗಲೇ ಸವಿಯಲು ನೀಡಿ.

rasmalai recipe
[ 4.5 of 5 - 103 Users]
Story first published: Monday, September 25, 2017, 16:57 [IST]
Subscribe Newsletter