Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗಾಂಧೀಜಿಗೆ ಪ್ರಿಯವಾದ ಅಡುಗೆ- ದಮ್ ಆಲೂ

ಬೇಕಾಗುವ ಸಾಮಾಗ್ರಿಗಳು:
* ಅರ್ಧ ಕೆಜಿ ಆಲೂಗೆಡ್ಡೆ
* ಮೂರು ಮುಕ್ಕಾಲು ಕಪ್ ನೀರು
* ರುಚಿಗೆ ತಕ್ಕ ಉಪ್ಪು
* ತುಪ್ಪ ಅಥವಾ ಎಣ್ಣೆ
* ಒಂದು ಈರುಳ್ಳಿ
* ಒಂದು ಟೊಮೆಟೊ (ಪೇಸ್ಟ್)
* ಒಂದು ಕಪ್ ಮೊಸರು
* 4 ಚಮಚ ಬಿಸಿ ನೀರು
* 1 ಹಸಿಮೆಣಸಿನ ಕಾಯಿ ( ಅದರ ಬೀಜ ತೆಗೆದು ಕತ್ತರಿಸಿರಬೇಕು)
* 1 ಚಮಚ ಗರಂ ಮಸಾಲ
ಖಾರಕ್ಕೆ:
* 4 ಬೆಳ್ಳುಳ್ಳಿ ಎಸಳು
* 6-8 ಕಾಳು ಮೆಣಸು
* 4 ಹಸಿ ಏಲಕ್ಕಿ
* 1 ಒಣ ಏಲಕ್ಕಿ
* ಚಕ್ಕೆ
ಮಸಾಲೆ ಪೇಸ್ಟ್:
* ಒಂದು ದೊಡ್ಡ ಈರುಳ್ಳಿ
* 10 ಬೆಳ್ಳುಳ್ಳಿ ಎಸಳು
* ಕರಿಮೆಣಸಿನ ಕಾಳು
* 1 ಚಮಚ ಗಸೆಗಸೆ
* 1 ಚಮಚ ಕೊತ್ತಂಬರಿ ಬೀಜ
* 1 ಚಮಚ ಜೀರಿಗೆ
* 2 ಒಣ ಮೆಣಸು
* 1 ಚಮಚ ಅರಿಶಿಣ
* ಚಿಟಿಕೆಯಷ್ಟು ಜಾಯಿಕಾಯಿ
ತಯಾರಿಸುವ ವಿಧಾನ:
1. ಆಲೂಗೆಡ್ಡೆಯ ಸಿಪ್ಪೆ ಸುಲಿದು, ಅದರ ಮೇಲ್ಬಾಗವನ್ನು ಫೋರ್ಕ್ ನಿಂದ ಗೀರಿ ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ಹಾಕಿ 2 ಗಂಟೆ ಕಾಲ ಇಡಬೇಕು.
2. ಈರುಳ್ಳಿ, ಬೆಳ್ಳುಳ್ಳಿ, ಕರಿಮೆಣಸಿನಕಾಳು, ಗಸೆಗಸೆ, ಕೊತ್ತಂಬರಿ ಬೀಜ, ಜೀರಿಗೆ, ಒಣ ಮೆಣಸು, ಅರಿಶಿಣ, ಜಾಯಿಕಾಯಿ ಹಾಕಿ ಪೇಸ್ಟ್ ಮಾಡಿ ಇಡಬೇಕು.
3. ನಂತರ ಆಲೂಗೆಡ್ಡೆಯನ್ನು ನೀರಿನಿಂದ ತೆಗೆದು ಒಂದು ಪಾತ್ರೆಯಲ್ಲಿ ಇಡಬೇಕು.
4. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಎಲ್ಲಾ ಖಾರ ಪದಾರ್ಥಗಳನ್ನು ಮತ್ತು ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಟೊಮೆಟೊ ಪೇಸ್ಟ್ ಮತ್ತು ಮಸಾಲೆ ಪೇಸ್ಟ್ ಹಾಕಿ 2 ನಿಮಿಷ ಬಿಸಿ ಮಾಡಿ ನಂತರ ಮೊಸರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ 10 ನಿಮಿಷ ಕಾಯಿಸಬೇಕು.
5. ನಂತರ ಆಲೂಗೆಡ್ಡೆ ಮತ್ತು ಬಿಸಿ ನೀರು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಬೇಕು. ನಂತರ ಇದರ ಮೇಲೆ ಕಾಳು ಮೆಣಸಿನ ಪುಡಿ ಹಾಕಿ ಸ್ವಲ್ಪ ಹೊತ್ತು ಬಿಸಿ ಮಾಡಿದರೆ ದಮ್ ಆಲೂ ರೆಡಿ.



Click it and Unblock the Notifications
