Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ತಂಪು ತಂಪು ಪಾನೀಯಗಳು !
ಮನೆಯಲ್ಲೇ ತಯಾರಿಸಬಹುದಾದ ತಣ್ಣನೆಯ ತಂಪು ಪಾನೀಯಗಳನ್ನು ಮಾಡುವ ವಿಧಾನ ಓದಿಕೊಳ್ಳಿ.
*ವಸಂತಿ ಮಂಜುನಾಥ್
ಶುಂಠಿ ಲಿಂಬೂ
ಶುಂಠಿಯ ಕೆಲವು ತಾಜಾ ತುಂಡುಗಳನ್ನು ತೆಗೆದುಕೊಂಡು ಸ್ಲೈಸ್ ಮಾಡಿ ಮಿಕ್ಸಿಯಲ್ಲಿ ರುಬ್ಬಿ ರಸ ತೆಗೆಯಿರಿ. ನಂತರ ಲಿಂಬೂ ರಸವನ್ನು ಸೇರಿಸಿ ಚಿಟಿಕೆ ಉಪ್ಪು ಸಕ್ಕರೆ ಹಾಕಿ ಫ್ರಿಜ್‌ನಲ್ಲಿರಿಸಿರಿ. ಬೇಕೆನಿಸಿದಾಗ ಜ್ಯೂಸ್ ತಯಾರಿಸಿ ಕುಡಿಯಿರಿ. ಫ್ರಿಜ್ ಇಲ್ಲದವರು ಕುದಿಸಿ ಪಾಕ ಮಾಡಿ ಇಡಬಹುದು. ಕಬ್ಬಿನಹಾಲಿನ ರುಚಿಯ ಜ್ಯೂಸ್ ತುಂಬಾ ರುಚಿಯಾಗಿದ್ದು ಜೀರ್ಣಕಾರಕವಾಗಿರುತ್ತದೆ.
ಕೆನೆಮೊಸರಿನ ಲಸ್ಸಿ
ಕೆನೆಕೆನೆಯಾದ ಎರಡು ಲೋಟ ಮೊಸರಿಗೆ ಸಕ್ಕರೆ, ಚಿಟಿಕೆ ಉಪ್ಪು ಸೇರಿಸಿ; ಚೆನ್ನಾಗಿ ಕದಡಿ ಅಥವಾ ಒಂದು ಸುತ್ತು ಮಜ್ಜಿಗೆ ಕಡೆಯುವಂತೆ ಒಂದೆರಡು ಬಾರಿ ಕಡೆಯಿರಿ. 1/2 ಲೋಟ ತಾಜಾ ಹಾಲು ಸೇರಿಸಿ ಫ್ರಿಜ್‌ನಲ್ಲಿಡಿ. ಬಾಯಾರಿ ಹಸಿವಾದಾಗ ಕುಡಿದರೆ ಹೊಟ್ಟೆ ತುಂಬಾ ತಂಪೆನಿಸಿ ತಣ್ಣಗಾಗುತ್ತದೆ. ಇದು ಮಕ್ಕಳಿಗೆ ತುಂಬಾ ಒಳ್ಳೆಯದು.
ಪುದಿನಾ
ತಾಜಾ ಪುದಿನಾ ಎಲೆ ಒಂದು ಹಿಡಿ. ಕಾಳು ಮೆಣಸು ಪುಡಿ 1 ಟೀ ಸ್ಪೂನ್ ಸೇರಿಸಿ ಮಿಕ್ಸಿ ಮಾಡಿ, ನೀರು ಸೇರಿಸಿ ಸೋಸಿ, ಚಿಟಿಕೆ ಉಪ್ಪು ಲಿಂಬೆರಸ ಸೇರಿಸಿ ಫ್ರಿಜ್‌ನಲ್ಲಿರಿಸಿ ಕುಡಿಯಿರಿ. ಅತಿಯಾದ ಬಾಯಾರಿಕೆ ನೀಗುತ್ತದಲ್ಲದೆ ಕುಡಿಯಲು ಹಿತಕರವಾಗಿರುತ್ತದೆ.
ಬೆರೆಸಿದ ಮಜ್ಜಿಗೆಸ್ವಲ್ಪ ಹುಳಿಯಿರುವ ಮಜ್ಜಿಗೆಗೆ ಚೆನ್ನಾಗಿ ನೀರು ಸೇರಿಸಿ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಒಂದು ಚೂರು ಹಸಿ ಶುಂಠಿ, 1/2 ಹಸಿ ಮೆಣಸು, ಕರಿಬೇವು ಎಲೆ, ಕೊತ್ತುಂಬರಿ ಸೊಪ್ಪು ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಮಜ್ಜಿಗೆಯಲ್ಲಿ ಹಾಕಿರಿ. ಬೇಕಿದ್ದಲ್ಲಿ ಇಂಗನ್ನು ಸೇರಿಸಬಹುದು. ರುಚಿಗೆ 1/2 ಟೀ ಸ್ಪೂನ್ ಲಿಂಬೆರಸ ಸೇರಿಸಿ. ಫ್ರಿಜ್‌ನಲ್ಲಿರಿಸಿರಿ. ಸಿಹಿಮುಟ್ಟದ ಅತಿಥಿಗಳಿಗೆ ಇದು ಒಳ್ಳೆಯ ಪಾನೀಯ. ಬಾಯಾರಿಕೆ ನೀಗುತ್ತದೆ. ಅಲ್ಲದೆ ಹಸಿವೂ ಚೆನ್ನಾಗಿ ಆಗುತ್ತದೆ.



Click it and Unblock the Notifications
