Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಇಡ್ಲಿಸಾಂಬಾರ್
ಬಿಸಿಬಿಸಿ ಇಡ್ಲಿ ಅಥವಾ ವಡೆಗೆ ಸಾಂಬಾರ್ ಇದ್ದರೇನೇ ಚೆಂದ. ಚಟ್ನಿ ಅಷ್ಟು ಸರಿಬರುವುದಿಲ್ಲ. ಹೋಟಲ್ನ ಇಡ್ಲಿಸಾಂಬಾರ್ ತಿಂದು ಬೇಸರವಾಗಿದ್ದರೆ. ಇಡ್ಲಿ ಸಾಂಬಾರನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು.
ಬೇಕಾಗುವ ಸಾಮಗ್ರಿ :
ಒಣ ಕೊಬ್ಬರಿ : 1 ಗಿಟುಕು
ಒಣ ಮೆಣಸಿನ ಕಾಯಿ : 150 ಗ್ರಾಂ
ಕೊತ್ತಂಬರಿ ಬೀಜ : 100 ಗ್ರಾಂ
ಕಡಲೆ ಬೇಳೆ : 50 ಗ್ರಾಂ
ಉದ್ದಿನ ಬೇಳೆ : 25 ಗ್ರಾಂ
ಚಕ್ಕೆ : ಬೆರಳುದ್ದದ ತುಂಡು
ಮೆಣಸು : 2 ಟೀ ಚಮಚ
ಹಿಂಗು : ಕಡಲೆ ಕಾಳು ಗಾತ್ರ
ಉಪ್ಪು : ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
ಮೇಲಿನ ಎಲ್ಲಾ ಪದಾರ್ಥಗಳನ್ನೂ ಹದವಾಗಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ, ಅಲ್ಲಿಗೆ ಇಡ್ಡಿಸಾಂಬಾರಿನ ಪುಡಿ ರೆಡಿ. ಈಗ ಸ್ವಲ್ಪ ತೊಗರಿ ಬೇಳೆಯನ್ನು ನೀರಿನಲ್ಲಿ ಬೇಯಿಸಿ. ಅದಕ್ಕೆ ಇಡ್ಲಿಸಾಂಬಾರಿನ ಪುಡಿ, ಹುರಿದ ಈರುಳ್ಳಿ, ನುಣ್ಣಗೆ ಅರೆದ ತೆಂಗಿನ ಕಾಯಿಯನ್ನು ಬೆರೆಸಿ ಬೇಳೆ ಕಟ್ಟಿನೊಂದಿಗೆ ಕುದಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದರೆ ಇಡ್ಲಿಸಾಂಬಾರ್ ತಯಾರಾಗುತ್ತೆ. ಇಡ್ಲಿಸಾಂಬಾರ್ನ ರುಚಿ ಹೆಚ್ಚಲು ಬೇಳೆಯೊಂದಿಗೆ ಈರುಳ್ಳಿ, ಬದನೆಕಾಯಿ, ಮಂಗಳೂರು ಸೌತೆಕಾಯಿ ಇತ್ಯಾದಿ ತರಕಾರಿಗಳನ್ನು ಬಳಸಬಹುದು. ಇಡ್ಲಿ, ವಡೆಗೆ ಸಾಂಬಾರ್ ಬೆರೆಸಿ ತಿನ್ನಲು ಬಲು ರುಚಿಯಾಗಿರುತ್ತದೆ.
(ದಟ್ಸ್ಕನ್ನಡ ಪಾಕಶಾಲೆ)



Click it and Unblock the Notifications
