Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಪುಷ್ಟಿದಾಯಕ ಬಿಸಿ ಬಿಸಿ ಪಾಲಾಕ್ ಸೂಪ್

ಪಾಲಾಕ್ ಸೊಪ್ಪಿನ ಸೂಪ್ ನಿಂದ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಜೀರ್ಣ ಕ್ರಿಯೆ ಸಮಸ್ಯೆ ನಿವಾರಣೆಗೊಳ್ಳುವುದರೊಂದಿಗೆ ವೈರಲ್ ಸೋಂಕುಗಳಿಂದ ದೂರವಿರಲು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸಿಕೊಳ್ಳಬಹುದು.
ಪಾಲಾಕ್ ಸೂಪ್ ಗೆ ಏನೇನು ಬೇಕು?
* 2 ಕಪ್ ಪಾಲಾಕ್
* 1 ಈರುಳ್ಳಿ (ಕತ್ತರಿಸಿದ್ದು)
* 1 ಚಮಚ ಬೆಳ್ಳುಳ್ಳಿ ಪೇಸ್ಟ್
* 2-3 ಚಮಚ ಬೆಣ್ಣೆ
* 1 1/2 ಕಪ್ ಕೆನೆ
* ಉಪ್ಪು, ಮೆಣಸಿನ ಪುಡಿ, ಎಣ್ಣೆ
ಪಾಲಾಕ್ ಸೂಪ್ ತಯಾರಿಸುವ ವಿಧಾನ:
1. 5 ನಿಮಿಷ ಪಾಲಾಕ್ ಸೊಪ್ಪನ್ನು ಬಿಸಿ ನೀರಿನಲ್ಲಿ ನೆನೆಸಿ ಶುದ್ಧಗೊಳಿಸಬೇಕು. ಸೊಪ್ಪನ್ನು ಬೇಯಿಸಿ ರುಬ್ಬಿಕೊಳ್ಳಬೇಕು. (ಅವಶ್ಯವಿದ್ದರೆ ಸ್ವಲ್ಪವೇ ನೀರು ಬೆರೆಸಬಹುದು)
2. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಅದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಪೇಸ್ಟನ್ನು ಹುರಿದು ಒಂದು ನಿಮಿಷ ತಿರುಗಿಸಬೇಕು. ನಂತರ ಉಪ್ಪು ಮತ್ತು ಮೆಣಸಿನ ಪುಡಿಯನ್ನು ಬೆರೆಸಬೇಕು.
3. ಈಗ ರುಬ್ಬಿದ ಪಾಲಾಕ್ ಮಿಶ್ರಣ ಮತ್ತು ಕೆನೆಯನ್ನು ಹಾಕಿ 4-5 ನಿಮಿಷ ಬೇಯಿಸಬೇಕು. ನಿಮ್ಮ ಅವಶ್ಯಕತೆಗೆ ತಕ್ಕಂತೆ ನೀರನ್ನು ಬೆರೆಸಿ ಬೇಯಲು ಬಿಡಬೇಕು. ಸೂಪ್ ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ಒಲೆಯನ್ನು ಆರಿಸಬೇಕು.
ಈಗ ಪಾಲಾಕ್ ಸೂಪ್ ತಿನ್ನಲು ಸಿದ್ಧವಾಗಿದೆ. ಸೂಪ್ ಮೇಲೆ ಸ್ವಲ್ಪ ಕೆನೆ ಹಾಕಿ ಕುಡಿಯಬಹುದು. ಬ್ರೆಡ್ ನೊಂದಿಗೆ ಅಥವಾ ಚಪಾತಿಯೊಂದಿಗೂ ಬೆರೆಸಿ ತಿನ್ನಬಹುದು.



Click it and Unblock the Notifications
