Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ರುಚಿಕಟ್ಟಾದ ಗೊಡ್ಡು ಸಾರನ್ನು 5 ನಿಮಿಷದಲ್ಲಿ ಮಾಡಿ
Rasam
oi-Staff
By * ಸಾವಿತ್ರಿ ಪಿ.ಎಸ್.
ಬೇಕಾದ ಪದಾರ್ಥಗಳು :
ಹುಣಸೇ ಹಣ್ಣು (ನಿಂಬೆ ಹೋಳಿನಷ್ಟು ಚಿಕ್ಕದಾದ ಬಟ್ಟಲು ತುಂಬುವಷ್ಟು)
ಸಾರಿನ ಪುಡಿ- 2 ಟೀ ಚಮಚ
ತುಪ್ಪ- 2 ಟೀ ಚಮಚ
ಒಂದಿಷ್ಟು ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ ಹಾಗೂ ರುಚಿಗೆ ತಕ್ಕಷ್ಟು ಕರಿಬೇವು, ಜೀರಿಗೆ, ಇಂಗು, ಬೆಲ್ಲ, ಉಪ್ಪು.
ಮಾಡುವುದು ಹೀಗೆ-
ಹುಣಸೇಹಣ್ಣನ್ನು ನೀರಲ್ಲಿ ನೆನೆಸಿ ಹಿಂಡಿ. ಒಲೆಯ ಮೇಲೆ ಚಿಕ್ಕ ಪಾತ್ರೆಯಲ್ಲಿ ನೀರಿಟ್ಟು, ಹುಣಸೇನೀರನ್ನು ಸೇರಿಸಿ. ಸಾರಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ಕೊತ್ತಂಬರಿ ಸೊಪ್ಪು ಹಾಕಿ ಕುದಿಯಲು ಬಿಡಿ. ಬೇಕಾದರೆ ಅರ್ಧ ಚಮಚದಷ್ಟು ಅರಿಶಿನ ಪುಡಿಯನ್ನೂ ಹಾಕಬಹುದು. ಮಧ್ಯಮ ಉರಿಯಲ್ಲಿ ಕುದಿಸಿದರೆ ರುಚಿ ಹೆಚ್ಚು.
ಆಮೇಲೆ ಒಗ್ಗರಣೆ ಪದಾರ್ಥಗಳನ್ನು ಉಪಯೋಗಿಸಿ ತುಪ್ಪದ ಒಗ್ಗರಣೆ ಹಾಕಿ, ಸಾಸಿವೆ ಚಿಟಿಚಿಟಿ ಎನ್ನಲಿ. ಐದೇ ನಿಮಿಷಕ್ಕೆ ಗೊಡ್ಡು ಸಾರು ತಯಾರ್. ಇದನ್ನು ಅನ್ನದ ಜೊತೆ ಕಲಸಿಯೂ ಹೊಡೆಯಬಹುದು, ಅನುಭವಿಸುತ್ತ ಕುಡಿಯಲೂಬಹುದು. ಆರೋಗ್ಯಕ್ಕೆ ಇದು ಒಳ್ಳೆಯದು.
Comments
English summary
Hunase Saru Athava Goddu Saru | Sweet and sour rasam | ಗೊಡ್ಡು ಸಾರು
Story first published: Wednesday, April 5, 2006, 16:50 [IST]
Other articles published on Apr 5, 2006



Click it and Unblock the Notifications
