Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸರಿಸಾಟಿ ಯಾವುದಿಲ್ಲ ಈ ಟೊಮೆಟೊ ಸಾರಿಗೆ

ವಿಟಮಿನ್, ಮಿನರಲ್, ನಾರಿನಂಶ ಹೇರಳವಾಗಿರುವ ಈ ಟೊಮೆಟೊ ತ್ವಚೆಗೂ ಕಾಂತಿ ನೀಡುತ್ತೆ. ಟೊಮೆಟೊ ಬಳಸಿಕೊಂಡು ರುಚಿಕರವಾದ ಸಾರು ಅಥವಾ ರಸಂ ಅನ್ನು ಹೇಗೆ ತಯಾರಿಸುವುದು ಎಂದು ಈಗ ತಿಳಿಯೋಣ.
ಟೊಮೆಟೊ ಸಾರಿಗೆ ಬೇಕಾಗುವ ಪದಾರ್ಥ:
* 2 ಟೊಮೆಟೊ
* 2 ಚಮಚ ರಸಂ ಪುಡಿ
* 1/2 ಕರಿಬೇವು, 3 ಬೆಳ್ಳುಳ್ಳಿ ಎಸಳು
* ಸ್ವಲ್ಪ ಬೆಲ್ಲ, ರುಚಿಗೆ ಉಪ್ಪು
* 1 ಕಪ್ ತೊಗರಿ ಬೇಳೆ
* ಅರಿಶಿನ, ಎಣ್ಣೆ, ಸ್ವಲ್ಪ ಇಂಗು
* 1 ಚಮಚ ಸಾಸಿವೆ
* 3-4 ಹುಣಸೇಹಣ್ಣಿನ ರಸ
* ಕೊತ್ತಂಬರಿ
ಟೊಮೆಟೊ ಸಾರು ಅಥವಾ ರಸಂ ಮಾಡುವುದು ಹೇಗೆ?
* ತೊಗರಿ ಬೇಳೆಗೆ ಚಿಟಿಕೆ ಅರಿಶಿನ, ಬೆಳ್ಳುಳ್ಳಿ ಎಸಳು ಮತ್ತು ಒಂದೆರಡು ಹನಿ ಎಣ್ಣೆ ಬೆರೆಸಿ ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಬೇಕು.
* ಒಂದು ಪಾತ್ರೆಗೆ ಒಂದು ಗ್ಲಾಸ್ ನೀರು ಹಾಕಿ ಕತ್ತರಿಸಿದ ಟೊಮೆಟೊ, ರಸಂ ಪುಡಿ, ಉಪ್ಪು, ಹುಣಸೆ ರಸ, ಕರಿಬೇವು, ಕೊತ್ತಂಬರಿ, ಬೆಲ್ಲ ಎಲ್ಲವನ್ನೂ ಸೇರಿಸಿ ಇದು ಚೆನ್ನಾಗಿ ಕುದಿಯುವವರೆಗೂ ಕಾಯಬೇಕು.
* ನಂತರ ಬೆಂದ ಈ ಮಿಶ್ರಣಕ್ಕೆ ಚೆನ್ನಾಗಿ ಬೆಂದ ತೊಗರಿ ಬೇಳೆ ಬೆರೆಸಿ ಚೆನ್ನಾಗಿ ಮಸೆದು ತಿರುಗಿಸಿ ಸಣ್ಣನೆಯ ಕಾವಿನಲ್ಲಿ ಒಲೆಯ ಮೇಲಿಡಬೇಕು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಸಾರಿಗೆ ಇನ್ನೂ ನೀರನ್ನು ಬೆರೆಸಿಕೊಳ್ಳಬಹುದು.
* ಈಗ ಚಿಕ್ಕ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಮತ್ತು ಇಂಗಿನಿಂದ ಒಗ್ಗರಣೆ ಹಾಕಿಕೊಂಡು ಸಾರಿಗೆ ಬೆರೆಸಿ ಕುದಿಸಬೇಕು.
ಈಗ ರುಚಿಕರ ಮತ್ತು ಮಸಾಲೆ ಭರಿತವಾದ ಟೊಮೆಟೊ ಸಾರು ತಿನ್ನಲು ಸಿದ್ಧವಾಗಿದೆ. ಅನ್ನದೊಂದಿಗೆ ತುಪ್ಪ ಬೆರೆಸಿ ಟೊಮೆಟೊ ಸಾರಿನ ರುಚಿ ಸವಿಯಬಹುದು.



Click it and Unblock the Notifications
