Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಸಿಡಿಟಿಗೆ ಸುದರ್ಶನ ಚಕ್ರ ಕೋಕಂ ಸಾರು
ತಯಾರಿಸಲು ಬೇಕಾದ ಸಮಯ : 30 ರಿಂದ 45 ನಿಮಿಷ
ತಯಾರಿಸಲು ಬೇಕಾದ ಪದಾರ್ಥಗಳು:
12 ರಿಂದ 15 ಕೋಕಂಗಳು
1 ಕಪ್ ಬಿಸಿನೀರು
3 ರಿಂದ 4 ಗ್ಲಾಸ್ ತಣ್ಣೀರು ಅಥವಾ ತಿಳಿಯಾದ ತೆಂಗಿನ ಕಾಯಿ ರಸ
ಸ್ವಲ್ಪ ಉಪ್ಪು
1 ಟೀ ಚಮಚ ಸಕ್ಕರೆ ಅಥವಾ ಸ್ವಲ್ಪ ಬೆಲ್ಲ
ಒಗ್ಗರಣೆಗೆ : ಎಣ್ಣೆ, ಚಿಟಿಕೆಯಷ್ಟು ಇಂಗು,ಜೀರಿಗೆ, ಸಾಸಿವೆ
* ಕೋಕಂ ಅನ್ನು 1 ಕಪ್ ಬಿಸಿನೀರಿನಲ್ಲಿ ಅರ್ಧ ಗಂಟೆ ಕಾಲ ನೆನಸಿಡಿ.
* ನೀರಿನ ಬಣ್ಣ ಕೆಂಪಗಾಗುವವರೆಗೂ ನಂತರಕೋಕಂ ಹಣ್ಣನ್ನು ಮೆದುವಾಗಿ ಹಿಚುಕಿರಿ.
* ರಕ್ತವರ್ಣದ ಮಿಶ್ರಣವನ್ನು ಚೆನ್ನಾಗಿ ಕಲಕಿರಿ.
* ನಂತರ 3 ರಿಂದ 4 ಗ್ಲಾಸ್ ತಣ್ಣೀರು ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಕಲಕಿ.
* ಮಿಶ್ರಣಕ್ಕ್ಕೆ ಜೀರಿಗೆ , ಇಂಗಿನ ಒಗ್ಗರಣೆ ಹಾಕಿ, ತಾಜಾ ಕರಿಬೇವು ಉದುರಿಸಿ.
ಸೂಚನೆ: ನೀರಿನ ಬದಲಿಗೆ ತೆಂಗಿನ ಹಾಲನ್ನು ಬಳಸಿದರೆ ಒಂದೆರಡು ಬೆಳ್ಳುಳ್ಳಿ ಎಸೆಳುಗಳನ್ನು ಬಳಸಬೇಕು. ತೆಂಗಿನ ಹಾಲಿನ ಜೊತೆ ಬೆಳ್ಳುಳ್ಳಿ ಎಸೆಳುಗಳನ್ನು ಅರೆದುಕೊಂಡು ನಂತರ ಕೋಕಂ ಮಿಶ್ರಣಕ್ಕೆ ಬೆರೆಸಬಹುದು. ತೆಂಗಿನ ಹಾಲು ಬಳಸಿದರೆ ಅಗತ್ಯವಿದ್ದರೆ ಮಾತ್ರ ಸಕ್ಕರೆ ಬಳಸಿ. ಕೋಕಂ ಸಾರು ಹಾಗೆ ಕುಡಿಯಲೂ ಬಹುದು ಅಥವಾ ಅನ್ನದೊಡನೆ ಬೆರೆಸಿ ತಿನ್ನಬಹುದು.



Click it and Unblock the Notifications

