Latest Updates
-
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ! -
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್! -
ಮುರಾಸು ಚಂಡಮಾರುತದ ಎಚ್ಚರಿಕೆ: ಚೆನ್ನೈ, ತಿರುವಳ್ಳೂರಿನಲ್ಲಿ ಶಾಲೆಗಳಿಗೆ ರಜೆ, ಪೋಷಕರು ಮತ್ತು ಪ್ರಯಾಣಿಕರು ತಿಳಿಯಲೇಬೇಕಾದ ವಿಷಯಗಳು
ಅಗಣಿತಗುಣಗಳಗಣಿ ಪಲಕನಸೊಪ್ಪಿನಸಾರು

ಪಾಲಕ್ ಬಗ್ಗೆ ಒಂದು ಪುಸ್ತಕನೇ ಬರೀಬಹುದು. ಯಾಕೆಂದರೆ ಪಾಲಕ್ ಮಹಾತ್ಮೆ ಇಷ್ಟಕ್ಕೆ ಮುಗಿಯೋದಿಲ್ಲ. ಹೃದಯದ ಆರೋಗ್ಯಕ್ಕೆ, ಕಣ್ಣಿನ ಆರೋಗ್ಯಕ್ಕೆ ಇದು ಒಳ್ಳೆಯದಂತೆ. ದೃಷ್ಟಿಯು ಹೆಚ್ಚು ತೀಕ್ಷ್ಣವಾಗುವುದರಿಂದ ಇದನ್ನು ವಾರಕ್ಕೊಮೆಯಾದರೂ ಏನಾದರೂ ಅಡುಗೆ ಮಾಡಲೇ ಬೇಕು ಅಂತ ನನ್ನ ಕೋರಿಕೆ. ಮಿದುಳು, ಎಲುಬಿನ ಆರೋಗ್ಯಕ್ಕೆ ಸಹಕರಿಸುವುದರಿಂದ ಮಕ್ಕಳಿರುವ ಮನೆಯವರೆಲ್ಲ ಇದನ್ನು ದಿನನಿತ್ಯದ ಅಡುಗೆಗೆ ಉಪಯೋಗಿಸಬಹುದು.
ಸರಿ ಪಾಲಕ್ ನಿಂದ ಸಾಕಷ್ಟು ಬಗೆಯ ಆಹಾರ ತಯಾರಿಸಬಹುದು. ಪಾಲಕ್ ಮುರ್ಗಿ, ಪಾಲಕ್ ದಾಲ್, ತಿಳಿಸಾರು, ಪಾಲಕ್ ಚಟ್ನಿ, ಪಾಲಕ್ ಕರಿ ಮಾಡಬಹುದು. ಇದರಲ್ಲಿ ನನಗೆ ಇಷ್ಟವಾಗೋದು ಪಾಲಕ್ ಕರಿ. ಅದನ್ನು ಮಾಡೋದು ಸಹ ಸುಲಭವೇ. ಅರೇ ನೀವು ಪಾಲಕ್ ಕರಿ ಹೇಗೆ ಮಾಡ್ತಿರಿ ನಮಗೂ ಹೇಳಿಕೊಡಿ ಅಕ್ಕ ಅಂತ ಕೇಳ್ತಿರಿ ಅಂತ ನನಗೊತ್ತು. ಸರಿ ಇನ್ಯಾಕೆ ತಡ ನಿಮ್ಮ ಮನೆಯಲ್ಲಿ ನಾಲ್ಕೈದು ಜನರಿದ್ದಾರೆ ಅಂದುಕೊಳ್ಳೋಣ. ಅಷ್ಟು ಜನರಿಗೆ ಬೇಕಾಗುವಷ್ಟು ಪಾಲಕ್ ಕರಿ ತಯಾರಿಸಿರಿ.
ಏನೆಲ್ಲ ಬೇಕು?
* 200 ಗ್ರಾಂನಷ್ಟು ಪಾಲಕ್ ಸೊಪ್ಪು
* ಹಸಿಮೆಣಸಿನ ಕಾಯಿ ಎರಡು ಮೂರು ಇರಲಿ. ದೊಡ್ಡದಾಗಿದ್ದರೆ ಎರಡೇ ಎರಡು ಸಾಕು.
* ಬೆಳ್ಳುಳ್ಳಿ ಒಂದೆರಡು ಎಸಲು ಇರಲಿ. ಅದನ್ನು ಹಚ್ಚಿಟ್ಟುಕೊಳ್ಳಿರಿ
* ಒಂದು ಈರುಳ್ಳಿ ಮತ್ತು ಒಂದು ಟೊಮೆಟೊವನ್ನು ಕೂಡ ಹಚ್ಚಿಟ್ಟುಕೊಳ್ಳಿ
* ಎರಡು ಚಮಚ ಎಣ್ಣೆ ಮತ್ತು ಒಂದು ಚಮಚ ಸೋಯಾ ಬಿನ್ ಸಾಸ್
* ಅಜಿನೊಮೆಟೊ ಒಂದು ಚಿಟಿಕೆಯಷ್ಟು ಇರಲಿ
* ಚಿಲ್ಲಿ ಸಾಸ್ ಒಂದು ಟೀ ಚಮಚ ಮತ್ತು ಬಿಳಿ ಕಾಳುಮಣಸು ಕಾಲು ಟೀ ಚಮಚದಷ್ಟಿರಲಿ.
ತಯಾರಿಸುವ ವಿಧಾನ
* ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಹಚ್ಚಿಟ್ಟುಕೊಳ್ಳಿ. ಅದನ್ನು ಒಂದೆರಡು ನಿಮಿಷಗಳ ಕಾಲ ಬೆಯಿಸಿ. ಅದರ ನೀರು ತೆಗೆದು ಬೆಂದ ಪಾಲಕ್ ಸೊಪ್ಪನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ರೆಡಿಯಾಗಿಡಿ.
* ಬಾಣಲೆ ಅಥವಾ ಇನ್ಯಾವುದೋ ಪಾತ್ರೆಯನ್ನು ಸ್ಟವ್ ಮೇಲಿಟ್ಟು ಅದಕ್ಕೆ ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಎಲ್ಲವನ್ನೂ ಹಾಕಿ ಚೆನ್ನಾಗಿ ಫ್ರೈ ಮಾಡಿರಿ. ನಂತರ ಟೊಮೆಟೊ ಹಾಕಿ ಚೆನ್ನಾಗಿ ಬೇಯಿಸಿರಿ.
* ಮತ್ತೆ ಅದಕ್ಕೆ ಪಾಲಕ್ ಪೇಸ್ಟ್, ಬಿಳಿ ಮೆಣಸಿನಪುಡಿ, ಅಜಿನೊಮೊಟೊ, ಸೊಯಾ ಸಾಸ್ ಮತ್ತು ಸ್ವಲ್ಪ ನೀರು ಹಾಕಿ ಎರಡು ಮೂರು ನಿಮಿಷ ಕುದಿಸಿ ಕೈಯಾಡಿಸುತ್ತಿರಿ. ಅದಕ್ಕೆ ಒಂದಿಷ್ಟು ತರಕಾರಿ ಮತ್ತು ಸ್ವಲ್ಪ ತೆಂಗಿನ ಹಾಲು ಕೂಡ ಹಾಕಿದರೆ ಇನ್ನಷ್ಟು ಸೂಪರ್ ಆಗಿರುತ್ತದೆ. ಪಾಲಕ್ ಕರಿ ರೆಡಿ. ನಿಮ್ಮ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಬಡಿಸಿರಿ. ಪಾಲಕ್ ಇನ್ನು ಮುಂದೆ ನಿಮ್ಮ ಅಡುಗೆ ಮನೆಯ ಬಾಲ್ಯದ ಗೆಳತಿಯಾಗಲಿ.



Click it and Unblock the Notifications
