Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅಣಬೆ ಟಿಕ್ಕಾ ಮಸಲಾ, ಮಾಡಿ ನೋಡಿ ಒಂದ್ಸಲ

ಬೇಕಾಗುವ ಸಾಮಾಗ್ರಿಗಳು:
ಟಿಕ್ಕಾ ಮಸಾಲೆಗೆ:
* ವನಸ್ಪತಿ 2 ಚಮಚ
* 1/2 ಚಮಚ ಸಾಸಿವೆ
* ಕತ್ತರಿಸಿದ ದೊಡ್ಡ ಈರುಳ್ಳಿ ಒಂದು
* ಹಣ್ಣಾದ ಟೊಮೆಟೊ 3
* ಕೊತ್ತಂಬರಿ ಪುಡಿ 1/2 ಚಮಚ
* ಜೀರಿಗೆ ಪುಡಿ 1/2 ಚಮಚ
* ಅರಿಶಿಣ 1/4 ಚಮಚ
* 1/2 ಚಮಚ ಮೆಣಸಿನ ಪುಡಿ
* ಮೆಂತೆ ಕಾಳು 1/2 ಚಮಚ
* ರುಚಿಗೆ ತಕ್ಕ ಉಪ್ಪು
* ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಅಣಬೆಗೆ ಮಸಾಲೆ:
* ಒಂದು ಪ್ಯಾಕೆಟ್ ಅಣಬೆ (12-15 ಅಣಬೆ)
* ಕರಿಮೆಣಸಿನ ಪುಡಿ 1 ಚಮಚ
* 1/4 ಚಮಚ ಅರಿಶಿಣ
* 1/4 ಚಮಚ ಕೆಂಪು ಮೆಣಸಿನ ಪುಡಿ
* 1/2 ಕಪ್ ಮೊಸರು
* ಎಣ್ಣೆ 1 ಚಮಚ
ತಯಾರಿಸುವ ವಿಧಾನ:
1. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಬೇಕು. ಅದಕ್ಕೆ ಸಾಸಿವೆಯನ್ನು ಹಾಕಿದಾಗ ಚಟಾಪಟಾ ಶಬ್ದ ಬರುವುದು, ಈಗ ಮೆಂತೆ ಕಾಳು ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
2. ಈಗ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಬಿಸಿಮಾಡಬೇಕು.ಈಗ ಟೊಮೆಟೊವನ್ನು ಹಾಕಿ ಅದು ಬಿಸಿಯಾದಾಗ ಸೌಟ್ ನಿಂದ ಮೆತ್ತಗೆ ಮಾಡಿ ಪೇಸ್ಟ್ ರೀತಿ ಮಾಡಬೇಕು.
3. ನಂತರ ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಮತ್ತು ಕೆಂಪು ಮೆಣಸಿನ ಪುಡಿ, ಅರಿಶಿಣ ಹಾಕಿ ಮಿಶ್ರಣವನ್ನು ಕುದಿಸಬೇಕು.ಈಗ ಮಿಶ್ರಣ ತುಂಬಾ ಗಟ್ಟಿಯಾದರೆ 1/2 ಲೋಟ ನೀರು ಹಾಕಿ ಕುದಿಸಬೇಕು.
4. ಈಗ ಅಣಬೆಯನ್ನು ಶುದ್ಧ ಮಾಡಿ ಚಿಕ್ಕ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಅರಿಶಿಣ ಕರಿಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ, ಮೊಸರು, ಸ್ವಲ್ಪ ಉಪ್ಪು ಹಾಕಿ ಮಿಶ್ರ ಮಾಡಬೇಕು.
5. ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು. ಅದಕ್ಕೆ ಮಸಾಲೆ ಮತ್ತು ಮೊಸರು ಹಾಕಿದ ಅಣಬೆಯನ್ನು ಹಾಕಿ ತಿರುಗಿಸುತ್ತಾ ಬೇಯಿಸಬೇಕು.
6. ಈಗ ಬೆಂದ ಅಣಬೆ ಮಿಶ್ರಣವನ್ನು ಮೇಲಿನ ಮಸಾಲೆ ಮಿಶ್ರಣದ ಜೊತೆ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ 5 ನಿಮಿಷ ಬೇಯಿಸಿದರೆ ಅಣಬೆ ಟಿಕ್ಕಾ ಮಸಾಲೆ ರೆಡಿ. ಇದನ್ನು ಬೇಕಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು.



Click it and Unblock the Notifications
