Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಇದು ಗುಜರಾತಿ ಶೈಲಿಯ ದಾಲ್ ಕರಿ

ಬೇಕಾಗುವ ಸಾಮಾಗ್ರಿಗಳು:
* 1 ಕಪ್ ಬೇಳೆ
* 1 ಚಮಚ ಸಾಸಿವೆ
* 1/2 ಚಮಚ ಜೀರಿಗೆ
* 1/2 ಚಮಚ ಅರಿಶಿಣ
* 2 ಚಮಚ ಕೊತ್ತಂಬರಿ ಪುಡಿ
* ಸ್ವಲ್ಪ ಕರಿ ಬೇವಿನ ಎಲೆ
* ಬೆಳ್ಳುಳ್ಳಿ 6-7 ಎಸಳು
* 1 ತುಂಡು ಡಾಲ್ಚಿನಿ (ಚಕ್ಕೆ)
* 1 ಚಿಟಿಕೆಯಷ್ಟು ಇಂಗು
* ರುಚಿಗೆ ತಕ್ಕ ಉಪ್ಪು
* 2 ಹಸಿ ಮೆಣಸಿನ ಕಾಯಿ
* ಸ್ವಲ್ಪ ಕೊತ್ತಂಬರಿ ಸೊಪ್ಪು
* 1/4 ಕಪ್ ಹುಣಸೆ ಹಣ್ಣಿನ ರಸ
* 1 ಚಮಚ ತುಪ್ಪ
ತಯಾರಿಸುವ ವಿಧಾನ:
1. ಬೇಳೆಯನ್ನು 1/2 ಗಂಟೆ ನೀರಿನಲ್ಲಿ ನೆನೆ ಹಾಕಬೇಕು.
2. ನಂತರ ಅದಕ್ಕೆ ಉಪ್ಪು ಮತ್ತು ಅರಿಶಿಣ, ನೀರು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಬೇಕು.
3. ಚಕ್ಕೆ ಮತ್ತು ಬೆಳ್ಳುಳ್ಳಿಯನ್ನು ಜಜ್ಜ ಬೇಕು.
4. ಹಸಿಮೆಣಸಿನ ಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಕತ್ತರಿಸಬೇಕು.
5. ಸಾರು ಪಾತ್ರೆಯನ್ನು ಬಿಸಿಮಾಡಿ ತುಪ್ಪ ಹಾಕಿ ಅದಕ್ಕೆ ಇಂಗು, ಜೀರಿಗೆ ಮತ್ತು ಸಾಸಿವೆಯನ್ನು ಹಾಕಬೇಕು.
6. ಸಾಸಿವೆ ಚಿಟಪಟ ಶಬ್ದ ಮಾಡುವಾಗ ಕರಿಬೇವಿನ ಎಲೆಯನ್ನು ಹಾಕಬೇಕು.
7. ಅದಕ್ಕೆ ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಪುಡಿ ಹಾಕಿ ಮಿಶ್ರ ಮಾಡಿ.
8. ಈಗ ಜಜ್ಜಿದ ಬೆಳ್ಳುಳ್ಳಿ, ಚಕ್ಕೆಮತ್ತು ಬೇಯಿಸಿದ ಬೇಳೆಯನ್ನು ಸೇರಿಸಿ.
9. ಸ್ವಲ್ಪ ಹೊತ್ತು (5 ನಿಮಿಷ) ಕುದಿಸಿದ ನಂತರ ಹುಣಸೆ ಹಣ್ಣಿನ ರಸ ಹಾಗೂ ಸ್ವಲ್ಪ ಸಕ್ಕರೆ ಸೇರಿಸಿ 5 ನಿಮಿಷ ಕುದಿಸಿ. (ಉಪ್ಪು ಸಾಲದಿದ್ದರೆ ಇನ್ನೂ ಸ್ವಲ್ಪ ಹಾಕಿ).
10. ಈಗ ಕುದಿಯುತ್ತಿರುವ ಬೇಳೆ ಸಾರಿಗೆ ಕೊತ್ತಂಬರಿ ಸೊಪ್ಪು ಹಾಕಿದರೆ ಗುಜರಾತಿ ಶೈಲಿಯ ದಾಲ್ ಕರಿ ರೆಡಿ.



Click it and Unblock the Notifications
