Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕಾಳುಮೆಣಸು ಹುಣಿಸೆಹಣ್ಣಿನ ಹುಳಿ

ಬೇಕಾಗುವ ಪದಾರ್ಥಗಳು :
ಸಪೋಟ ಹಣ್ಣಿನ ಗಾತ್ರದಷ್ಟು ಹುಣಿಸೆಹಣ್ಣು
ಸ್ವಲ್ಪ ತಾಜಾ ಕರಿಬೇವಿನ ಸೊಪ್ಪು
ಉಪ್ಪು
ಒಂದು ಟೀ ಚಮಚ ಕಾಳು ಮೆಣಸು
ಕಡಲೇಬೇಳೆ 1 ಚಮಚ
ಕೊತ್ತಂಬರಿ ಬೀಜ 1 ಚಮಚ
ಕೆಂಪುಮೆಣಸಿನಕಾಯಿ 4
ರುಚಿಗೆ ತಕ್ಕಷ್ಟು ಚಿಟಿಕೆ ಇಂಗಿನಪುಡಿ
ಒಗ್ಗರಣೆಗೆ ಸಾಸಿವೆ.
ಮಾಡುವ ವಿಧಾನ
ಹುಣಿಸೆಹಣ್ಣನ್ನು ಅರ್ಧ ಗಂಟೆ ನೆನೆಯಿಟ್ಟು ಅದರಿಂದ ರಸ ತೆಗೆದಿಟ್ಟುಕೊಳ್ಳಿರಿ. ಮಸಾಲೆಗೆ ಹೆಳಲಾದ ಒಟ್ಟು ಐದು ಐಟಂಗಳನ್ನು ಎಣ್ಣೆ ಹಾಕದೆ ಹುರಿದುಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಸ್ಪಲ್ಪ ನೀರಿನಲ್ಲಿ ನೆನೆಸಿಡಿ. ಬಾಣಲೆಯನ್ನು ಒಲೆ ಮೇಲಿಟ್ಟು ಚೂರು ಎಣ್ಣೆ ಹಾಕಿ. ಕಾದ ನಂತರ ಸಾಸಿವೆ ಚಟಪಟಗುಟ್ಟಲಿ. ನಂತರ ಉಪ್ಪು ಮತ್ತು ಹುಣಿಸೆ ಹಣ್ಣಿನ ರಸ ಬೆರೆಸಿ ಹಸಿ ವಾಸನೆ ಮೂಗುಮರೆಯಾಗುವವರೆಗೆ ಕುದಿಸಿರಿ. ಆನಂತರ ಪುಡಿಮಾಡಿಟ್ಟುಕೊಂಡ ಮಸಾಲೆಯನ್ನು ಬೆರೆಸಿ ಮತ್ತೆ ಕೊತಕೊತ ಕುದಿಸಿರಿ. ನೀರು ಎಷ್ಟು ಬೇಕು? ಅಳತೆನೋಡಿಕೊಂಡು ಬೆರೆಸಿಕೊಳ್ಳಿರಿ. ಕೊನೆಗೆ ಕರಿಬೇವಿನ ಇಡಿಇಡಿ ಸೊಪ್ಪನ್ನು ಚಿಮುಕಿಸಿ. ಕೆಳಗಿಳಿಸಿ. ಬಿಸಿಬಿಸಿ ಅನ್ನ ಕಾಳುಮೆಣಸಿನ ಹುಳಿಯ ರುಚಿ ಸವಿಯಿರಿ.



Click it and Unblock the Notifications
