For Quick Alerts
ALLOW NOTIFICATIONS  
For Daily Alerts

ರಂಜಾನ್ ಸ್ಪೆಷಲ್‌: ಅಲೀಸಾ ರುಚಿಗೆ ನೀವಾಗುವಿರಿ ಕ್ಲೀನ್ ಬೋಲ್ಡ್

Posted By:
|

ರಂಜಾನ್ ಹಬ್ಬದ ಶುಭಾಶಯಗಳು. ರಂಜಾನ್‌ ಹಬ್ಬವಂದರೆ ಹೇಳಬೇಕೆ? ಒಂದಕ್ಕೊಂದು ಮಿಗಿಲು ರುಚಿಯ ತಿಂಡಿ, ತಿನಿಸುಗಳನ್ನು ಮಾಡಲಾಗುವುದು. ಅದರಲ್ಲೂ ರಂಜಾನ್‌ ಹಬ್ಬಕ್ಕೆ ನಾನ್‌ವಜ್‌ ಅಡುಗೆಯದ್ದೇ ಮೇಲುಗೈ. ಇಲ್ಲಿ ನಾವು ಚಿಕನ್‌ ಹಾಕಿ ಮಾಡುವ ಅಲೀಸಾ ರೆಸಿಪಿ ನೀಡಿದ್ದೇವೆ.


ಗೋಧಿ, ಚಿಕನ್‌ ಹಾಕಿ ಮಾಡುವ ಈ ರೆಸಿಪಿ ತುಂಬಾ ರುಚಿಯಾಗಿರುತ್ತೆ. ಇದನ್ನು ನೀವು ಟ್ರೈ ಮಾಡಬಯಸುವುದಾದರೆ ಇಲ್ಲಿದೆ ನೋಡಿ ಸರಳವಾದ ರೆಸಿಪಿ. ನೀವು ಈ ರೆಸಿಪಿ ಟ್ರೈ ಮಾಡಿದ್ದೇ ಆದರೆ ನಮಗೆ ಥ್ಯಾಂಕ್ಸ್ ಹೇಳುವಿರಿ, ಅಷ್ಟೊಂದು ರುಚಿಯಾಗಿರುತ್ತೆ ನೋಡಿ, ಮತ್ತೇಕೆ ತಡ ಬನ್ನಿ ರೆಸಿಪಿ ನೋಡೋಣ:
Ramadhan Special Aleesa Recipe, ರಂಜಾನ್ ಸ್ಪೆಷಲ್‌ ಅಲೀಸಾ ರೆಸಿಪಿ
Ramadhan Special Aleesa Recipe, ರಂಜಾನ್ ಸ್ಪೆಷಲ್‌ ಅಲೀಸಾ ರೆಸಿಪಿ
Prep Time
20 Mins
Cook Time
2H0M
Total Time
2 Hours20 Mins

Recipe By: Reena TK

Recipe Type: Nonveg

Serves: 4

Ingredients
  • ಬೇಕಾಗುವ ಸಾಮಗ್ರಿ

    1 ಕಪ್ ಸಿಪ್ಪೆ ಸುಲಿದು ಗೋಧಿ(ರಾತ್ರಿ ನೆನೆಹಾಕಿರಬೇಕು)

    7 ಕಪ್ ನೀರು

    3-4 ಮೀಡಿಯಂ ಚಿಕನ್ ಪೀಸ್

    1 ಈರುಳ್ಳಿ (ತೆಳುವಾಗಿ ಕತ್ತರಿಸಿದ್ದು)

    2 ಬೆಳ್ಳುಳ್ಳಿ

    1 ತುಂಡು ಚಕ್ಕೆ

    2 ಏಲಕ್ಕಿ

    6 ಚಮಚ ತುಪ್ಪ

    3/4 ಉಪ್ಪು (ರುಚಿಗೆ ತಕ್ಕಷ್ಟು)

    ಅಲಂಕಾರಕ್ಕೆ

    3 ಚಮಚ ತುಪ್ಪ

    1 ಈರುಳ್ಳಿ, ತೆಳುವಾಗಿ ಕತ್ತರಿಸಿದ್ದು

    ಸ್ವಲ್ಪ ಗೋಡಂಬಿ

    ಸ್ವಲ್ಪ ದ್ರಾಕ್ಷಿ

Red Rice Kanda Poha
How to Prepare
  • ಮಾಡುವುದು ಹೇಗೆ?

    * ಗೋಧಿ ತೊಳೆದು ರಾತ್ರಿ ನೆನೆಹಾಕಿ.

    * ಮಾರನೇಯ ದಿನ ನೀರು ಸೋಸಿ ಅದಕ್ಕೆ ನೀರು, ಚಿಕನ್‌ ಪೀಸ್, ಈರುಳ್ಳಿ, ಬೆಳ್ಳುಳ್ಳಿ, ಚಕ್ಕೆ, ಏಲಕ್ಕಿ, ತುಪ್ಪ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ, ಪಾತ್ರೆಯ ಬಾಯಿ ಮುಚ್ಚಿ ಬಾಯಿ ಮುಚ್ಚಿ ಬೇಯಿಸಿ.

    * ಬೇಯಿಸುವಾಗ ಮೊದಲಿಗೆ ಸಾಧಾರಣ ಉರಿಯಲ್ಲಿ ಇಟ್ಟು, ನಂತರ ಕಡಿಮೆ ಉರಿಯಲ್ಲಿಒಂದು ಗಂಟೆ 40 ನಿಮಿಷ ಬೇಯಿಸಿ.

    * ನಂತರ ಗ್ಯಾಸ್‌ ಆಫ್‌ ಮಾಡಿ 10 ನಿಮಿಷ ಬಿಡಿ, ನಂತರ ಪಾತ್ರೆಯ ಮುಚ್ಚಳ ತೆಗೆಯಿರಿ.

    * ಎಲ್ಲಾವನ್ನು ಮಿಶ್ರ ಮಾಡಿ, ನಂತರ ಮ್ಯಾಶ್‌ ಮಾಡಿ.

    *ಈಗ ಪ್ಯಾನ್‌ ಬಿಸಿ ಮಾಡಿ, ತುಪ್ಪ ಹಾಕಿ ಬಿಸಿ ಮಾಡಿ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಗೋಡಂಬಿ ಹಾಕಿ.

    * ಅದರಲ್ಲಿ ಸ್ವಲ್ಪ ತೆಗೆದಿಟ್ಟು, ಉಳಿದವುಗಳನ್ನು ಅಲೀಸಾ ಜೊತೆ ಹಾಕಿ.

    * ಸರ್ವ್‌ ಮಾಡಿದಾಗ ತುಪ್ಪದಲ್ಲಿ ಕರಿದ ಉಳಿದ ಈರುಳ್ಳಿ-ಗೋಡಂಬಿ ಹಾಕಿ ಅಲಂಕರಿಸಿ ಸರ್ವ್‌ ಮಾಡಿ ಟೇಸ್ಟ್ ಸೂಪರ್‌ ಆಗಿರುತ್ತದೆ.

Instructions
  • ಈ ಅಲೀಸಾ ರೆಸಿಪಿ ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.
Nutritional Information
  • ಸರ್ವ್ - 4
  • ಕ್ಯಾಲೋರಿ - 196
  • ಕೊಬ್ಬು - 8ಗ್ರಾಂ
  • ಪ್ರೊಟೀನ್ - 26ಗ್ರಾಂ
  • ಕಾರ್ಬ್ಸ್ - 5ಗ್ರಾಂ
[ 4 of 5 - 71 Users]
X
Desktop Bottom Promotion