For Quick Alerts
ALLOW NOTIFICATIONS  
For Daily Alerts

ಶುಗರ್ ಇರುವವರು ಸೇವಿಸಲೇಬೇಕಾದ ಅಡುಗೆ ನೆಲನೆಲ್ಲಿ ತಂಬಳಿ

Posted By:
|

ನೆಲ್ಲಿಕಾಯಿ ಎಲ್ಲರಿಗೂ ಗೊತ್ತು.ನೆಲ್ಲಿಕಾಯಿ ಮರದಲ್ಲಿ ಬಿಡುತ್ತೆ. ಇದೀಗ ನೆಲ್ಲಿ ಮರವನ್ನು ಒಂದು ಸಣ್ಣ ಕಳೆ ಸಸ್ಯದಂತೆ ಊಹಿಸಿಕೊಳ್ಳಿ. ಎಸ್.. ಅದುವೇ ನೆಲನೆಲ್ಲಿ ಗಿಡ.

ಗಿಡದ ಎಲೆಗಳು ಮುಟ್ಟಿದರೆ ಮುನಿ ಎಲೆಗಳಂತೆ. ಆದರೆ ಆ ಎಲೆಗಳ ಕೆಳಗೆ ಸಣ್ಣಸಣ್ಣ ನೆಲ್ಲಿಕಾಯಿ ಇರುತ್ತದೆ. ಕಳೆಯಂತೆ ಹುಟ್ಟಿಕೊಳ್ಳುವ ಈ ಸಸ್ಯ ನಿಮ್ಮ ದೇಹಕ್ಕೆ ಆರೋಗ್ಯ ಒದಗಿಸುವ ಸಸ್ಯ ಸಂಕುಲಗಳಲ್ಲಿ ಒಂದು.

Niruri Tambuli Recipe

ನೆಲನೆಲ್ಲಿಯನ್ನು ಕಿರುನೆಲ್ಲಿ ಎಂದೂ ಕೂಡ ಕರೆಯಲಾಗುತ್ತದೆ.ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿರುವ ಈ ಸಸ್ಯ ಸಾಸಿವೆ ಗಾತ್ರದ ಚಿಕ್ಕಚಿಕ್ಕ ಕಾಯಿಗಳನ್ನ ಎಲೆಯ ಹಿಂಭಾಗದಲ್ಲಿ ಹೊಂದಿರುತ್ತದೆ.

ಇದನ್ನು ಬೇರೆಬೇರೆ ಭಾಷೆಗಳಲ್ಲಿ ವಿವಿಧ ಹೆಸರುಗಳಿಂದ‌ ಕರೆಯಲಾಗುತ್ತದೆ.

Niruri Tambuli Recipe

ಸಂಸ್ಕೃತ-ಭೂಮ್ಯಾಮಲಕಿ,ಶಿವಾ,ಬಹುಪತ್ರಾ,ಬಹುಫಲಾ,ಭೂಯಿಆಂವಲಾ,ತಾಮಲಕಿ
ಹಿಂದಿ-ಜರಾಮ್ಲ,ಭೂಯಿಆಮಲಾ
ಮರಾಠಿ-ಭೂಯಿ ಆಂಬಲಿ,ಭೂಯಿ ಆಂವ್ಲಾ
ತಮಿಳು-ಕಿಝಕಾಯ್ ನೆಲ್ಲಿ
ತೆಲುಗು-ನೆಲ ಉಸಸೀರಿಕೆ
ಮಲಯಾಳಂ-ಕಿಳಾನೆಲ್ಲಿ
ವೈಜ್ಞಾನಿಕ ಹೆಸರು-Phyllanthus amaras
Niruri Tambuli Recipe

ನೆಲನೆಲ್ಲಿ ಸೊಪ್ಪಿನಿಂದ ತಂಬಳಿ ತಯಾರಿಸುವುದು ಹೇಗೆ ಎಂಬ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

Niruri Tambuli Recipe, ನೆಲನೆಲ್ಲಿ ತಂಬಳಿ
Niruri Tambuli Recipe, ನೆಲನೆಲ್ಲಿ ತಂಬಳಿ
Prep Time
5 Mins
Cook Time
3M
Total Time
8 Mins

Recipe By: Sushma Chatra

Recipe Type: Chutney

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    ನೆಲನೆಲ್ಲಿ ಸೊಪ್ಪು - ಒಂದು ಬೌಲ್

    ಜೀರಿಗೆ- ಒಂದು ಸ್ಪೂನ್

    ಕಾಳುಮೆಣಸು- ನಾಲ್ಕು

    ಉಪ್ಪು- ರುಚಿಗೆ ತಕ್ಕಷ್ಟು

    ಸಾಸಿವೆ- ಅರ್ಧ ಸ್ಪೂನ್

    ತುಪ್ಪ- ಎರಡು ಸ್ಪೂನ್

    ಮಜ್ಜಿಗೆ- ಕಾಲ್‌ಲೀಟರ್

    ಬೆಲ್ಲ - ಒಂದೆರಡು ಗೋಲಿ ಗಾತ್ರ

    ಬ್ಯಾಡಗಿ ಮೆಣಸು - ಒಂದುಕಾಯಿತುರಿ- ಅರ್ಧ ಬೌಲ್

Red Rice Kanda Poha
How to Prepare
  • ಮಾಡುವ ವಿಧಾನ

    . ನೆಲನೆಲ್ಲಿ ಸೊಪ್ಪನ್ನ ಬಾಣಲೆಯಲ್ಲಿ ಹಾಕಿ ಸ್ವಲ್ಪ ಹುರಿದುಕೊಳ್ಳಿ.

    . ಇದಕ್ಕೆ ಕಾಯಿತುರಿ, ಅರ್ಧ ಸ್ಪೂನ್ ಜೀರಿಗೆ, ಕಾಳುಮೆಣಸು ಸೇರಿಸಿ ಎರಡು ಲೋಟ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ನೀರು ಸೇರಿಸಿ ರುಬ್ಬಿಕೊಳ್ಳಿ.

    . ರುಬ್ಬಿದ ಮಿಶ್ರಣವನ್ನು ಜರಡಿ ಹಿಡಿದು ರಸವನ್ನು ಬೇರ್ಪಡಿಸಿ.

    .ಈ ರಸಕ್ಕೆ ಉಪ್ಪು,ಬೆಲ್ಲ, ಮಜ್ಜಿಗೆ ಸೇರಿಸಿ.

    . ನಂತರ ತುಪ್ಪದಲ್ಲಿ ಸಾಸಿವೆ ಚಟಿಪಟಿ ಮಾಡಿ, ಸ್ವಲ್ಪ ಜೀರಿಗೆ ಹಾಕಿ ಬ್ಯಾಡಗಿ ಮೆಣಸಿನ ಒಗ್ಗರಣೆ ಕೊಟ್ಟರೆ ನೆಲನೆಲ್ಲಿ ತಂಬಳಿ ಸವಿಯಲು ಸಿದ್ಧ.

Instructions
  • ನೆಲನೆಲ್ಲಿ ಸೇವನೆಯಿಂದ ಕಾಮಾಲೆ ರೋಗ ನಿವಾರಣೆಯಾಗುತ್ತೆ ಎನ್ನಲಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ.ಗಾಯಗಳ ನಿವಾರಣೆಗೆ ಇದು ಉಪಯೋಗಕಾರಿ.ಚರ್ಮರೋಗವನ್ನು ನಿವಾರಿಸುವ ಸಾಮರ್ಥ್ಯ ಇದಕ್ಕಿದೆ. ಅಜೀರ್ಣ ಹೊಟ್ಟೆನೋವು ಸಮಸ್ಯೆ ನಿವಾರಿಸುತ್ತದೆ. ಹೆಪಟೈಟಿಸ್ ಬಿ ಸಮಸ್ಯೆಗೂ ಕೂಡ ಪರಿಣಾಮಕಾರಿ. ಕಿಡ್ನಿ ಸ್ಟೋನ್ ಆಗದಂತೆ ತಡೆಯುವ ಶಕ್ತಿ ಇದಕ್ಕಿದೆ.
Nutritional Information
  • ಸರ್ವ್ - 4
  • ಕ್ಯಾಲೋರಿ - 150 cal
  • ನಾರಿನಂಶ - 20ಗ್ರಾಂ
[ 3.5 of 5 - 49 Users]
X
Desktop Bottom Promotion