Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶುಗರ್ ಇರುವವರು ಸೇವಿಸಲೇಬೇಕಾದ ಅಡುಗೆ ನೆಲನೆಲ್ಲಿ ತಂಬಳಿ
ನೆಲ್ಲಿಕಾಯಿ ಎಲ್ಲರಿಗೂ ಗೊತ್ತು.ನೆಲ್ಲಿಕಾಯಿ ಮರದಲ್ಲಿ ಬಿಡುತ್ತೆ. ಇದೀಗ ನೆಲ್ಲಿ ಮರವನ್ನು ಒಂದು ಸಣ್ಣ ಕಳೆ ಸಸ್ಯದಂತೆ ಊಹಿಸಿಕೊಳ್ಳಿ. ಎಸ್.. ಅದುವೇ ನೆಲನೆಲ್ಲಿ ಗಿಡ.
ಗಿಡದ ಎಲೆಗಳು ಮುಟ್ಟಿದರೆ ಮುನಿ ಎಲೆಗಳಂತೆ. ಆದರೆ ಆ ಎಲೆಗಳ ಕೆಳಗೆ ಸಣ್ಣಸಣ್ಣ ನೆಲ್ಲಿಕಾಯಿ ಇರುತ್ತದೆ. ಕಳೆಯಂತೆ ಹುಟ್ಟಿಕೊಳ್ಳುವ ಈ ಸಸ್ಯ ನಿಮ್ಮ ದೇಹಕ್ಕೆ ಆರೋಗ್ಯ ಒದಗಿಸುವ ಸಸ್ಯ ಸಂಕುಲಗಳಲ್ಲಿ ಒಂದು.

ನೆಲನೆಲ್ಲಿಯನ್ನು ಕಿರುನೆಲ್ಲಿ ಎಂದೂ ಕೂಡ ಕರೆಯಲಾಗುತ್ತದೆ.ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿರುವ ಈ ಸಸ್ಯ ಸಾಸಿವೆ ಗಾತ್ರದ ಚಿಕ್ಕಚಿಕ್ಕ ಕಾಯಿಗಳನ್ನ ಎಲೆಯ ಹಿಂಭಾಗದಲ್ಲಿ ಹೊಂದಿರುತ್ತದೆ.
ಇದನ್ನು ಬೇರೆಬೇರೆ ಭಾಷೆಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

ಸಂಸ್ಕೃತ-ಭೂಮ್ಯಾಮಲಕಿ,ಶಿವಾ,ಬಹುಪತ್ರಾ,ಬಹುಫಲಾ,ಭೂಯಿಆಂವಲಾ,ತಾಮಲಕಿ
ಹಿಂದಿ-ಜರಾಮ್ಲ,ಭೂಯಿಆಮಲಾ
ಮರಾಠಿ-ಭೂಯಿ ಆಂಬಲಿ,ಭೂಯಿ ಆಂವ್ಲಾ
ತಮಿಳು-ಕಿಝಕಾಯ್ ನೆಲ್ಲಿ
ತೆಲುಗು-ನೆಲ ಉಸಸೀರಿಕೆ
ಮಲಯಾಳಂ-ಕಿಳಾನೆಲ್ಲಿ
ವೈಜ್ಞಾನಿಕ ಹೆಸರು-Phyllanthus amaras

ನೆಲನೆಲ್ಲಿ ಸೊಪ್ಪಿನಿಂದ ತಂಬಳಿ ತಯಾರಿಸುವುದು ಹೇಗೆ ಎಂಬ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.
Recipe By: Sushma Chatra
Recipe Type: Chutney
Serves: 4
-
ಬೇಕಾಗುವ ಸಾಮಗ್ರಿಗಳು
ನೆಲನೆಲ್ಲಿ ಸೊಪ್ಪು - ಒಂದು ಬೌಲ್
ಜೀರಿಗೆ- ಒಂದು ಸ್ಪೂನ್
ಕಾಳುಮೆಣಸು- ನಾಲ್ಕು
ಉಪ್ಪು- ರುಚಿಗೆ ತಕ್ಕಷ್ಟು
ಸಾಸಿವೆ- ಅರ್ಧ ಸ್ಪೂನ್
ತುಪ್ಪ- ಎರಡು ಸ್ಪೂನ್
ಮಜ್ಜಿಗೆ- ಕಾಲ್‌ಲೀಟರ್
ಬೆಲ್ಲ - ಒಂದೆರಡು ಗೋಲಿ ಗಾತ್ರ
ಬ್ಯಾಡಗಿ ಮೆಣಸು - ಒಂದುಕಾಯಿತುರಿ- ಅರ್ಧ ಬೌಲ್
-
ಮಾಡುವ ವಿಧಾನ
. ನೆಲನೆಲ್ಲಿ ಸೊಪ್ಪನ್ನ ಬಾಣಲೆಯಲ್ಲಿ ಹಾಕಿ ಸ್ವಲ್ಪ ಹುರಿದುಕೊಳ್ಳಿ.
. ಇದಕ್ಕೆ ಕಾಯಿತುರಿ, ಅರ್ಧ ಸ್ಪೂನ್ ಜೀರಿಗೆ, ಕಾಳುಮೆಣಸು ಸೇರಿಸಿ ಎರಡು ಲೋಟ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ನೀರು ಸೇರಿಸಿ ರುಬ್ಬಿಕೊಳ್ಳಿ.
. ರುಬ್ಬಿದ ಮಿಶ್ರಣವನ್ನು ಜರಡಿ ಹಿಡಿದು ರಸವನ್ನು ಬೇರ್ಪಡಿಸಿ.
.ಈ ರಸಕ್ಕೆ ಉಪ್ಪು,ಬೆಲ್ಲ, ಮಜ್ಜಿಗೆ ಸೇರಿಸಿ.
. ನಂತರ ತುಪ್ಪದಲ್ಲಿ ಸಾಸಿವೆ ಚಟಿಪಟಿ ಮಾಡಿ, ಸ್ವಲ್ಪ ಜೀರಿಗೆ ಹಾಕಿ ಬ್ಯಾಡಗಿ ಮೆಣಸಿನ ಒಗ್ಗರಣೆ ಕೊಟ್ಟರೆ ನೆಲನೆಲ್ಲಿ ತಂಬಳಿ ಸವಿಯಲು ಸಿದ್ಧ.
- ನೆಲನೆಲ್ಲಿ ಸೇವನೆಯಿಂದ ಕಾಮಾಲೆ ರೋಗ ನಿವಾರಣೆಯಾಗುತ್ತೆ ಎನ್ನಲಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ.ಗಾಯಗಳ ನಿವಾರಣೆಗೆ ಇದು ಉಪಯೋಗಕಾರಿ.ಚರ್ಮರೋಗವನ್ನು ನಿವಾರಿಸುವ ಸಾಮರ್ಥ್ಯ ಇದಕ್ಕಿದೆ. ಅಜೀರ್ಣ ಹೊಟ್ಟೆನೋವು ಸಮಸ್ಯೆ ನಿವಾರಿಸುತ್ತದೆ. ಹೆಪಟೈಟಿಸ್ ಬಿ ಸಮಸ್ಯೆಗೂ ಕೂಡ ಪರಿಣಾಮಕಾರಿ. ಕಿಡ್ನಿ ಸ್ಟೋನ್ ಆಗದಂತೆ ತಡೆಯುವ ಶಕ್ತಿ ಇದಕ್ಕಿದೆ.
- ಸರ್ವ್ - 4
- ಕ್ಯಾಲೋರಿ - 150 cal
- ನಾರಿನಂಶ - 20ಗ್ರಾಂ



Click it and Unblock the Notifications
