For Quick Alerts
ALLOW NOTIFICATIONS  
For Daily Alerts

ಪನ್ನೀರ್‌ ಪಸಂದ: ಗೂಗಲ್‌ ಸರ್ಚ್‌ನಲ್ಲಿ ಟಾಪ್‌ 1 ಸ್ಥಾನದಲ್ಲಿರುವ ರೆಸಿಪಿಯಿದು

Posted By:
|

2022ರಲ್ಲಿ ಟಾಪ್‌ ಗೂಗಲ್‌ ಸರ್ಚ್‌ನಲ್ಲಿರುವ ರೆಸಿಪಿಗಳ ಲಿಸ್ಟ್‌ನಲ್ಲಿ ಪನ್ನೀರ್ ಪಸಂದ ನಂ. 1 ಸ್ಥಾನದಲ್ಲಿದೆ. ಜನರು ಅತೀ ಹೆಚ್ಚಾಗಿ ಈ ರೆಸಿಪಿಗಾಗಿ ಸರ್ಚ್‌ ಮಾಡಿದ್ದಾರೆ. ದಿಲ್‌ ಪಸಂದ ಪ್ರತಿನಿತ್ಯ ಮಾಡುವ ರೆಸಿಪಿಯಲ್ಲ, ಮನೆಯಲ್ಲಿ ಕೆಲವೊಂದು ವಿಶೇಷ ದಿನಗಳಲ್ಲಿ ತಯಾರಿಸಲು ಬೆಸ್ಟ್. ಏಕೆಂದರೆ ಇದನ್ನು ಮಾಡಲು ಸ್ವಲ್ಪ ಸಮಯ ಬೇಕು, ಅಷ್ಟೇ ಎಫರ್ಟ್ ಕೂಡ ಬೇಕು, ಆದರೆ ರುಚಿ ಮಾತ್ರ ನಾವು ಪಟ್ಟ ಶ್ರಮ ಸಾರ್ಥಕ ಎಂದನಿಸುವಷ್ಟಿರುತ್ತದೆ, ಮನೆಮಂದಿಯೆಲ್ಲಾ ತುಂಬಾ ಇಷ್ಟಪಟ್ಟು ಸವಿಯುತ್ತಾರೆ, ಇನ್ನು ಮನೆಗೆ ಯಾರಾದರೂ ಗೆಸ್ಟ್‌ ಬರುವಾಗ ಇದನ್ನು ಮಾಡಿದರೆ ಸ್ಪೆಷಲ್ ಅಡುಗೆಯಾಗಿರುತ್ತೆ.

Paneer Pasanda Recipe In Kannada|How To Prepare Paneer Pasanda

ಪನ್ನೀರ್ ಪಸಂದವನ್ನು ನಾನ್‌, ರೋಟಿ, ಚಪಾತಿ, ಪರೋಟ, ತುಪ್ಪದ ಅನ್ನ, ವೆಜ್ ಪಲಾವ್‌ ಜೊತೆ ಸವಿಯಲು ಸೂಪರ್ ಆಗಿರುತ್ತೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ಸ್ಟೆಪ್‌ ಬೈ ಸ್ಟೆಪ್ ವಿವರಿಸಿದ್ದೇವೆ, ಆದ್ದರಿಂದ ನಿಮಗೆ ಮಾಡಲು ಸುಲಭವಾಗುವುದು.

* ಮೊದಲಿಗೆ ಈರುಳ್ಳಿ, ಟೊಮೆಟೊ, ಗೋಡಂಬಿ ಗ್ರೇವಿ ಮಾಡೋಣ

ಬೇಕಾಗುವ ಸಾಮಗ್ರಿ

* 5-6 ಟೊಮೆಟೊ (ಕತ್ತರಿಸಿ)
* 10-12 ಗೋಡಂಬಿ
* 1 ಇಂಚು ದೊಡ್ಡದಿರುವ ಚಕ್ಕೆ
* 2 ಹಸಿ ಮೆಣಸು
* 2 ಲವಂಗ
1 ಕಪ್ ನೀರು
ಈ ಎಲ್ಲಾ ಸಾಮಗ್ರಿ ಒಂದು ಪ್ಯಾನ್‌ನಲ್ಲಿ ಹಾಕಿ ಬೇಯಿಸಿ, ತಣ್ಣಗಾಗಲು ಇಡಿ.

ಸ್ಟೆಪ್‌ 2

ಟೊಮೆಟೊ ಬೇಯುವ ಸಮಯದಲ್ಲಿ ಒಂದು ಕಪ್ ಈರುಳ್ಳಿ ಕತ್ತರಿಸಿಡಿ
ಈಗ ಅದೇ ಪ್ಯಾನ್‌ ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಅದರಲ್ಲಿ ಈರುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ತಣ್ಣಗಾಗಲು ಬಿಡಿ.

ಸ್ಟೆಪ್‌ 3

* ಈಗ ತಣ್ಣಗಾದ ಟೊಮೆಟೊ ಪೇಸ್ಟ್ ಮಾಡಿ ಒಂದು ಬೌಲ್‌ನಲ್ಲಿ ಹಾಕಿಡಿ.
* ಫ್ರೈ ಮಾಡಿದ ಈರುಳ್ಳಿ ಕೂಡ ಪೇಸ್ಟ್‌ ಮಾಡಿ ಒಂದು ಬೌಲ್‌ನಲ್ಲಿ ಹಾಕಿಡಿ.

Paneer Pasanda Recipe In Kannada|How To Prepare Paneer Pasanda

ಸ್ಟೆಪ್‌ 4

ಸ್ಯಾಂಡ್‌ವಿಚ್ ಸ್ಟಫ್‌ಗೆ

ಬೇಕಾಗುವ ಸಾಮಗ್ರಿ

* 2 ರಿಂದ 2.5 ಟೇಬಲ್‌ಸ್ಪೂನ್‌ ತುರಿದ ಪನ್ನೀರ್
* 1 ಚಮಚ ಒಣದ್ರಾಕ್ಷಿ
* 6-8 ಗೋಡಂಬಿ
* 1-2 ಹಸಿಮೆಣಸಿನಕಾಯಿ
* 1 ಚಮಚ ಕೊತ್ತಂಬರಿ ಸೊಪ್ಪು
* 1/2 ಪುದೀನಾ ಸೊಪ್ಪು
* 1/4 ಖಾರದ ಪುಡಿ
* 1/2 ಜೀರಿಗೆ ಪೌಡರ್
* 1/4 ರುಚಿಗೆ ತಕ್ಕ ಉಪ್ಪು

ಸ್ಟೆಪ್‌ 5

ದಪ್ಪ ಪನ್ನೀರ್ ತುಂಡನ್ನು ತ್ರಿಕೋನಾಕಾರದಲ್ಲಿ ಕತ್ತರಿಸಿ, ನಂತರ ಅದೇ ತುಂಡಿನ ಮಧ್ಯಭಾಗದಲ್ಲಿ ಕತ್ತರಿಸಿ, ಒಂದು ತ್ರಿಕೋನಾಕಾರದ ಪನ್ನೀರ್‌ನಿಂದ ಎರಡು ತ್ರಿಕೋನಾಕಾರದ ಪನ್ನೀರ್ ಪೀಸ್ ಮಾಡಿ, ಈ ರೀತಿ ನಿಮಗೆ ಎಷ್ಟು ಬೇಕೋ ಅಷ್ಟು ಪನ್ನೀರ್ ತುಂಡುಗಳನ್ನು ಮಾಡಿಡಿ.

ಸ್ಟೆಪ್‌ 6

ಈಗ ಸ್ಯಾಂಡ್‌ವಿಚ್‌ ಮಾಡುವ ರೀತಿಯಲ್ಲಿ ಒಂದು ತುಂಡು ಇಟ್ಟು, ಅದರ ಮೇಲೆ ಸ್ಟಫ್‌ಗೆ ಮಾಡಿಟ್ಟ ಮಸಾಲೆ ಹಾಕಿ, ಅದರ ಮೇಲೆ ಮತ್ತೊಂದು ಪನ್ನೀರ್ ಪೀಸ್‌ ಇಡಿ, ಆದರೆ ಪ್ರೆಸ್‌ ಮಾಡಬೇಡಿ.

ಈ ರೀತಿ ಎಲ್ಲಾ ತುಂಡುಗಳನ್ನು ಮಾಡಿ.

Paneer Pasanda Recipe In Kannada|How To Prepare Paneer Pasanda

ಪನ್ನೀರ್‌ ಫ್ರೈ ಮಾಡಲು

* ಒಂದು ಬೌಲ್‌ ಅರ್ಧ ಕಪ್‌ ಜೋಳದ ಹಿಟ್ಟು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿ
* ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ.
* ಈಗ ಈಗ ಪನ್ನೀರ್‌ ಸ್ಯಾಂಡ್‌ವಿಚ್‌ ಅನ್ನು ಜೋಳದ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಫ್ರೈ ಮಾಡಿ, ಪನ್ನೀರ್ ಸ್ವಲ್ಪ ಕಂದು ಬಣ್ಣ ಬರುವಾಗ ತುಪ್ಪದಿಂದ ತೆಗೆಯಿರಿ.
* ಈ ರೀತಿ ಎಲ್ಲಾ ಪನ್ನೀರ್‌ ಸ್ಯಾಂಡ್‌ವಿಚ್‌ ಫ್ರೈ ಮಾಡಿಡಿ.

ಸ್ಟೆಪ್‌ 8: ಪನ್ನೀರ್‌ ಪಸಂದ ಗ್ರೇವಿ

ಈಗ ನಾವು ಪ್ರಮುಖವಾದ ಹಂತಕ್ಕೆ ಬಂದಿದ್ದೇವೆ.
* ನೀವು ಈರುಳ್ಳಿ ಫ್ರೈ ಮಾಡಲು ಬಳಸಿದ ಪ್ಯಾನ್‌ ಒಂದೂವರೆ ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಬೇಕಿದ್ದರೆ ಪನ್ನೀರ್‌ ಸ್ಯಾಂಡ್‌ವಿಚ್‌ ಮಾಡಲು ಬಳಸಿದ ಎಣ್ಣೆಯನ್ನೇ ಬಳಸಬಹುದು.
* ಈಗ ಜೀರಿಗೆ ಹಾಕಿ, ಸ್ವಲ್ಪ ಸೋಂಪು ಕೂಡ ಸೇರಿಸಬಹುದು. ಸೋಂಪು ಚಟ್‌ ಪಟ್‌ ಶಬ್ದ ಮಾಡುವಾಗ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ.
* ಒಂದು ಪಲಾವ್ ಎಲೆ ಸೌಟ್‌ನಿಂದ ಆಡಿಸಿ.
* ಈಗ ಈರುಳ್ಳಿ ಪೇಸ್ಟ್‌ ಹಾಕಿ, ನಂತರ ಟೊಮೆಟೊ ಪೇಸ್ಟ್‌ ಸೇರಿಸಿ.
* ನಂತರ 1/4 ಚಮಚ ಅರಿಶಿಣ ಪುಡಿ
* 1/2 ಚಮಚ ಕೊತ್ತಂಬರಿ ಪುಡಿ
* 1/2 ಚಮಚ ಕಾಶ್ಮೀರಿ ಮೆಣಸಿನ ಪುಡಿ ಸೇರಿಸಿ.
* ರುಚಿಗೆ ತಕ್ಕ ಉಪ್ಪು ಸೇರಿಸಿ. ಬೇಕಿದ್ದರೆ 1/4 ಚಮಚ ಸಕ್ಕರೆ ಸೇರಿಸಬಹುದು.
* ನಂತರ 1/4 ಚಮಚ ಗರಂ ಮಸಾಲೆ ಪುಡಿ ಸೇರಿಸಿ.
* ನಂತರ ಸ್ವಲ್ಪ ಕಸೂರಿ ಮೇತಿ ಸೇರಿಸಿ.
* ಈಗ ಕಡಿಮೆ ಉರಿಯಲ್ಲಿ ಬೇಯಿಸಿ. ಬೇಕಿದ್ದರೆ ಸ್ವಲ್ಪ ಅಮೂಲ್‌ ಕ್ರೀಮ್‌ ಸೇರಿಸಿ. ಇನ್ನೂ ಟೇಸ್ಟ್ ಆಗಿರುತ್ತದೆ.
* ಈಗ ಉರಿ ಆಫ್‌ ಮಾಡಿ ಫ್ರೈ ಮಾಡಿಟ್ಟ ಸ್ಯಾಂಡ್‌ವಿಚ್‌ ಸೇರಿಸಿ. ನಂತರ ಗ್ರೇವಿಯನ್ನು ಪನ್ನೀರ್ ಮೇಲೆ ಹಾಕಿ.

[ of 5 - Users]
Story first published: Friday, December 9, 2022, 11:31 [IST]
X
Desktop Bottom Promotion