For Quick Alerts
ALLOW NOTIFICATIONS  
For Daily Alerts

ಪನ್ನೀರ್ ಖೀರ್/ ಪನ್ನೀರ್ ಪಾಯಸ ರೆಸಿಪಿ

Posted By: Divya pandith
|

ಪನ್ನೀರ್ ಬಳಕೆಯಿಂದ ಅಡುಗೆಯ ಶ್ರೀಮಂತಿಕೆಯನ್ನು ಹೆಚ್ಚಿಸಬಹುದು. ಪನ್ನೀರ್ ರುಚಿ ಹಾಗೂ ಖುಷಿಯನ್ನು ನೀಡುವುದು. ನೀವು ಪನ್ನೀರ್ ಕಡಾಯಿ, ಸಾಗೂ ಪಾಕವಿಧಾನವನ್ನು ಸಾಮಾನ್ಯವಾಗಿ ಸವಿದಿರುತ್ತೀರಿ. ಅದೇ ಪನ್ನೀರ್ ಸಿಹಿ ತಿಂಡಿಯ ವಿಚಾರವನ್ನು ಅಷ್ಟಾಗಿ ತಿಳಿದಿರುವುದಿಲ್ಲ. ಹಾಗಾಗಿಯೇ ನಾವಿಂದು ಪನ್ನೀರ್ ಖೀರ್/ಪಾಯಸ ಎನ್ನುವ ಹೊಸ ಸಿಹಿ ರುಚಿಯ ಪರಿಚಯ ಮಾಡಿಕೊಡುತ್ತಿದ್ದೇವೆ.

ಪನ್ನೀರ್ ಖೀರ್/ಪಾಯಸ ಉತ್ತರ ಭಾರತದ ಕಡೆ ಹೆಚ್ಚಾಗಿ ತಯಾರಿಸುತ್ತಾರೆ. ಇದನ್ನು ಸಮೃದ್ಧವಾದ ಪನ್ನೀರ್, ಮಂದಗೊಳಿಸಿದ ಹಾಲು, ಏಲಕ್ಕಿ ಪುಡಿ ಮತ್ತು ಒಣ ಹಣ್ಣುಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಒಣ ಹಣ್ಣು ಮತ್ತು ಹಾಲಿನ ಸುಮಧುರ ಮಿಶ್ರಣ ಹಾಗೂ ಸ್ವಲ್ಪ ಉಪ್ಪಿನಂಶ ಹೊಂದಿರುವ ಪನ್ನೀರ್ ಪಾಯಸದ ರುಚಿಯನ್ನು ದ್ವಿಗುಣಗೊಳಿಸುತ್ತವೆ. ಇದನ್ನು ವಿಶೇಷವಾಗಿ ಹಬ್ಬದ ಸಂದರ್ಭ ಹಾಗೂ ವ್ರತಾಚರಣೆಯ ಸಮಯದಲ್ಲಿ ತಯಾರಿಸುತ್ತಾರೆ.

ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ಬಹು ಬೇಗ ಈ ಪಾಯಸವನ್ನು ತಯಾರಿಸಬಹುದು. ಇದನ್ನು ಫ್ರಿಜ್ ನಲ್ಲಿ ಇಟ್ಟು ತಣ್ಣಗಾಗಿಸಿ, ನಂತರ ಸವಿಯಲು ನೀಡಬೇಕು. ಆಗ ಪಾಯಸದ ರುಚಿ ನಾಲಿಗೆಯನ್ನು ಚಪ್ಪರಿಸುವಂತೆ ಮಾಡುತ್ತದೆ. ಜೊತೆಗೆ ಸವಿಯಲು ಬಹಳ ಖುಷಿಯಾಗುವುದು. ನೀವು ಈ ಪಾಯಸವನ್ನು ಮಾಡುವ ಹವಣಿಕೆಯಲ್ಲಿದ್ದರೆ ಈ ಕೆಳಗೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಪಾಕವಿಧಾನವನ್ನು ಅನುಸರಿಸಿ.

Paneer kheer recipe
ಪನ್ನೀರ್ ಖೀರ್ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಪನ್ನೀರ್ ಪಾಯಸ ರೆಸಿಪಿ | ಪನ್ನೀರ್ ಕೀ ಖೀರ್ ರೆಸಿಪಿ |ಪನ್ನೀರ್ ಕೀ ಖೀರ್ ವಿಡಿಯೋ ರೆಸಿಪಿ | ಖೀರ್ ರೆಸಿಪಿಗಳು
ಪನ್ನೀರ್ ಖೀರ್ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಪನ್ನೀರ್ ಪಾಯಸ ರೆಸಿಪಿ | ಪನ್ನೀರ್ ಕೀ ಖೀರ್ ರೆಸಿಪಿ |ಪನ್ನೀರ್ ಕೀ ಖೀರ್ ವಿಡಿಯೋ ರೆಸಿಪಿ | ಖೀರ್ ರೆಸಿಪಿಗಳು
Prep Time
5 Mins
Cook Time
15M
Total Time
20 Mins

Recipe By: ಮೀನಾ ಭಂಡಾರಿ

Recipe Type: ಸಿಹಿ ತಿಂಡಿ

Serves: 2 ಮಂದಿಗೆ

Ingredients
  • ತುರಿದುಕೊಂಡ ಪನ್ನೀರ್ - 1/2 ಕಪ್

    ಮಂದಗೊಳಿಸಿದ ಹಾಲು - 3/4 ಕಪ್

    ಹಾಲು - 1/2 ಲೀಟರ್

    ಒಣದ್ರಾಕ್ಷಿ -2-3 +ಅಲಂಕಾರಕ್ಕೆ

    ಹೆಚ್ಚಿಕೊಂಡ ಬಾದಾಮಿ -1 ಟೀ ಚಮಚ+ ಅಲಂಕಾರಕ್ಕೆ

    ಏಲಕ್ಕಿ ಪುಡಿ -1 ಟೀ ಚಮಚ

Red Rice Kanda Poha
How to Prepare
  • 1. ಒಂದು ಪಾತ್ರೆಯಲ್ಲಿ ತುರಿದುಕೊಂಡ ಪನ್ನೀರ್ ಹಾಕಿ ಬಿಸಿ ಮಾಡಿ.

    2. ತಕ್ಷಣವೇ ಹಾಲನ್ನು ಸೇರಿಸಿ.

    3. ಗಂಟಾಗದಂತೆ 5-6 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸಿ.

    4. ಮಂದಗೊಳಿಸಿದ ಹಾಲನ್ನು ಸೇರಿಸಿ, 3-4 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸುತ್ತಿರಿ.

    5. ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

    6. ಒಣದ್ರಾಕ್ಷಿ ಮತ್ತು ಒಂದು ಟೀ ಚಮಚ ಬಾದಾಮಿ ಚೂರನ್ನು ಸೇರಿಸಿ.

    7. ಚೆನ್ನಾಗಿ ಮಿಶ್ರಗೊಳಿಸಿ ನಂತರ ಒಂದು ಬೌಲ್‍ಗೆ ವರ್ಗಾಯಿಸಿ.

    8. ನಂತರ ಇದಕ್ಕೆ ಒಣದ್ರಾಕ್ಷಿ ಮತ್ತು ಬಾದಾಮಿಯಿಂದ ಅಲಂಕರಿಸಿ.

    9. ಇದನ್ನು ಫ್ರಿಜ್‍ನಲ್ಲಿಟ್ಟು ತಂಪಾಗಿಸಿ, ನಂತರ ಸವಿಯಲು ನೀಡಿ.

Instructions
  • 1. ಪನ್ನೀರ್ ಮತ್ತು ಹಾಲನ್ನು ಸೇರಿಸಿದಾಗ ಅದು ಗಂಟಾಗದಂತೆ ನಿರಂತರವಾಗಿ ಕೈಯಾಡಿಸುತ್ತಲೇ ಇರಬೇಕು.
Nutritional Information
  • ಸರ್ವಿಂಗ್ ಸೈಜ್ - 1/2 ಕಪ್
  • ಕ್ಯಾಲೋರಿ - 281.5 ಕ್ಯಾಲ್
  • ಫ್ಯಾಟ್ - 6.8 ಗ್ರಾಂ.
  • ಪ್ರೋಟೀನ್ - 8 ಗ್ರಾಂ.
  • ಕಾರ್ಬೋಹೈಡ್ರೇಟ್ - 47.6 ಗ್ರಾಂ.
  • ಸಕ್ಕರೆ - 43.7 ಗ್ರಾಂ.
  • ಫೈಬರ್ - 0.2 ಗ್ರಾಂ.

ಸ್ಟೆಪ್ ಬೈ ಸ್ಟೆಪ್ ಪನ್ನೀರ್ ಪಾಯಸ ರೆಸಿಪಿ

1. ಒಂದು ಪಾತ್ರೆಯಲ್ಲಿ ತುರಿದುಕೊಂಡ ಪನ್ನೀರ್ ಹಾಕಿ ಬಿಸಿ ಮಾಡಿ.

Paneer kheer recipe

2. ತಕ್ಷಣವೇ ಹಾಲನ್ನು ಸೇರಿಸಿ.

Paneer kheer recipe

3. ಗಂಟಾಗದಂತೆ 5-6 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸಿ.

Paneer kheer recipe

4. ಮಂದಗೊಳಿಸಿದ ಹಾಲನ್ನು ಸೇರಿಸಿ, 3-4 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸುತ್ತಿರಿ.

Paneer kheer recipe
Paneer kheer recipe

5. ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

Paneer kheer recipe
Paneer kheer recipe

6. ಒಣದ್ರಾಕ್ಷಿ ಮತ್ತು ಒಂದು ಟೀ ಚಮಚ ಬಾದಾಮಿ ಚೂರನ್ನು ಸೇರಿಸಿ.

Paneer kheer recipe
Paneer kheer recipe

7. ಚೆನ್ನಾಗಿ ಮಿಶ್ರಗೊಳಿಸಿ ನಂತರ ಒಂದು ಬೌಲ್‍ಗೆ ವರ್ಗಾಯಿಸಿ.

Paneer kheer recipe
Paneer kheer recipe

8. ನಂತರ ಇದಕ್ಕೆ ಒಣದ್ರಾಕ್ಷಿ ಮತ್ತು ಬಾದಾಮಿಯಿಂದ ಅಲಂಕರಿಸಿ.

Paneer kheer recipe
Paneer kheer recipe

9. ಇದನ್ನು ಫ್ರಿಜ್‍ನಲ್ಲಿಟ್ಟು ತಂಪಾಗಿಸಿ, ನಂತರ ಸವಿಯಲು ನೀಡಿ.

Paneer kheer recipe
Paneer kheer recipe
[ 5 of 5 - 39 Users]
X
Desktop Bottom Promotion