For Quick Alerts
ALLOW NOTIFICATIONS  
For Daily Alerts

ರೆಸಿಪಿ: ಮಸಾಲೆ ಚಹಾ ಜೊತೆ ಸವಿಯಿರಿ ಪನ್ನೀರ್ ಉಂಡೆ

Posted By:
|

ಮಳೆಗಾಲ ಏನಾದರೂ ಬಜ್ಜಿ, ಬೋಂಡಾ ತಿನ್ನಬೇಕೆನಿಸುವುದು. ನಾವಿಲ್ಲಿ ಪನ್ನೀರ್ ಬೋಂಡಾ ರೆಸಿಪಿ ನೀಡಿದ್ದೇವೆ. ಮನೆಯಲ್ಲಿ ಪನ್ನೀರ್ ಇಲ್ಲ ಅಂದ್ರೆ ಅರ್ಧ ಅಥವಾ ಒಂದು ಗಟ್ಟಿ ಹಾಲಿನಲ್ಲಿ ನೀವೇ ಪನ್ನೀರ್‌ ಮಾಡಬಹುದು. ಒಂದು ಲೀಟರ್‌ ಹಾಲಿದ್ದರೆ 10-12 ಪನ್ನೀರ್ ಉಂಡೆ ಮಾಡಬಹುದು.

paneer ball

ಪನ್ನೀರ್‌ ಬಾಲ್ ಅಥವಾ ಉಂಡೆಯನ್ನು ನೀವು ಹಲವಾರು ರುಚಿಯಲ್ಲಿ ಟ್ರೈ ಮಾಡಬಹುದು. ಇಲ್ಲಿ ಸರಳವಾಗಿ ಟೊಮೆಟೊ ಜೊತೆ ಹಾಕಿ ಮಾಡಬಹುದಾದ ರೆಸಿಪಿ ನೀಡಿದ್ದೇವೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Paneer Ball Recipe, ಪನ್ನೀರ್ ಉಂಡೆ ರೆಸಿಪಿ
Paneer Ball Recipe, ಪನ್ನೀರ್ ಉಂಡೆ ರೆಸಿಪಿ
Prep Time
10 Mins
Cook Time
30M
Total Time
40 Mins

Recipe By: reena

Recipe Type: Vegetarian

Serves: 3

Ingredients
  • ಬೇಕಾಗುವ ಸಾಮಗ್ರಿ

    ಪನ್ನೀರ್ 1 ಕಪ್

    ಟೊಮೆಟೊ 2

    ಹಸಿ ಮೆಣಸಿನಕಾಯಿ2

    ಈರುಳ್ಳಿ 1

    ಚಾಟ್‌ ಮಸಾಲ

    ಕಡಲೆ ಹಿಟ್ಟು

    1/2 ಚಮಚ ಮೆಣಸಿನ ಪುಡಿ

    ಚಿಟಿಕೆಯಷ್ಟು ಚಾಟ್‌ ಮಸಾಲ

    ಅರಿಶಿಣ ಪುಡಿ

    1 ಕಪ್ ಎಣ್ಣೆ

Red Rice Kanda Poha
How to Prepare
  • ಮಾಡುವ ವಿಧಾನ

    * ಹಾಲು ಒಡೆದು ಹೋದರೆ ಅದನ್ನು ಬಿಸಾಡುವ ಬದಲಿಗೆ ಪನ್ನೀರ್ ಮಾಡಿ. ಹಾಲಿಗೆ ಅರ್ಧ ನಿಂಬೆ ರಸ ಹಿಂಡಿ ಕುದಿಸಿದರೆ ಹಾಲು ಸಂಪೂರ್ಣ ಒಡೆದು ನೀರು ತಳದಲ್ಲಿರುತ್ತದೆ. ಈಗ ಶುದ್ಧವಾದ ಬಟ್ಟೆಯಲ್ಲಿ ಸೋಸಿ ಬಟ್ಟೆಯಲ್ಲಿ ಪನ್ನೀರ್ ಕಟ್ಟಿಡಿ

    * ಟೊಮೆಟೊ, ಈರುಳ್ಳಿ ಹಸಿ ಮೆಣಸಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ.

    * ಈಗ ಪ್ಯಾನ್‌ 1 ಚಮಚ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ ಹಾಕಿ ಬಾಡಿಸಿ, ನಂತರ ಹಸಿ ಮೆಣಸಿನಕಾಯಿ, ಟೊಮೆಟೊ ಹಾಕಿ ಬೇಯಿಸಿ. ಟೊಮೆಟೊ ಮೆತ್ತಗಾದ ಮೇಲೆ ಪನ್ನೀರ್‌ ಪುಡಿ-ಪುಡಿ ಮಾಡಿ ಹಾಕಿ, ಚಿಟಿಕೆಯಷ್ಟು ಚಾಟ್‌ ಮಸಾಲ ಸೇರಿಸಿ, ಅರಿಶಿಣ, ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್‌ನಿಂದ ಇಳಿಸಿ.

    * ಮಿಶ್ರಣ ತಣ್ಣಗಾದ ಮೇಲೆ ಚಿಕ್ಕ-ಚಿಕ್ಕ ಉಂಡೆ ಕಟ್ಟಿ.

    * ಒಂದು ಬೌಲ್‌ಗೆ 1/4 ಕಪ್ ಕಡಲೆ ಹಿಟ್ಟು ಹಾಕಿ, ಸ್ವಲ್ಪ ನೀರು, ಚಿಟಿಕೆಯಷ್ಟು ಅರಿಶಿಣ, ಉಪ್ಪು, ಖಾರದ ಪುಡಿ ಸೇರಿಸಿ ಮಿಶ್ರ ಮಾಡಿ, ಮಿಶ್ರಣ ಗಟ್ಟಿಯಾಗಿರಲಿ. ಇದೇ ಸಮಯದಲ್ಲಿ ಎಣ್ಣೆ ಕಾಯಿಸಿ.

    * ಈಗ ಕಾದ ಎಣ್ಣೆಗೆ ಪನ್ನೀರ್‌ ಉಂಡೆಯನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಹಾಕಿ.

    * ಮಿಶ್ರಣ ಕಂದು ಬಣ್ಣಕ್ಕೆ ತಿರುವಾಗ ತೆಗೆಯಿರಿ.

    ಈಗ ಬಿಸಿ-ಬಿಸಿಯಾದ ಪನ್ನೀರ್ ಉಂಡೆಯನ್ನು ಚಹಾದೊಂದಿಗೆ ಸವಿಯಿರಿ.

Instructions
Nutritional Information
  • People - 3
  • Fat - 7.3 g
  • Protein - 3.5 g
  • Carbohydrates - 0.5 g
  • Fiber - 0.2 g
[ 5 of 5 - 77 Users]
X
Desktop Bottom Promotion