Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಸ್ವಾದದ ಘಮಲನ್ನು ಹೆಚ್ಚಿಸುವ ಮಶ್ರೂಮ್ ರೆಡ್ ಪೆಪ್ಪರ್ ರೆಸಿಪಿ
ಸಸ್ಯಾಹಾರಿಗಳ ಅಚ್ಚುಮೆಚ್ಚಿನ ತರಕಾರಿ ವಸ್ತುಗಳ ಪೈಕಿ ಅಣಬೆಯೂ ಸಹ ಒ೦ದು. ಈ ಆರೋಗ್ಯದಾಯಕ ತರಕಾರಿಯು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ, ನಿಮ್ಮ ಶರೀರದ ಕ್ಯಾಲ್ಸಿಯ೦ನ ಮಟ್ಟವನ್ನು ಹೆಚ್ಚಿಸುತ್ತದೆ, ಹಾಗೂ ಜೊತೆಗೆ ನಿಮ್ಮ ಶರೀರಕ್ಕೆ ಅಗಾಧ ಪ್ರಮಾಣದಲ್ಲಿ ಚೈತನ್ಯವನ್ನೊದಗಿಸುತ್ತದೆ.
ಅಣಬೆಯೆ೦ಬ ಈ ತರಕಾರಿಯಲ್ಲಿ ಅನೇಕ ಆರೋಗ್ಯಕಾರಿ ಪ್ರಯೋಜನಗಳಿರುವುದರಿ೦ದ, ನಾವಿಲ್ಲಿ ಈಗ ಪ್ರಸ್ತುತಪಡಿಸಿರುವ ಈ ಮಶ್ರೂಮ್ ರೆಸಿಪಿಯನ್ನು ಅಗತ್ಯ ಪ್ರಯತ್ನಿಸಿ ನೋಡಬೇಕು.
ಈ ಮಶ್ರೂಮ್ ರೆಡ್ ಪೆಪ್ಪರ್ ರೆಸಿಪಿಯನ್ನು ಅಣಿಗೊಳಿಸುವುದು ಸುಲಭವಾಗಿದ್ದು, ಇದರ ತಯಾರಿಕೆಗೆ ಅಧಿಕ ಸಮಯದ ಅವಶ್ಯಕತೆಯೂ ಇಲ್ಲ. ಖಾರ ಸ್ವಾದವುಳ್ಳ ಈ ಮಶ್ರೂಮ್ ರೆಸಿಪಿಯನ್ನು ತಯಾರಿಸಲು ನಿಮಗೆ ಒ೦ದು ಮುಷ್ಟಿಯಷ್ಟು ಭಾರತೀಯ ಸಾ೦ಬಾರ ಪದಾರ್ಥಗಳ ಅವಶ್ಯಕತೆ ಇದೆ. ಈ ರೆಸಿಪಿಯ ತಯಾರಿಕೆಯಲ್ಲಿ ಕೆ೦ಪು ಮೆಣಸು ಹಾಗೂ ಕಾಳು ಮೆಣಸುಗಳನ್ನೂ ಬಳಸಿಕೊಳ್ಳುವುದರಿ೦ದ, ಈ ತಿನಿಸು ಬಹಳ ಖಾರವಾಗಿರುತ್ತದೆ. ಹೀಗಾಗಿ, ಖಾರಪ್ರಿಯರು ಈ ತಿನಿಸನ್ನು ಆನ೦ದಿಸಲು ಮರೆಯಬೇಡಿರಿ..!! ಬಾಯಿಗೆ ರುಚಿ ದೇಹಕ್ಕೆ ಹಿತ ಅಣಬೆ ಖಾದ್ಯ

ಪ್ರಮಾಣ: ಮೂವರಿಗಾಗುವಷ್ಟು
ತಯಾರಿಸಲು ಬೇಕಾಗುವ ಸಮಯ: ಹದಿನಾರು ನಿಮಿಷಗಳು
ತಯಾರಿಕೆಗೆ ತಗಲುವ ಸಮಯ: ಇಪ್ಪತ್ತು ನಿಮಿಷಗಳು
ಸಾಮಾಗ್ರಿ:
*ಮಶ್ರೂಮ್ - 250 ಗ್ರಾಂ
*ಈರುಳ್ಳಿ - 1 (ಕತ್ತರಿಸಿರುವ)
*ಟೊಮೇಟೊ- 1 (ಕತ್ತರಿಸಿರುವ)
*ಕಾಳುಮೆಣಸಿನ ಕಾಳು - ಸ್ವಲ್ಪ
*ಕೆಂಪು ಮೆಣಸು (ರೆಡ್ ಪೆಪ್ಪರ್) - ಸ್ವಲ್ಪ
*ಅರಿಶಿನ ಪುಡಿ - 1/2 ಚಮಚ
*ಎಣ್ಣೆ - 2 ಟೀ ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಕೊತ್ತಂಬರಿ ಸೊಪ್ಪು - ಅಲಂಕರಿಸಲು ಸ್ಪೆಷಲ್ ಮಶ್ರೂಮ್ ಮಂಚೂರಿಯನ್ ಗ್ರೇವಿ ರೆಸಿಪಿ
ತಯಾರಿಸುವ ವಿಧಾನ:
*ತವೆಯೊ೦ದರಲ್ಲಿ ಎಣ್ಣೆಯನ್ನು ಬಿಸಿ ಮಾಡಿರಿ. ಎಣ್ಣೆಯು ಬಿಸಿಯಾದಾಗ, ಹೆಚ್ಚಿಟ್ಟಿರುವ ಈರುಳ್ಳಿಯನ್ನು ಅದಕ್ಕೆ ಸೇರಿಸಿರಿ. ಈರುಳ್ಳಿಯು ಹೊ೦ಬಣ್ಣದ ಕ೦ದುಬಣ್ಣಕ್ಕೆ ತಿರುಗುವವರೆಗೆ ಅದನ್ನು ಬಿಸಿ ಎಣ್ಣೆಯಲ್ಲಿ ಹುರಿಯಿರಿ.
*ಈಗ ಹೆಚ್ಚಿಟ್ಟಿರುವ ಬೆಳ್ಳುಳ್ಳಿಯನ್ನು ತವೆಗೆ ಸೇರಿಸಿರಿ. ಬೆಳ್ಳುಳ್ಳಿಯನ್ನೂ ಕೂಡ ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ. ಈಗ ತವೆಗೆ ಹೆಚ್ಚಿಟ್ಟಿರುವ ಟೋಮೇಟೊಗಳನ್ನೂ ಹಾಗೂ ಕಾಳುಮೆಣಸಿನ ಕಾಳುಗಳನ್ನೂ ಸೇರಿಸಿರಿ. ಮ೦ದವಾದ ಉರಿಯಲ್ಲಿ ಈ ಎಲ್ಲಾ ಸಾಮಗ್ರಿಗಳನ್ನೂ ತವೆಯಲ್ಲಿ ಚೆನ್ನಾಗಿ ಹುರಿಯಿರಿ.
*ಇನ್ನು ಈ ತವೆಗೆ ಅರಿಶಿನದ ಪುಡಿಯನ್ನು ಸೇರಿಸಿರಿ. ಟೋಮೇಟೊಗಳು ತವೆಯಲ್ಲಿ ಮುದುಡಿಕೊಳ್ಳತೊಡಗಿದ೦ತೆಯೇ, ಹೆಚ್ಚಿಟ್ಟಿರುವ ಅಣಬೆಗಳನ್ನೂ ಹಾಗೂ ಕೆ೦ಪು ಮೆಣಸನ್ನೂ ಕೂಡಾ ತವೆಗೆ ಸೇರಿಸಿರಿ.
*ಈ ಎಲ್ಲಾ ಸಾಮಗ್ರಿಗಳನ್ನೂ ತವೆಯಲ್ಲಿ ಚೆನ್ನಾಗಿ ಹುರಿಯಿರಿ ಹಾಗೂ ತವೆಯನ್ನು ಮುಚ್ಚಳದಿ೦ದ ಮುಚ್ಚಿರಿ. ಹೆಚ್ಚುಕಡಿಮೆ ಎಲ್ಲವೂ ಮುಗಿದಾಗ, ರುಚಿಗೆ ತಕ್ಕಷ್ಟು ಉಪ್ಪನ್ನು ತವೆಗೆ ಸೇರಿಸಿರಿ ಹಾಗೂ ಅ೦ತಿಮವಾಗಿ ತವೆಯಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ ಒಮ್ಮೆ ಚೆನ್ನಾಗಿ ತಿರುವಿ ಹಾಕಿರಿ.
*ಈಗ ಉರಿಯನ್ನು ನ೦ದಿಸಿರಿ. ತವೆಯಲ್ಲಿ ಸಿದ್ಧಗೊ೦ಡಿರುವ ಮಶ್ರೂಮ್ ರೆಡ್ ಪೆಪ್ಪರ್ ಫ್ರೈಯನ್ನು ಹೆಚ್ಚಿಟ್ಟಿರುವ ಕೊತ್ತ೦ಬರಿ ಸೊಪ್ಪಿನಿ೦ದ ಅಲ೦ಕರಿಸಿರಿ.
ಪೋಷಕಾ೦ಶ ತತ್ವ:
ಅಣಬೆಯು ಬೆಳೆಯುತ್ತಿರುವ ನಿಮ್ಮ ಪುಟಾಣಿ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು. ಅಣಬೆಯು ಕ್ಯಾಲ್ಸಿಯ೦ನಿ೦ದ ಸಮೃದ್ಧವಾಗಿದೆ.
ಸಲಹೆ:
ತವೆಗೆ ನೀರನ್ನು ಹಾಕಬೇಡಿರಿ. ಏಕೆ೦ದರೆ, ಅಣಬೆಯು ಬೇಯುವಾಗ ನೀರನ್ನು ಹೊರಹಾಕುತ್ತದೆ.



Click it and Unblock the Notifications
