Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರುಚಿಕರ ಪೌಷ್ಟಿಕಾಂಶ ಭರಿತ ಮಲೈ ಮಕೈ ಪಾಲಾಕ್ ರೆಸಿಪಿ
ಮಲಾಯ್ ಮಕೈ ಪಾಲಕ್ ರೆಸಿಪಿಯು ಪಾಲಕ್ ಇರುವುದರಿಂದ ರುಚಿಕರವಾಗಿಯು ಮತ್ತು ಪೌಷ್ಟಿಕಾಂಶಭರಿತವಾಗಿಯು ಇರುತ್ತದೆ. ಪಾಲಕ್‌ನಲ್ಲಿ ಕಬ್ಬಿಣಾಂಶ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಮಲಾಯ್ ಅಥವಾ ಕ್ರೀಮ್‍ನಲ್ಲಿ ಸಹ ಕ್ಯಾಲ್ಸಿಯಂ ಇರುತ್ತದೆ. ಇದರ ಜೊತೆಗೆ ಕಾರ್ನ್ ಇರುವುದರಿಂದ ಅದರಲ್ಲೂ ಸಹ ಪೌಷ್ಟಿಕಾಂಶಗಳು ತುಂಬಿ ತುಳುಕುತ್ತಿರುತ್ತವೆ. ಹಾಗಾಗಿ ಮಲಾಯ್ ಕಾರ್ನ್ ಪಾಲಕ್ ರೆಸಿಪಿಯು ಒಟ್ಟಾರೆಯಾಗಿ ಆಹಾರ ಪ್ರಿಯರ ನಾಲಿಗೆಗೆ ರುಚಿಕರವಾಗಿಯು, ಅವರ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶವನ್ನು ಸಹ ನೀಡುತ್ತದೆ. ಮಲಾಯ್ ಕಾರ್ನ್ ಪಾಲಕ್ ರೆಸಿಪಿಯು ಆರೋಗ್ಯದ ಜೊತೆಗೆ ರುಚಿಯನ್ನು ಸಹ ಒದಗಿಸುತ್ತದೆ.
ಆದ್ದರಿಂದ ಬೋಲ್ಡ್‌ಸ್ಕೈ ಇಂದು ನಿಮ್ಮೊಂದಿಗೆ ಮಲೈ ಕಾರ್ನ್ ಪಾಲಕ್ ರೆಸಿಪಿ ಮಾಡುವುದು ಹೇಗೆಂಬ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಈ ರೆಸಿಪಿಯು ಮಲಾಯ್ ಪಾಲಕ್ ಮತ್ತು ಕಾರ್ನ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗೆಯನ್ನು ನಿಮಗೆ ನೀಡುತ್ತದೆ. ಪಾಲಕ್ ಜೊತೆಗೆ ಮಾಡುವ ಆಹಾರ ಪದಾರ್ಥಗಳಲ್ಲಿಯೇ ಇದೊಂದು ಅದ್ಭುತವಾದ ಆಹಾರವಾಗಿರುತ್ತದೆ. ಬನ್ನಿ ಇದನ್ನು ಮಾಡುವ ಬಗೆಯನ್ನು ತಿಳಿದುಕೊಳ್ಳೋಣ.

ಪ್ರಮಾಣ: ಐದು ಜನಕ್ಕೆ ಬಡಿಸಬಹುದು
ತಯಾರಿಕೆಗೆ ತಗುಲುವ ಸಮಯ - 20 ನಿಮಿಷ
ಅಡುಗೆಗೆ ತಗುಲುವ ಸಮಯ- 30 ನಿಮಿಷ
ಮಲಾಯ್ ಪಾಲಕ್ ರೆಸಿಪಿಗೆ ಅಗತ್ಯವಾದ ಪದಾರ್ಥಗಳು
*ಪಾಲಕ್ - 4 ಕಟ್ಟು
*ಸ್ವೀಟ್ ಕಾರ್ನ್ (ಬೇಯಿಸಿದಂತಹುದು) - 1 ಕಪ್
*ಕ್ರೀಮ್ ಅಥವಾ ಅಥವಾ ಮಲಾಯ್ - ಅರ್ಧ ಕಪ್
*ಶುಂಠಿ ಪೇಸ್ಟ್ - ಒಂದು ಟೀ.ಚಮಚ
*ಶುಂಠಿ ಪೇಸ್ಟ್ -1 ಟೀ.ಚಮಚ
*ಹಸಿ ಮೆಣಸಿನ ಕಾಯಿ - 3 ತುಂಡುಗಳು
*ಕತ್ತರಿಸಿದ ಈರುಳ್ಳಿ - ಒಂದು ತುಂಡು
*ಒಣಗಿದ ಕಸೂರಿ ಮೇಥಿ -1 ಟೇಬಲ್ ಚಮಚ
*ಮಾವಿನ ಕಾಯಿಯ ಒಣ ಪುಡಿ - 1 ಟೀ.ಚಮಚ
*ಶಾಹಿ ಜೀರಿಗೆ ಪುಡಿ - 1 ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ತುಪ್ಪ - 2 ಟೀ.ಚಮಚ
ರುಚಿಯಾದ ಪಾಲಾಕ್ ಪನ್ನೀರ್ ಪಾಕ
ಮಲಾಯ್ ಮಕೈ ಪಾಲಕ್ ರೆಸಿಪಿಯನ್ನು ತಯಾರಿಸುವ ಬಗೆ
1. ಪಾಲಕ್ ಸೊಪ್ಪನ್ನು ಬಿಸಿ ನೀರಿನಲ್ಲಿ ಕೆಲ ನಿಮಿಷಗಳ ಕಾಲ ನೆನೆಸಿ. ನಂತರ ಅದನ್ನು ತಣ್ಣೀರಿನಲ್ಲಿ ತೊಳೆಯಿರಿ. ಸಣ್ಣ ತುಂಡುಗಳಾಗಿ ಇದನ್ನು ಕತ್ತರಿಸಿ, ನಂತರ ರುಬ್ಬಿಕೊಳ್ಳಿ.
2. ಇನ್ನು ಬಾಣಲೆಯ ಮೇಲೆ ಎಣ್ಣೆಯನ್ನು ಹಾಕಿಕೊಂಡು, ಜೀರಿಗೆಯ ಹಾಕಿ ಉರಿದುಕೊಳ್ಳಿ. ನಂತರ ಈರುಳ್ಳಿಗಳನ್ನು ಹಾಕಿ, ಹೊಂಬಣ್ಣಕ್ಕೆ ಬರುವ ಹಾಗೆ ಉರಿದುಕೊಳ್ಳಿ.
3. ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಬೆರೆಸಿ. ಹಸಿ ಮೆಣಸಿನ ಕಾಯಿಗಳನ್ನು ಹಾಕಿ, ಕೆಲ ನಿಮಿಷಗಳ ಕಾಲ ಉರಿಯಿರಿ.
4. ಇನ್ನು ಬೇಯಿಸಿದ ಕಾರ್ನ್, ಪಾಲಕ್ ಪೇಸ್ಟ್, ಉಪ್ಪು ಮತ್ತು ಮಾವಿನಕಾಯಿ ಪುಡಿಯನ್ನು ಹಾಕಿ. ಇವುಗಳನ್ನೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದು ಸ್ವಲ್ಪ ಗ್ರೇವಿಯ ರೀತಿ ಬರುವವರೆಗೆ ಬೇಯಿಸಿ.
5. ತದನಂತರ ತಾಜ ಕೆನೆಯನ್ನು ಇದಕ್ಕೆ ಹಾಕಿ ಮತ್ತು ಕಡಿಮೆ ಉರಿಯಲ್ಲಿ, ಇದು ನಿಮಗೆ ಇಷ್ಟವಾಗುವ ಹಾಗೆ ಗ್ರೇವಿಯಂತೆ ಆಗುವವರೆಗೆ ಬೇಯಿಸಿ. ನಂತರ ಇದನ್ನು ಒಲೆಯ ಮೇಲಿನಿಂದ ತೆಗೆದು ಅದಕ್ಕೆ ಸ್ವಲ್ಪ ನಿಂಬೆ, ಹಣ್ಣಿನ ರಸವನ್ನು ಚಿಮುಕಿಸಿ.
6. ಇದೆಲ್ಲ ಆದ ಮೇಲೆ ಇದರ ಮೇಲೆ ಜಜ್ಜಿದ ಕಸೂರಿ ಮೇಥಿಯ ಒಣ ಪುಡಿಯನ್ನು ಹಾಕಿ ಅಲಂಕರಿಸಿ. ಈಗ ನಿಮ್ಮ ಮುಂದೆ ಮಲಾಯ್ ಮಕೈ ಪಾಲಕ್ ಸಿದ್ಧಗೊಂಡಿದೆ ಬಡಿಸಿ.
ಪೋಷಕಾಂಶಗಳ ಪ್ರಮಾಣ
ಮಲಾಯ್ ಮಕೈ ಪಾಲಕ್ ರೆಸಿಪಿಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಆರೋಗ್ಯಕ್ಕೆ ಪೂರಕವಾದಂತಹ ಆಹಾರ ಪದಾರ್ಥವಾಗಿದೆ. ಯಾರು ಇದೀಗ ತಾನೇ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದಾರೋ, ಅವರು ಈ ಪಾಲಕ್‍ನಿಂದ ಮಾಡಿದ ಆಹಾರವನ್ನು ಮಾಡಿಕೊಂಡು ಸವಿಯಬಹುದು.



Click it and Unblock the Notifications







