Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರುಚಿಯಾದ ತೊಂಡೆ ಕಾಯಿ, ಗೋಡಂಬಿ ಪಲ್ಯ

ಆದರೆ ಯಾವಾಗ ಗೋಡಂಬಿ ಮತ್ತು ತೊಂಡೆ ಕಾಯಿ ಪಲ್ಯ ರುಚಿ ಗೊತ್ತಾಯಿತೊ ಅವತ್ತಿನಿಂದ ಪುನಃ ತೊಂಡೆ ಕಾಯಿ ಇಷ್ಟಪಡಲಾರಂಭಿಸಿದೆ. ತೊಂಡೆ ಕಾಯಿ ಮತ್ತು ಗೋಡಂಬಿ ಹಾಕಿ ತಯಾರಿಸುವ ಪಲ್ಯ ತುಂಬಾ ರುಚಿಕರವಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
* ಅರ್ಧ ಕೆಜಿಯಷ್ಟು ತೊಂಡೆಕಾಯಿ ( ತೊಳೆದು ಕತ್ತರಿಸಿಡಬೇಕು)
* ತುರಿದ ತೆಂಗಿನಕಾಯಿ ಅರ್ಧ ಹೋಳು
* ಗೋಡಂಬಿ- ಎರಡು ಹಿಡಿ
* ಚಿಕ್ಕ ಚೂರು ಬೆಲ್ಲ
* ರುಚಿಗೆ ತಕ್ಕ ಉಪ್ಪು
* ಸಾಸಿವೆ
* ಕೆಂಪು ಮೆಣಸಿನ ಕಾಯಿ4- 5
* ಎಣ್ಣೆ
* ಅರಿಶಿಣ 1/4 ಚಮಚ
* ಸ್ವಲ್ಪ ಜೀರಿಗೆ
* ಸ್ವಲ್ಪ ಉದ್ದು
ತಯಾರಿಸುವ ವಿಧಾನ:
1. ತೆಂಗಿನಕಾಯಿ,ಕೆಂಪು ಮೆಣಸಿನ ಕಾಯಿ, ಸ್ವಲ್ಪ ಸಾಸಿವೆ ಅರಿಶಿಣ ಹಾಕಿ ತರಿಯಾಗಿ ರುಬ್ಬಬೇಕು (ಪೇಸ್ಟ್ ರೀತಿ ಮಾಡಬೇಡಿ).
2. ಪಾತ್ರೆಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಉದ್ದು,ಅರಿಶಿನ,ಜೀರಿಗೆ ಹಾಕಬೇಕು.
3. ನಂತರ ತೊಂಡೆ ಕಾಯಿ ಮತ್ತು ಗೋಡಂಬಿ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ. ತೊಂಡೆ ಕಾಯಿ ಅರ್ಧ ಬೆಂದಾಗ ರುಬ್ಬಿದ ತೆಂಗಿನ ಕಾಯಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಂದ ಉರಿಯಲ್ಲಿ ಬೇಯಿಸಬೇಕು.
4. ಈಗ ಸ್ವಲ್ಪ ಬೆಲ್ಲವನ್ನು ತುರಿದು ಮಿಶ್ರ ಮಾಡಬೇಕು ಮತ್ತೆ 5 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿದರೆ ರುಚಿಕರವಾದ ಗೋಡಂಬಿ ಪಲ್ಯ ರೆಡಿ.



Click it and Unblock the Notifications
