Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಮ್ಮೆ ಸವಿದು ನೋಡಿ: ಆಲೂ- ದೊಣ್ಣೆಮೆಣಸಿನ ರೆಸಿಪಿ
ಆಲೂಗಡ್ಡೆಗಳು ಭಾರತದಲ್ಲಿ ಅತ್ಯಂತ ಜನಪ್ರಿಯವಾದ ತರಕಾರಿಗಳಲ್ಲಿ ಒಂದಾಗಿದೆ. ಬಹುತೇಕ ಎಲ್ಲಾ ಬಗೆಯ ಅಡುಗೆಗಳಲ್ಲಿ ಇದನ್ನು ಸಾಮಾನ್ಯವಾಗಿ ಬಳಸುತ್ತಾರೆ, ಇದರಲ್ಲಿರುವ ಪ್ರೋಟೀನ್ ಮತ್ತು ವಿಟಮಿನ್‌ಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ರೋಗಗಳ ವಿರುದ್ಧ ಕೂಡ ಹೋರಾಡುತ್ತವೆ. ಅಲ್ಲದೆ ಇದು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.
ಆದರೆ ಆಲೂಗಡ್ಡೆಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ ಎಂದು ಕೆಲವರು ನಂಬಿದ್ದಾರೆ. ಆದರೆ ಇದನ್ನು ಗ್ರಿಲ್ ಅಥವಾ ಉಗಿಯಲ್ಲಿ ಬೇಯಿಸಿದರೆ, ಆಗ ಇದು ಖಂಡಿತ ತೂಕ ಇಳಿಸಿಕೊಳ್ಳಲು ನೆರವು ನೀಡುತ್ತದೆ. ಮತ್ತೊಂದು ವಿಚಾರವೇನೆಂದರೆ, ಇದಕ್ಕೆ ಹೆಚ್ಚಿನ ಎಣ್ಣೆಯ ಅವಶ್ಯಕತೆ ಇರುವುದಿಲ್ಲ. ಆದರೂ ಸುರಕ್ಷತೆಯ ದೃಷ್ಟಿಯಿಂದ ಇದಕ್ಕೆ ಆಲೀವ್ ಎಣ್ಣೆಯನ್ನು ಬಳಸಿದಷ್ಟು ಉತ್ತಮ. ಬನ್ನಿ ಇಂದು ಮಧ್ಯಾಹ್ನ ಈ ಆಲೂಗಡ್ಡೆಗಳನ್ನು ಬಳಸಿಕೊಂಡು ಆಲೂ - ದೊಣ್ಣೆಮೆಣಸಿನ ರೆಸಿಪಿ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ. ವಾವ್! ನಾಲಿಗೆಯ ರುಚಿ ತಣಿಸುವ ಆಲೂಗಡ್ಡೆ ಪಲ್ಯ

ತಯಾರಿಸುವ ವಿಧಾನ
ಐದು ಜನರಿಗೆ ಬಡಿಸಬಹುದು
ತಯಾರಿಕೆಗೆ ತಗುಲುವ ಸಮಯ: 30 ನಿಮಿಷಗಳು
ಅಡುಗೆಗೆ ತಗುಲುವ ಸಮಯ: 20 ನಿಮಿಷಗಳು

ಅಗತ್ಯವಾಗಿರುವ ಪದಾರ್ಥಗಳು
ಹಸಿರು ದೊಡ್ಡ ಮೆಣಸಿನಕಾಯಿ (ಕ್ಯಾಪ್ಸಿಕಂ) - 5 (ಕ್ಯಾಪ್ಸಿಕಂ ಒಳಗಿರುವ ತಿರುಳನ್ನು ತೆಗೆದು ಆಲೂಗಡ್ಡೆ ಒಳಗೆ ಸೇರಿಸಲು ಬೇಕಾದ ಹಾಗೆ ತಯಾರಿಸಿಕೊಳ್ಳಿ)
ಆಲೂಗಡ್ಡೆ - 5 (ಬೇಯಿಸಿದ, ಸಿಪ್ಪೆ ಸುಲಿದ ಮತ್ತು ಜಜ್ಜಿರುವಂತಹುದು)
ಬಟಾಣಿಗಳು - 1 ಕಪ್ (ಬೇಯಿಸಿದ)
ಎಣ್ಣೆ - 4 ಟೀ.ಚಮಚ

ಅಗತ್ಯವಾಗಿರುವ ಪದಾರ್ಥಗಳು
*ಸಾಸಿವೆ ಬೀಜಗಳು- ½ ಟೀ.ಚಮಚ
*ಈರುಳ್ಳಿ - 1 (ಕತ್ತರಿಸಿದಂತಹುದು)
*ಹಸಿ ಮೆಣಸಿನಕಾಯಿ - 2 (ಸಣ್ಣದಾಗಿ ಕತ್ತರಿಸಿದಂತಹುದು)

ಅಗತ್ಯವಾಗಿರುವ ಪದಾರ್ಥಗಳು
ಜೀರಿಗೆ ಪುಡಿ - 1 ಟೀ.ಚಮಚ
*ಕೊತ್ತೊಂಬರಿ ಪುಡಿ - 1 ಟೀ.ಚಮಚ
*ಅರಿಶಿನ ಪುಡಿ - ½ ಟೀ.ಚಮಚ
*ಖಾರದಪುಡಿ - 1 ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು

ಹೂರಣವನ್ನು ತುಂಬುವ ವಿಧಾನ: ಹಂತ 1
ಒಂದು ಟೇಬಲ್ ಚಮಚ ಎಣ್ಣೆಯನ್ನು ಬಾಣಲೆಯ ಮೇಲೆ ಹಾಕಿ. ಇದು ಬಿಸಿಯಾದ ಮೇಲೆ, ಅದಕ್ಕೆ ಸಾಸಿವೆ ಮತ್ತು ಜೀರಿಗೆಯನ್ನು ಹಾಕಿ. ಅವುಗಳು ಬೇಯುವುವವರೆಗೆ ಕಾಯಿರಿ.

ಹಂತ 2
ಈಗ ಎರಡು ಈರುಳ್ಳಿಗಳನ್ನು ತೆಗೆದುಕೊಂಡು, ಅದನ್ನು ಹೊಂಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.

ಹಂತ 3
ಇನ್ನು ಬಾಣಲೆಗೆ ಕತ್ತರಿಸಿದ ಹಸಿ ಮೆಣಸಿನ ಕಾಯಿಗಳನ್ನು ಹಾಕಿ ಮತ್ತು ಕಡಿಮೆ ಉರಿಯಲ್ಲಿ ಒಂದು ನಿಮಿಷದವರೆಗೆ ಅದನ್ನು ಚೆನ್ನಾಗಿ ಕಲೆಸಿಕೊಡಿ.

ಹಂತ 4
ಬಾಣಲೆಗೆ ಜಜ್ಜಿದ ಆಲೂಗಡ್ಡೆಗಳನ್ನು ಹಾಕಿ. ಇದರೆ ಮೇಲೆ ಜೀರಿಗೆ ಪುಡಿ, ಕೊತ್ತೊಂಬರಿ ಪುಡಿ ಮತ್ತು ಉಪ್ಪನ್ನು ಹಾಕಿ.

ಹಂತ 5
ಈ ಪದಾರ್ಥಗಳನ್ನು ಚೆನ್ನಾಗಿ ಕಲೆಸಿಕೊಡಿ.

ಸ್ಟಪ್ಫ್ ಮಾಡುವ ವಿಧಾನ: ಹಂತ 1
ಆಲೂಗಡ್ಡೆ ತಣ್ಣಗಾದ ಮೇಲೆ, ಅದನ್ನು ಕ್ಯಾಪ್ಸಿಕಂ (ದೊಣ್ಣೆ ಮೆಣಸು) ಒಳಗೆ ಒಂದು ಸಣ್ಣ ಚಮಚದ ಸಹಾಯದಿಂದ ಅಥವಾ ಬೆರಳಿನ ಸಹಾಯದಿಂದ ಸೇರಿಸಿ. ನಂತರ ಅದನ್ನು ಪಕ್ಕದಲ್ಲಿಡಿ. ಈಗ ಉಳಿದ ಎಣ್ಣೆಯನ್ನು ಅದರ ಮೇಲೆ ಹಾಕಿ. ಬಿಸಿಯಾದ ಮೇಲೆ, ಈ ಕ್ಯಾಪ್ಸಿಕಂಗಳನ್ನು ಒಂದರ ಪಕ್ಕ ಒಂದನ್ನು ಬಾಣಲೆಯ ಮೇಲೆ ಹಿಡಿ

ಹಂತ 2
ಈ ದೊಣ್ಣೆಮೆಣಸುಗಳನ್ನು ಕಡಿಮೆ ಉರಿಯಲ್ಲಿ ಚೆನ್ನಾಗಿ ಬೇಯಲು ಬಿಡಿ, ಅಲ್ಲದೆ ಈ ಪಾತ್ರೆಯನ್ನು ಸಂಪೂರ್ಣವಾಗಿ ಮುಚ್ಚಿ.

ಹಂತ 3
ಪ್ರತಿ- 4-5 ನಿಮಿಷಕ್ಕೆ ಒಮ್ಮೆ ಇದನ್ನು ತಿರುವಿಕೊಡಿ. ಹೊಂಬಣ್ಣಕ್ಕೆ ಬರುವವರೆಗೆ ಇದನ್ನು ಬೇಯಿಸುವುದನ್ನು ಮುಂದುವರಿಸಿ.

ಹಂತ-4
ಯಾವಾಗ ಇದರ ಬಣ್ಣವು ಹೊಂಬಣ್ಣಕ್ಕೆ ತಿರುಗುತ್ತದೆಯೋ, ಆಗ ಬಾಣಲೆಗೆ ಉಳಿದ ಆಲೂಗಡ್ಡೆಗಳನ್ನು ಸಹ ಹಾಕಿ. ನಂತರ ಮತ್ತೆ ಒಂದು ನಿಮಿಷ ಬೇಯಿಸಿ, ನಂತರ ತೆಗೆಯಿರಿ. ಇದನ್ನು ರೋಟಿ ಅಥವಾ ಪರೋಟಾಗಳ ಜೊತೆಗೆ ಬಡಿಸಿ.

ಪೋಷಕಾಂಶದ ಸಲಹೆ
ದೊಣ್ಣೆಮೆಣಸು ಒಂದು ಕಡಿಮೆ ಕ್ಯಾಲೋರಿ ಇರುವ ತರಕಾರಿಯಾಗಿದ್ದು, ಇದರಲ್ಲಿ 0 ಗ್ರಾಂ ಕೊಬ್ಬು ಇರುತ್ತದೆ. ಇಂತಹ ತರಕಾರಿಗಳನ್ನು ನಮ್ಮ ಡಯಟ್‌ನಲ್ಲಿ ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ, ಅಂದರೆ ಮೆಣಸುಗಳು ಅಥವಾ ಕ್ಯಾಪ್ಸಿಕಂಗಳನ್ನು ಸೇವಿಸುವುದರಿಂದ ನೀವು ಕಾಯಿಲೆ ಬೀಳುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ.

ಸಲಹೆ
ಒಮ್ಮೆ ನೀವು ಕ್ಯಾಪ್ಸಿಕಂನ ಒಳ ತಿರುಳನ್ನು ತೆಗೆದ ಮೇಲೆ, ಅದನ್ನು ನೀರಿನಲ್ಲಿ ತೊಳೆದು ಸ್ವಲ್ಪ ಸಮಯ ಒಣಗಲು ಬಿಡಿ. ಅದಕ್ಕಾಗಿ ಒಂದು ಪೇಪರ್ ಟವೆಲ್ ಮೇಲೆ ಇದನ್ನು ತಲೆಕೆಳಗಾಗಿ ಇಡಿ. ದೊಣ್ಣೆ ಮೆಣಸಿಗೆ ಆಲೂಗಡ್ಡೆಯನ್ನು ಸೇರಿಸುವಾಗ ಬೆರಳನ್ನು ಬಳಸಿ. ಇದರಿಂದ ಸ್ಟಫ್ಫ್ ಪ್ರಕ್ರಿಯೆ ಚೆನ್ನಾಗಿ ಪೂರ್ಣಗೊಳ್ಳುತ್ತದೆ.



Click it and Unblock the Notifications











