Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಾರಿನ ಪುಡಿ
- ಸುನೀತಾ ಅನಂತರಾಮು, ತುಮಕೂರು
ಇದು ರೆಡಿಮೇಡ್ ಕಾಲ. ಸಾರಿನ ಪುಡಿ ಇರಲಿ, ಸಾರನ್ನೇ ಮನೆಗೆ ತರುವ ಕಾಲ ಇದು. ನಮ್ಮ ಹೆಣ್ಣು ಮಕ್ಕಳಿಗೆ ಸಾರಿನ ಪುಡಿ ಮಾಡೋದು ಮರೆತೇ ಹೋಗಿದೆ. ಮದುವೆಯಾಗಿ ಎರಡು ಮಕ್ಕಳಾದರೂ, ತವರು ಮನೆಯಿಂದಲೇ ಸಾರಿನ ಪುಡಿ ತರುವ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯೇನಿಲ್ಲ. ನಿಜಕ್ಕೂ ಸಾಂಬರ್ ಪುಡಿ ಮಾಡೋದು ಅಷ್ಟೊಂದು ಕಷ್ಟವೇನಿಲ್ಲ. ಅದು ಹೇಗೆ ಅನ್ನೋದನ್ನು ನಾನು ಹೇಳ್ತೀನಿ ಕೇಳಿ.
ಮೊದಲು ಅಂಗಡಿಗೆ ಹೋಗಿ ಕೆಳಕಂಡ ಪದಾರ್ಥಗಳನ್ನು ತಗೊಂಡು ಬನ್ನಿ :
ಅರ್ಧ ಕಿಲೋ ಒಣ ಮೆಣಸಿನ ಕಾಯಿ(ಖಾರ ಕಮ್ಮಿ ಇರಲಿ ಜೊತೆಗೆ ಸ್ವಲ್ಬ ಬಣ್ಣ ಇರಲಿ ಅನ್ನೋರು ಬ್ಯಾಡಗಿ ಮೆಣಸಿನ ಕಾಯಿ ಬಳಸಬಹುದು.)
- 400 ಗ್ರಾಂ ಧನಿಯಾ(ಕೊತ್ತಂಬರಿ ಬೀಜ)
- 100 ಗ್ರಾಂ +100 ಗ್ರಾಂ ಮೆಣಸು ಮತ್ತು ಮೆಂತ್ಯ
- 100 ಗ್ರಾಂ ಜೀರಿಗೆ
- 75 ಗ್ರಾಂ ಸಾಸಿವೆ
- 2ಟೀ ಚಮಚ ಅರಿಶಿನ ಪುಡಿ
- ಸ್ವಲ್ಪ ಪುಡಿ ಮಾಡಿದ ಇಂಗು
- ಒಂದು ಚೂರು ಚಕ್ಕೆ
ಮಾಡೋ ವಿಧಾನ : ಮೊದಲು ಮಾಡಬೇಕಾದ ಕೆಲಸ, ಮೆಣಸಿನಕಾಯನ್ನು ಬಿಸಿಲಲ್ಲಿ ಒಣಗಿಸುವುದು. ಆಮೇಲೆ ಬಾಣಲಿಗೆ ಎರಡು ಚಮಚ ಅಡುಗೆ ಎಣ್ಣೆ ಹಾಕಿ. ಆ ಎಣ್ಣೆಗೆ ಮೆಣಿಸಿನ ಕಾಯಿ ಹಾಕಿ ಚೆನ್ನಾಗಿ ಉರಿಯಿರಿ. ಘಂ ಅನ್ನೋ ವಾಸನೆ ಮೂಗಿಗೆ ಬರುತ್ತೆ.
ಅಮೇಲೆ ಮೆಣಸು, ಮೆಂತ್ಯ, ಜೀರಿಗೆ, ಸಾಸಿವೆ, ಧನಿಯಾ ಎಲ್ಲಾ ಪದಾರ್ಥಗಳನ್ನು ಬೇರೆಬೇರೆಯಾಗಿ ಉರಿಯಿರಿ. ಆಮೇಲೆ ಅನ್ನುವಿರಾ? ಇನ್ನೇನಿದೆ, ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಹೀಗೆ ಮಾಡಿದ ಪುಡಿಯನ್ನು ನಾವು ನಾಲ್ಗೈದು ತಿಂಗಳು ಬಳಸಬಹುದು. ಇನ್ನೇಕೆ ತಡ. ಇನ್ನೆಂದೂ ಅಂಗಡಿಯಿಂದ ಸಾಂಬರ್ ಪುಡಿ ತರೋದಿಲ್ಲ ಅಂಥ ಈಗಲೇ ಪ್ರತಿಜ್ಞೆ ಮಾಡಿ.



Click it and Unblock the Notifications
