Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಬಂಗಾಳಿ ಆಲೂ ಗಸಗಸೆ ಪಲ್ಯ ನಿಮ್ಮ ಮನೆಯಲ್ಲಿ...

ಆಲೂ ಗಸಗಸೆ ಪಲ್ಯಕ್ಕೆ ಏನೇನು ಬೇಕು?
ಈ ಬಂಗಾಳಿ ಮೂಲದ ಪಲ್ಯಕ್ಕೆ ಹೆಚ್ಚೇನೂ ಪದಾರ್ಥಗಳ ಅವಶ್ಯಕತೆಯಿಲ್ಲ. ಚಿಕ್ಕದಾಗಿ ಕತ್ತರಿಸಿದ 5-6 ಆಲೂಗಡ್ಡೆ, 2 ಈರುಳ್ಳಿ, 4 ಹಸಿರು ಮೆಣಸಿನಕಾಯಿ, 2 ಚಮಚ ಗಸಗಸೆ, 1 ಚಮಚ ಕರಿ ಜೀರಿಗೆ, ಸ್ವಲ್ಪ ಅರಿಶಿಣ, ಎಣ್ಣೆ, ಪಲಾವ್ ಎಲೆ 2 ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಇಷ್ಟಿದ್ದರೆ ಸಾಕು.
ಆಲೂ ಗಸಗಸೆ ಪಲ್ಯ ತಯಾರಿಸೋದು ಹೇಗೆ?
* ಎರಡು ಗಂಟೆಯ ಅವಧಿ ಗಸಗಸೆಯನ್ನು ನೀರಿನಲ್ಲಿ ನೆನೆಸಬೇಕು. ಆಲೂಗಡ್ಡೆಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.
* ನೆನೆಸಿಟ್ಟಿದ್ದ ಗಸಗಸೆ ಮತ್ತು ಹಸಿರು ಮೆಣಸಿನಕಾಯಿಯನ್ನು ರುಬ್ಬಿಕೊಳ್ಳಬೇಕು.
* ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಬಿಸಿಯಾಗುತ್ತಿದ್ದಂತೆ ಅದಕ್ಕೆ ಪಲಾವ್ ಎಲೆ ಮತ್ತು ಕರಿ ಜೀರಿಗೆಯನ್ನು ಹಾಕಬೇಕು.
* ಒಂದು ನಿಮಿಷದ ನಂತರ ಕತ್ತರಿಸಿದ್ದ ಈರುಳ್ಳಿ ಹಾಕಿ ಬಣ್ಣ ತಿರುಗುವವರೆಗೂ ಹುರಿಯಬೇಕು.
* ಈಗ ಬಾಣಲೆಗೆ ಆಲೂಗಡ್ಡೆಯನ್ನು ಹಾಕಿ ಆಲೂಗಡ್ಡೆ ಫ್ರೈ ಆದ ವಾಸನೆ ಬರುತ್ತಿದ್ದಂತೆ ರುಬ್ಬಿಕೊಂಡಿದ್ದ ಗಸಗಸೆ ಮತ್ತು ಮೆಣಸಿನ ಕಾಯಿ ಪೇಸ್ಟನ್ನು ಬೆರೆಸಬೇಕು.
* ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆ ಅರಿಶಿಣ ಹಾಕಿ ಚೆನ್ನಾಗಿ ತಿರುಗಿಸಿ 5 ನಿಮಿಷ ಬೇಯಲು ಬಿಡಬೇಕು.
* ಅದು ಒಣಗಿದಂತಾದಾಗ ಅರ್ಧ ಕಪ್ ನೀರು ಹಾಕಬೇಕು. ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು 3-4 ನಿಮಿಷ ಬೇಯಿಸಿದರೆ ಆಲೂ ಗಸಗಸೆ ಪಲ್ಯ ತಿನ್ನಲು ತಯಾರಾಗಿರುತ್ತೆ.



Click it and Unblock the Notifications
