Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಸಿಹಿ ಗೆಣಸು-ಪಾಲಾಕ್ ಕಾಂಬಿನೇಶನ್ ಖಾರಾ ಫ್ರೈ

ಗೆಣಸು ಮತ್ತು ಪಾಲಾಕ್ ಉಪಯೋಗ: ಗೆಣಸಿನಲ್ಲಿ ವಿಟಮಿನ್, ನಾರಿನಂಶ ಮತ್ತು ಆಂಟಿಯಾಕ್ಸಿಡೆಂಟ್ ಹೆಚ್ಚಿರುತ್ತದೆ. ಇದು ಮಧುಮೇಹಿಗಳಿಗೆ ಮತ್ತು ಲೊ ಬಿಪಿ ಇದ್ದವರಿಗೆ ತುಂಬಾ ಉಪಯುಕ್ತ. ಪಾಲಾಕ್ ನಲ್ಲಿ ಕಬ್ಬಿಣಾಂಶ, ವಿಟಮಿನ್, ಫೊಲೇಟ್, ಪೊಟಾಶಿಯಂ ಮತ್ತು ಫಾಸ್ಪರಸ್ ಹೆಚ್ಚಿದೆ. ಕ್ಯಾನ್ಸರ್ ತಡೆಗಟ್ಟುವ ಫ್ಲೇವನಾಯ್ಡ್ ಕೂಡ ಅಧಿಕವಿದೆ.
ಗೆಣಸು ಪಾಲಾಕ್ ಫ್ರೈ ಮಾಡಲು ಏನೇನು ಬೇಕು?
* 2-3 ಸಿಹಿ ಗೆಣಸು (ಸ್ವಲ್ಪವೇ ಬೇಯಿಸಿ ಕತ್ತರಿಸಿರಬೇಕು)
* 1 ಬಟ್ಟಲು ಪಾಲಾಕ್ (ಕತ್ತರಿಸಿರಬೇಕು)
* 2-3 ಹಸಿರು ಮೆಣಸಿನಕಾಯಿ
* 1/2 ಚಮಚ ಗರಂ ಮಸಾಲ ಪುಡಿ
* 1/2 ಚಮಚ ಕೆಂಪು ಮೆಣಸಿನ ಪುಡಿ
* 1/4 ಚಮಚ ಆಮ್ ಚೂರ್ ಪುಡಿ
* ರುಚಿಗೆ ತಕ್ಕಷ್ಟು ಉಪ್ಪು
* 1 ಚಮಚ ಸಾಸಿವೆ
* 1 ಚಮಚ ಬೆಣ್ಣೆ
ಸಿಹಿ ಗೆಣಸು ಪಾಲಾಕ್ ಫ್ರೈ ತಯಾರಿಸುವ ವಿಧಾನ:
* ಸ್ವಲ್ಪವೇ ಬೆಣ್ಣೆಯೊಂದಿಗೆ ಪಾಲಾಕ್ ಸೊಪ್ಪನ್ನು ಹುರಿದುಕೊಳ್ಳಬೇಕು. ಇದಕ್ಕೆ ಬೇಯಿಸಿದ ಸಿಹಿ ಗೆಣಸನ್ನು ಬೆರೆಸಿ ಚೆನ್ನಾಗಿ ತಿರುಗಿಸಬೇಕು.
* ಪಾಲಾಕ್ ಸೊಪ್ಪಿನ ಬಣ್ಣ ಬದಲಾಗುವವರೆಗೂ ಸ್ವಲ್ಪ ನೀರಿನೊಂದಿಗೆ ಬೇಯಿಸಬೇಕು.
* ಇದಕ್ಕೆ ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಆಮ್ ಚೂರ್ ಪೌಡರ್ ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ತಿರುಗಿಸಬೇಕು.
* ಪ್ರತ್ಯೇಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಸಾಸಿವೆ ಒಗ್ಗರಣೆ ಹಾಕಬೇಕು. ಒಗ್ಗರಣೆಯನ್ನು ಗೆಣಸಿನ ಮಿಶ್ರಣಕ್ಕೆ ಬೆರೆಸಿದರೆ ಸಿಹಿ ಗೆಣಸು ಪಾಲಾಕ್ ಫ್ರೈ ತಿನ್ನಲು ರೆಡಿ.



Click it and Unblock the Notifications
