Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಂಗಾಲಿ ಖಾದ್ಯ ನಿಮ್ಮ ಅಡುಗೆ ಮನೆಯಲ್ಲಿ

ಬೇಕಾಗುವ ಸಾಮಗ್ರಿಗಳು:
1. ಚಿಕ್ಕದಾಗಿ ಕತ್ತರಿಸಿದ ಆಲೂಗೆಡ್ಡೆ 2-6
2. ಕತ್ತರಿಸಿದ ಈರುಳ್ಳಿ 2
3. ಹಸಿಮೆಣಸು 4 ಹಾಕಿ ಪೇಸ್ಟ್ ಮಾಡಬೇಕು
4. ಗಸೆಗಸೆ 2 ಚಮಚ
5. ಅರಿಶಿಣ ಒಂದು ಚಿಟುಕು
6. ಸಾಸಿವೆ ಎಣ್ಣೆ 1 ಚಮಚ
7. ಪಲಾವ್ ಎಲೆ 2
9. ಉಪ್ಪು ರುಚಿಗೆ ತಕ್ಕಷ್ಟು
10. ಕರಿ ಜೀರಿಗೆ 1 ಚಮಚ
ಮಾಡುವ ವಿಧಾನ:
1. ಗಸೆಗಸೆಯನ್ನು 2 ಗಂಟೆಗಳ ನೀರಿನಲ್ಲಿ ನೆನೆ ಹಾಕಿರಬೇಕು.
2. ಆಲೂಗೆಡ್ಡೆಯನ್ನು ಸ್ವಲ್ಪ ನೀರಿನಲ್ಲಿ ಬೇಯುವಂತೆ ಚಿಕ್ಕದಾಗಿ ಕತ್ತರಿಸಬೇಕು.
3. ಗಸೆಗಸೆಯನ್ನು ಸ್ವಲ್ಪ ಹುರಿದು ಅದನ್ನು ಮತ್ತು ಮೆಣಸನ್ನು ಸೇರಿಸಿ ಅರಿಯಬೇಕು.
4. ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಅದು ಕುದಿ ಬಂದ ನಂತರ ಅದಕ್ಕೆ ಪಲಾವ್ ಎಲೆ ಮತ್ತು ಕರಿ ಜೀರಿಗೆಯನ್ನು ಹಾಕಬೇಕು.
5. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಅದು ಕಂದು ಬಣ್ಣ ಬರುವವರೆಗೆ ಹುರಿಯಬೇಕು.
6. ಈಗ ಆಲೂಗೆಡ್ಡೆ ಹಾಕಿ ಹುರಿಯಬೇಕು, ಆಲೂಗೆಡ್ಡೆ ವಾಸನೆ ಬರಲು ಪ್ರಾರಂಭಿಸಿದಾಗ ಅದಕ್ಕೆ ಗಸೆಗಸೆ ಮತ್ತು ಮೆಣಸಿನ ಪೇಸ್ಟ್ ಹಾಕಬೇಕು.
7. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಅರಿಶಿಣ ಹಾಕಿ 2-3 ನಿಮಿಷ ಹುರಿದು ನಂತರ 1/2 ಕಪ್ ನೀರು ಹಾಕಿ ತಪ್ಪಲಿಯನ್ನು ಮುಚ್ಚಿ ಬೇಯಲು ಬಿಡಬೇಕು.
8. ಸ್ವಲ್ಪ ಹೊತ್ತು ಬಿಟ್ಟು ಅದನ್ನು ಒಮ್ಮೆ ಸೌಟಿನಿಂದ ತಿರುಗಿಸಿ ಸಣ್ಣ ಉರಿಯಲ್ಲಿ 3-4 ನಿಮಿಷ ಬೇಯಿಸಿದರೆ ಗಸೆಗಸೆ ಬೆಂಗಾಲಿ ಆಲೂ ಪಲ್ಯ ರೆಡಿ.



Click it and Unblock the Notifications
