Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಳಿಯಲ್ಲಿ ಚನ್ನಾ ಮಸಾಲಾ ರುಚಿ ನೋಡಿ

ಚನ್ನಾ ಮಸಾಲಾಗೆ ಏನೇನು ಬೇಕು?
* 1 ಕಪ್ ಕಡಲೆಕಾಳು (ಒಂದು ರಾತ್ರಿಯಿಡೀ ನೆನೆಸಿರಬೇಕು)
* 2 ಚಿಕ್ಕ ಈರುಳ್ಳಿ (ತುರಿದಿದ್ದು)
* 2 ಟೊಮೆಟೊ (ಚಿಕ್ಕದಾಗಿ ಕತ್ತರಿಸಿರಬೇಕು)
* ಶುಂಠಿ ಬೆಳ್ಳುಳ್ಳಿ ಪೇಸ್ಟ್
* ಹಸಿರು ಮೆಣಸಿನಕಾಯಿ
* ಚೆಕ್ಕೆ, ಲವಂಗ ಪುಡಿ
* ಜೀರಿಗೆ, ಪಲಾವ್ ಎಲೆ
* ಕೆಂಪು ಮೆಣಸಿನಕಾಯಿ ಪುಡಿ
* ಅರಿಶಿನ, ಗರಂ ಮಸಾಲೆ, ಧನ್ಯಾ ಪುಡಿ
* ಉಪ್ಪು, ಹುಣಸೆ, ಟೀ ಸೊಪ್ಪು
* ಎಣ್ಣೆ
* ಬೆಣ್ಣೆ, ಕೊತ್ತಂಬರಿ ಸೊಪ್ಪು
ಚನ್ನಾ ಮಸಾಲ ಮಾಡುವುದು ಹೀಗೆ:
* ನೆನೆಸಿದ ಕಡಲೆಕಾಳು, ನೀರು ಮತ್ತು ತೆಳುವಾದ ಬಟ್ಟೆಯಲ್ಲಿ ಟೀ ಪುಡಿ ಅಥವಾ ಟೀಸೊಪ್ಪನ್ನು ಕಟ್ಟಿ ಸ್ವಲ್ಪ ಉಪ್ಪು ಬೆರೆಸಿ ಕುಕ್ಕರಿನಲ್ಲಿ 3-4 ಬಾರಿ ಕೂಗುವವರೆಗೂ ಬೇಯಿಸಬೇಕು. (ಟೀ ಬ್ಯಾಗ್ ಕೂಡ ಉಪಯೋಗಿಸಬಹುದು)
* ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಜೀರಿಗೆ ಮತ್ತು ಪಲಾವ್ ಎಲೆ ಹಾಕಿ ಹುರಿಯಬೇಕು. ಕೆಲವು ಸೆಕೆಂಡ್ ಗಳ ನಂತರ ಈರುಳ್ಳಿ ಹಾಕಿ ಅದು ಕೆಂಬಣ್ಣಕ್ಕೆ ತಿರುಗುತ್ತಿದ್ದಂತೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಮೆಣಸಿನ ಕಾಯಿ ಹಾಕಬೇಕು.
* ನಂತರ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಚೆಕ್ಕೆ ಲವಂಗದ ಪುಡಿ, ಧನ್ಯಾ ಪುಡಿ ಹಾಕಿ ಟೊಮೆಟೊ ಬೆರೆಸಬೇಕು.
* ಈಗ ಸ್ವಲ್ಪ ಹುರಿದು ಗರಂ ಮಸಾಲ, ಕೆಂಪು ಮೆಣಸಿನ ಕಾಯಿ ಪುಡಿ ಮತ್ತು ಕುಕ್ಕರ್ ನಲ್ಲಿ ಬೇಯಿಸಿದ ನೀರನ್ನು ಸ್ವಲ್ಪ ಹಾಕಬೇಕು.
* ಇದರೊಳಗೆ ಬೇಯಿಸಿದ ಕಡಲೆಕಾಳನ್ನು ಹಾಕಿ ಬೇಯಲು ಬಿಡಬೇಕು. ಒಂದು ಚಿಕ್ಕ ಬಟ್ಟಲಿನಲ್ಲಿ ಸ್ವಲ್ಪ ನೀರು, ಸಕ್ಕರೆ ಮತ್ತು ಹುಣಸೆಹಣ್ಣನ್ನು ಹಾಕಿ ನೆನೆಸಬೇಕು.
* ಕಡಲೆಕಾಳು ಗಟ್ಟಿಯಾಗುತ್ತಿದ್ದಂತೆ ಹುಣಸೆ ಹಣ್ಣನ್ನು ಹಿಂಡಿ ರಸವನ್ನು ಸೇರಿಸಬೇಕು.
* ಕೊನೆಗೆ ಅದರ ಮೇಲೆ ಕತ್ತರಿಸಿದ ಕೊತ್ತಂಬರಿ ಮತ್ತು ಬೆಣ್ಣೆಯನ್ನು ಹಾಕಿದರೆ ಸಖತ್ತಾದ ಚೆನ್ನಾ ಮಸಾಲದ ರುಚಿಯನ್ನು ನೀವು ಮನಸ್ಸಾರೆ ಸವಿಯಬಹುದು.



Click it and Unblock the Notifications
