Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗಣೇಶನಿಗೆ ಕಡಲೆ ಉಸುಳಿ ಹೀಗೆ ಮಾಡಿ ನೋಡಿ
ಗೌರಿ ಗಣೇಶ ಹಬ್ಬ ಬರಲು ಇನ್ನೇನು ಕೆಲವೇ ದಿನಗಳಿವೆ. (ಗೌರಿ-ಆ.31-2011, ಗಣೇಶ-ಸೆ. 1, 2011). ಹಬ್ಬಗಳೆಂದ ಮೇಲೆ ಮನೆಯಲ್ಲಿ ತಿಂಡಿ ಊಟದ್ದೇ ಕಾರುಬಾರು. ಖಾದ್ಯಗಳಲ್ಲಿ ಹೊಸತನವಿದ್ದರೇನೆ ಹಬ್ಬಕ್ಕೆ ಕಳೆ. ಗಣೇಶನಿಗೆ ಪ್ರಿಯವಾದ ಕಡಲೆಕಾಳಿನ ಉಸುಳಿ ಇಲ್ಲದಿದ್ದರೆ ಈ ಹಬ್ಬಕ್ಕೆ ಅರ್ಥವೇ ಇಲ್ಲ.
ಕಡಲೆಕಾಳು ಉಸುಳಿಯನ್ನು ಅತಿ ಸುಲಭವಾಗಿ ಮತ್ತು ವಿಶೇಷವಾಗಿ ತಯಾರಿಸಬಹುದಾದ ವಿಧಾನ ಇಲ್ಲಿದೆ. ಈ ಬಾರಿಯ ಗಣೇಶ ಹಬ್ಬಕ್ಕೆ ವಿಶೇಷ ಉಸುಳಿ ಮಾಡಿ ಗಣೇಶನಿಗೆ ನೈವೇದ್ಯಕ್ಕೆ ಇಡುವುದನ್ನು ಮರೆಯಬೇಡಿ.
ಬೇಕಾಗುವ ಪದಾರ್ಥಗಳು:
* 1 1/2 ಕಪ್ ಕಡಲೆಕಾಳು
* ಮೂರು ಚಮಚ ತುರಿದಿಟ್ಟುಕೊಂಡ ಕಾಯಿ
* ಸಾಸಿವೆ, ಉದ್ದಿನ ಬೇಳೆ, ಉಪ್ಪು
* ಎರಡು ಕೆಂಪು ಮೆಣಸಿನ ಕಾಯಿ
* ಕರಿಬೇವು, ಇಂಗು ಮತ್ತು ಎಣ್ಣೆ
* ಗರಂ ಮಸಾಲ ಸ್ವಲ್ಪ
ಮಾಡುವ ವಿಧಾನ: ಹಬ್ಬದ ಹಿಂದಿನ ದಿನ ಕಡಲೆಕಾಳನ್ನು ಒಂದು ರಾತ್ರಿ ನೆನೆಸಿಡಬೇಕು. ನಂತರ ಕಡಲೆಕಾಳನ್ನು ಚೆನ್ನಾಗಿ ಸೋಸಿ ಬೇಯಿಸಿ ಇಟ್ಟುಕೊಳ್ಳಬೇಕು. ನೀರನ್ನು ಬಸಿದ ನಂತರ ಸ್ವಲ್ಪ ಸಮಯ ಕಡಲೆಕಾಳನ್ನು ಹಾಗೆಯೇ ಆರಲು ಬಿಡಬೇಕು. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ, ಅದು ಕಾದ ನಂತರ ಸಾಸಿವೆ, ಉದ್ದಿನ ಬೇಳೆ, ಮತ್ತು ಕೆಂಪು ಮೆಣಸಿನ ಕಾಯಿಯನ್ನು ತುಂಡಾಗಿ ಕತ್ತರಿಸಿ ಹಾಕಬೇಕು.
ನಂತರ ಅದಕ್ಕೆ ಕರಿಬೇವು ಹಾಕಿ ಇಂಗು ಮತ್ತು ಸ್ವಲ್ಪ ಗರಂ ಮಸಾಲ ಬೆರೆಸಿ ಹುರಿದುಕೊಳ್ಳಬೇಕು. ಕೊನೆಗೆ ತೆಂಗಿನ ತುರಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಒಲೆಯಿಂದ ಕೆಳಗೆ ಇಳಿಸಬೇಕು. ಈಗ ಈ ಮಿಶ್ರಣವನ್ನು ಚೆನ್ನಾಗಿ ಕದಡಿ ಅದಕ್ಕೆ ಬೇಯಿಸಿದ ಕಡಲೆಕಾಳನ್ನು ಬೆರೆಸಿಕೊಂಡು ಕಾಯಿ ತುರಿ ಚೆನ್ನಾಗಿ ಹರಡಿಕೊಳ್ಳುವವರೆಗೂ ಉಸುಳಿಯನ್ನು ಉರಿದು ಕೆಳಗಿಳಿಸಬೇಕು.
ಈಗ ಕಡಲೆಕಾಳು ಉಸುಳಿ ನೈವೇದ್ಯಕ್ಕೆ ತಯಾರಾಗಿದೆ. ( ಸೂಚನೆ: ಕಡಲೆಕಾಳು ಬೇಯಿಸುವಾಗಲೂ ಸ್ವಲ್ಪ ಉಪ್ಪು ಬೆರೆಸಿದ್ದರಿಂದ ಉಪ್ಪನ್ನು ಹಾಕುವಲ್ಲಿ ಜಾಗ್ರತೆಯಿಂದಿರಬೇಕು).



Click it and Unblock the Notifications
