Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಎಲ್ಲ ತಿನಿಸುಗಳ ಸಂಗಾತಿ ಕಡಲೆಬೇಳೆ ಚಟ್ನಿಪುಡಿ

* ಭಾರತಿ ಚಂದ್ರಶೇಖರ್, ಬೆಂಗಳೂರು
ಬೇಕಾಗುವ ಪದಾರ್ಥಗಳು
ಕಡಲೆಬೇಳೆ 1/2 ಲೋಟ
ಉದ್ದಿನ ಬೇಳೆ 1/2 ಲೋಟ
ಕಡಲೆಕಾಯಿ ಬೀಜ 1/2 ಲೋಟ
ಬ್ಯಾಡಗಿ ಮೆಣಸಿನಕಾಯಿ 15
ಒಣ ಕೊಬ್ಬರಿ 1 ಬಟ್ಟಲು
ಹುಣಿಸೇಹಣ್ಣು 1 ನಿಂಬೆ ಗಾತ್ರ
ಮಾಡುವ ವಿಧಾನ
ಬಾಣಲೆಗೆ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಬೇರೆ ಬೇರೆಯಾಗಿ ಮಧ್ಯಮ ಉರಿಯಲ್ಲಿ ಹದವಾಗಿ ಹುರಿದುಕೊಳ್ಳಿ. ಬೇಳೆಗಳನ್ನೂ, ಆಮೇಲೆ ಹುಣಸೆ ಹಣ್ಣನ್ನು ಮಿಕ್ಷಿಗೆ ಹಾಕಿ ಪುಡಿ ಮಾಡಿ. ಒಣ ಕೊಬ್ಬರಿ ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಬ್ಯಾಡಗಿ ಮೆಣಸಿನಕಾಯಿ ಇಲ್ಲದಿದ್ದಲ್ಲಿ ಅಚ್ಚ ಮೆಣಸಿನಪುಡಿ 2 ಚಮಚ ತೆಗೆದುಕೊಳ್ಳಿ. ಇದನ್ನು ಹುರಿಯುವುದು ಬೇಡ. ಎಲ್ಲಾ ಮಿಕ್ಸ್ ಮಾಡುವಾಗ ಹಾಕಿ ಕೊಳ್ಳಬೇಕು.
ವಗ್ಗರಣೆ ಹಾಕಲು
ಸಾಸಿವೆ 2 ಚಮಚ
ಇಂಗು 1/2 ಚಮಚ
ಎಣ್ಣೆ 6 ಚಮಚ
ಕರಿಬೇವಿನ ಸೊಪ್ಪು 1 ದೊಡ್ಡ ಬಟ್ಟಲು
ಈಗ ಬೇರೆ ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಸಾಸಿವೆ, ಇಂಗು ಮತ್ತು ಕರಿಬೇವು ಹಾಕಿ ಚೆನ್ನಾಗಿ ಹುರಿದು, ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಕರಿಬೇವನ್ನು ಕೈಯಲ್ಲಿ ಚೆನ್ನಾಗಿ ಹಿಸುಕಿ ಪುಡಿಮಾಡಿಟ್ಟುಕೊಳ್ಳಿ. ಈಗ ಮಾಡಿಟ್ಟುಕೊಂಡ ಎಲ್ಲ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು 2 ಚಮಚ ಸಕ್ಕರೆ (ಬೇಕಿದ್ದರೆ) ಹಾಕಿ ರುಚಿ ನೋಡಿ. ಹೆಚ್ಚು ಖಾರ ಬೇಕೆನಿಸಿದರೆ ಅಚ್ಚ ಖಾರದಪುಡಿ ಹಾಕಿ ಕೊಳ್ಳಿ.
ಬಾಯಲ್ಲಿ ನೀರೂರಿಸುವ ಕಡಲೆಬೇಳೆ ಚಟ್ನಿಪುಡಿಯನ್ನು ಅನ್ನ, ಉಪ್ಪಿಟ್ಟು, ಚಪಾತಿ, ರೊಟ್ಟಿಗಳೊಡನೆ ತಿನ್ನಲು ಸಖತ್ತಾಗಿರುತ್ತದೆ. ಚಟ್ನಿಪುಡಿಗೆ ಮೊಸರು ಸೇರಿಸಿದರೆ ಅದರ ಗಮ್ಮತ್ತೇ ಬೇರೆ.



Click it and Unblock the Notifications
