Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದಟ್ಸ್ ಪಾಕಶಾಲೆ: ಪರಂಗಿಕಾಯಿ ಪಲ್ಯ
ಪರಂಗಿಕಾಯಿ ಹೇರಳ ಪೋಷಕಾಂಶಗಳ ಕಣಜ. ಶರ್ಕರಪಿಷ್ಠ, ಅನ್ನಾಂಗ ಎ, ಬಿ1, ಬಿ2, ಬಿ3, ಬಿ6, ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ, ಮೆಗ್ನಿಷಿಯಂ, ರಂಜಕ, ಪೊಟಾಷಿಯಂ, ಸೋಡಿಯಂ ಅಂಶಗಳು ಯಥೇಚ್ಛವಾಗಿವೆ. ಇಷ್ಟೆಲ್ಲಾ ಪೋಷಕಾಂಶಗಳನ್ನು ಹೊಂದಿರುವ ಪರಂಗಿಕಾಯಿ ಬೆಲೆಯೂ ಅಗ್ಗ್ಗ. ಒಮ್ಮೆ ಪ್ರಯತ್ನಿಸಿ ನೋಡಿ ಎನ್ನುತ್ತಿದ್ದಾರೆ ಬೆಂಗಳೂರಿನ ಶ್ರೀರಕ್ಷಾ.
ಬೇಕಾಗುವ ಸಾಮಗ್ರಿ
ಪರಂಗಿಕಾಯಿ: 1
ಈರುಳ್ಳಿ: 1
ಬೆಳ್ಳುಳ್ಳಿ: 1
ಜೀರಿಗೆಪುಡಿ: 1 ಚಮಚ
ತೆಂಗಿನ ತುರಿ: 1 ಬಟ್ಟಲು
ಹುಣಸೆಹಣ್ಣು: ½ ನಿಂಬೆಹಣ್ಣಿನ ಗಾತ್ರದ್ದು
ಸಾಸಿವೆ, ಕರಿಬೇವು, ಎಣ್ಣೆ: ಒಗ್ಗರಣೆಗೆ
ಉಪ್ಪ್ಪು: ರುಚಿಗೆ ತಕ್ಕಷ್ಟು
ಬೆಲ್ಲ: ಒಂಚೂರು
ತಯಾರಿಸುವ ವಿಧಾನ:
ಪರಂಗಿಕಾಯಿಯ ಸಿಪ್ಪೆ ತೆಗೆದು ಸಣ್ಣ ಸಣ್ಣ ಹೋಳುಗಳಾಗಿ ಹೆಚ್ಚಿಟ್ಟುಕೊಳ್ಳಿ. ಅಗಲವಾದ ಪಾತ್ರೆಯಲ್ಲಿ ಸಾಸಿವೆ, ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ, ಬೆಳ್ಳ್ಳುಳ್ಳಿ, ಕರಿಬೇವುವನ್ನು ಎಣ್ಣೆಗೆ ಹಾಕಿ ಒಗ್ಗರಣೆ ತಯಾರಿಸಿ. ಸ್ವಲ್ಪ ನೀರು , ಪರಂಗಿ ಹೋಳುಗಳನ್ನು ಸೇರಿಸಿ ಚೆನ್ನಾಗಿ ಬೇಯಿಸಿ.
ಚೆನ್ನಾಗಿ ಬೆಂದ ನಂತರ, ಜೀರಿಗೆ ಪುಡಿ, ತೆಂಗಿನ ತುರಿ, ಉಪ್ಪು, ಹುಣಸೆಹಣ್ಣು ತಿರುಳು, ಬೆಲ್ಲ ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ಕಲಸಬೇಕು. ಪಾತ್ರೆಯನ್ನು ಮುಚ್ಚಿಟ್ಟು ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿ. ಪರಂಗಿಕಾಯಿ ಪಲ್ಯವನ್ನು ಚಪಾತಿ, ದೋಸೆಯೊಂದಿಗೆ ಮೆಲ್ಲಬಹುದು.



Click it and Unblock the Notifications
