Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಪಪ್ಪಾಯಿಕಾಯಿ ಅಥವಾ ಪರಂಗಿ ಗೊಜ್ಜು

ಬೇಕಾಗುವ ಪದಾರ್ಥಗಳು
ಪಪ್ಪಾಯಿ ಅಥವಾ ಪರಂಗಿ ಕಾಯಿ 1
ಬೆಲ್ಲ ದೊಡ್ಡ ಗಾತ್ರದ ನಿಂಬೆಹಣ್ಣಿನಷ್ಟು
ಹಸಿಮೆಣಸಿನಕಾಯಿ 6
ಹುಣಸೆಹಣ್ಣು ಸಣ್ಣ ತುಂಡು
ಉಪ್ಪು (ಹರಳುಪ್ಪಿದ್ದರೆ ಉತ್ತಮ)
ಸಾಸಿವೆ
ಇಂಗು
ಅರಿಷಿಣ
ಎಣ್ಣೆ
ತಯಾರಿಸುವ ವಿಧಾನ
ಪಪ್ಪಾಯಿ ಕಾಯಿಯನ್ನು ತೊಳೆದು ಅದರ ಸಿಪ್ಪೆಯನ್ನು ಸುಲಿದು ಸಣ್ಣ ಹೋಳುಗಳನ್ನಾಗಿ ಹೆಚ್ಚಿಕೊಳ್ಳಬೇಕು. ಹೋಳುಗಳನ್ನು ಕುಕ್ಕರಿನಲ್ಲಿಟ್ಟು ಸ್ವಲ್ಪ ನೀರು ಹಾಕಿ ಒಂದೇ ಒಂದು ವಿಷಲ್ ಆಗುತ್ತಿದ್ದಂತೆ ಇಳಿಸಿಬಿಡಿ.
ಇನ್ನೊಂದು ಬದಿಯಲ್ಲಿ ಹುಣಸೆಹಣ್ಣು, ಹಸಿಮೆಣಸಿನಕಾಯಿ, ಬೆಲ್ಲ, ಉಪ್ಪು ಸೇರಿಸಿ ಒರಳುಕಲ್ಲಿದ್ದರೆ ಒರಳುಕಲ್ಲಿನಲ್ಲಿ, ಇಲ್ಲದಿದ್ದರೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಒಂದು ಅಗಲದ ಪಾತ್ರೆಯಲ್ಲಿ ಎಣ್ಣೆ ಹಾಕಿ ತುಸು ಬಿಸಿಯಾದ ನಂತರ ಸಾಸಿವೆ, ಅರಿಷಿಣ, ಇಂಗು ಹಾಕಿ ಅದಕ್ಕೆ ಹಾಕಿರುಬ್ಬಿಕೊಂಡದ್ದನ್ನು ಮತ್ತು ಬೆಂದ ಪಪ್ಪಾಯಿಕಾಯಿಯನ್ನು ಸೇರಿಸಿ ಕುದಿಯಲು ಬಿಡಿ. ಪಾತ್ರೆಯ ಮೇಲೆ ಒಂದು ತಟ್ಟೆ ಇಡುವುದನ್ನು ಮರೆಯಬೇಡಿ.
ಪಪ್ಪಾಯಿಕಾಯಿ ಅಥವಾ ಪರಂಗಿ ಗೊಜ್ಜು ಬಿಸಿ ಅನ್ನದೊಡನೆ ಅಥವಾ ಚಪಾತಿ ಅಥವಾ ದೋಸೆಯೊಡನೆ ತಿನ್ನಲು ಚೆನ್ನಾಗಿರುತ್ತದೆ.



Click it and Unblock the Notifications
