Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗುಂಡಿನ ಝುಣಕ ಮತ್ತು ಝುಣಕದ ವಡೆ

* ಸೌಭಾಗ್ಯ ಕಿತ್ತೂರ್, ಧಾರವಾಡ
ಬೇಕಾಗುವ ಸಾಮಗ್ರಿಗಳು
ಸಾಧಾರಣ ಗಾತ್ರದ ಈರುಳ್ಳಿ 2ರಿಂದ 3
ಕಡಲೆ ಹಿಟ್ಟು
ಒಣಕೊಬ್ಬರಿ
ಜೀರಿಗೆ
ಕೊತ್ತಂಬರಿ
ಕರಿಬೇವು
ಹಸಿ ಮೆಣಸಿನಕಾಯಿ
ಹಸಿಶುಂಠಿ, ಅಡುಗೆ ಎಣ್ಣೆ ಹಾಗೂ ಉಪ್ಪು
ಗುಂಡಿನ ಝುಣಕ
ಮೊದಲಿಗೆ ಗುಂಡಿನ ಝುಣಕ ಮಾಡುವ. ಇದರ ತಯಾರಿಕೆ ಝುಣಕದಂತೆಯೇ. ಈಗಾಗಲೇ ಒಗ್ಗರಣೆ ಮುಗಿಸಿ, ನೀರು ಸೇರಿಸಿ ಕುದಿಯಲು ಬಿಟ್ಟಿದ್ದೀರಿ. ಕೊಬ್ಬರಿ, ಜೀರಿಗೆ, ಕೊತ್ತಂಬರಿಯನ್ನೂ ಬೆರಸಿದ್ದೀರಿ. ಈಗ ಕಡಲೆಹಿಟ್ಟನ್ನು ಪ್ರತ್ಯೇಕವಾಗಿ ಕಲೆಸಿಕೊಳ್ಳಿ. ಹಿಟ್ಟು ಉಂಡೆ ಮಾಡಲು ಬರುವಂತೆ ಗಟ್ಟಿಯಾಗಿರಲಿ. ಆ ಹಿಟ್ಟಿನಿಂದ ಸಣ್ಣ ಸಣ್ಣ ಗೋಲಿಗಳನ್ನು ತಯಾರಿಸಿ. ಅವುಗಳನ್ನು ಕುದಿಯುತ್ತಿರುವ ನೀರಿಗೆ ಬೆರೆಸಿಬಿಡಿ. ಕುದಿಯಲು ಶುರು ಮಾಡಿದ ನಂತರ ಮತ್ತೆ ಕಡಲೆಹಿಟ್ಟು ಉದುರಿಸುವುದು- ಕಲಕುವುದು ಪ್ರಕ್ರಿಯೆ ಮುಂದುವರಿಯಲಿ. ಹದ ನಿಮಗೆ ಗೊತ್ತು. ಅಲ್ಲಿಗೆ ಗುಂಡಿನ ಝುಣಕ ಸಿದ್ಧ. ಚಮಚೆ ತುಪ್ಪ ಬಿದ್ದರೆ ಝುಣಕದ ಮಜಾನೇ ಬೇರೆ.
ಗುಂಡಿನ ಝುಣಕದ ಗಮ್ಮತ್ತೇ ಗಮ್ಮತ್ತು. ಬಿಸಿಬಿಸಿ ಅನ್ನದ ಜೊತೆ ಮತ್ತೊಂದಿಷ್ಟು ತುಪ್ಪ ಬೆರೆಸಿ ಗುಂಡುಗಳನ್ನು ಏರಿಸಲು ಪ್ರಾರಂಭಿಸಿದರೆ....
ಝುಣಕದ ವಡೆ
ವಡೆ ಝುಣಕದ್ದು ಬೇರೆಯೇ ಬಗೆ. ಝುಣಕ ತಯಾರಿಸುವ ಬಗೆಯನ್ನೇ ಮುಂದುವರಿಸಿ. ಕೊನೆಯಲ್ಲಷ್ಟೇ ತುಸು ಬದಲಾವಣೆ. ಝುಣಕ ಹದಕ್ಕೆ ಬಂದ ನಂತರವೂ ಕಡಲೆಹಿಟ್ಟು ಸುರಿಯುವುದನ್ನು ಮುಂದುವರಿಸಿ. ದ್ರಾವಣ ಸಾಕಷ್ಟು ಗಟ್ಟಿಯಾಗಲಿ. ಸರಿ ಸುಮಾರು ಕೆನೆ ಮೊಸರಿಗಿಂತ ಗಟ್ಟಿಯಾಗುವ ಝುಣಕವನ್ನು ಒಂದು ಅಗಲವಾದ ತಟ್ಟೆಯ ಮೇಲೆ ಸುರುವಿ. ಅದನ್ನು ವಡೆಗಳ ರೂಪದಲ್ಲಿ ತಟ್ಟಿ ಕೊಳ್ಳಬಹುದು. ಬೇಕಿದ್ದರೆ ಮೇಲೆ ಹಸಿ ಕೊಬ್ಬರಿ, ಕೊತ್ತಂಬರಿ ಸೊಪ್ಪಿನ ಅಲಂಕಾರದ ಟಚ್ ಕೊಡ ಕೊಡಬಹುದು.
ವಡೆ ಝುಣಕದ ಇನ್ನೊಂದು ಪ್ರಯೋಜನವಿದೆ. ಹಸಿ ಕೊಬ್ಬರಿಯ ಬದಲು ಒಣ ಕೊಬ್ಬರಿ ಬಳಸಿ ಝುಣಕದ ವಡೆ ತಯಾರಿಸಿದರೆ ಜಾಸ್ತಿ ಹೊತ್ತು ಕೆಡುವುದಿಲ್ಲ ಮತ್ತು ರೈಲಿನಲ್ಲಿ ಪ್ರಯಾಣ ಮಾಡುವಾಗ ಚಪಾತಿ ಅಥವಾ ಪೂರಿಯೊಂದಿಗೆ ತಿನ್ನಲು ಸಖತ್ತಾಗಿರುತ್ತದೆ.
ಇದನ್ನು ಮಾಡಿದಿರಾ?
ಭಕ್ಕರಿಯೊಂದಿಗೆ ಇರಲೇಬೇಕು ಝುಣಕ



Click it and Unblock the Notifications
