Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ವಿಟಮಿನ್ 'ಸಿ' ಭರಿತ ಎಲೆಕೋಸು ಪಲ್ಯ
ಕೋಸು ಪಲ್ಯ ಅಂದರೆ ಬೋರಿಂಗ್ ಪಲ್ಯಕ್ಕೆ ಇನ್ನೊಂದು ಹೆಸರು ಅಲ್ಲವೇ? ಅದರಲ್ಲೂ ಹಾಸ್ಟೆಲ್ನಲ್ಲಿ ಇದ್ದು ಓದಿದವರಿಗಂತೂ ಹೆಸರೆತ್ತಿದರೆ ವಾಕರಿಕೆ ಬರುವಷ್ಟು ರೋಸಿ ಹೋಗಿರುತ್ತದೆ. ಆದರೆ ಎಲೆಕೋಸು ಅಥವಾ ಕ್ಯಾಬೇಜ್ ಒಂದು ಉತ್ತಮ ತರಕಾರಿ. ಹೇರಳ ವಿಟಮಿನ್, ಖನಿಜಾಂಶವುಳ್ಳ, ಅತಿ ಕಡಿಮೆ ಕ್ಯಾಲೋರಿ ಪ್ರಮಾಣ ಇರುವ ಆರೋಗ್ಯಕರ ಕಾಯಿಪಲ್ಯೆ. ದೇಹತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಹೇಳಿ ಮಾಡಿಸಿದ ಆಹಾರ.
ಕ್ಯಾಬೇಜನಲ್ಲಿ ಧಾರಾಳವಾಗಿ ವಿಟಾಮಿನ್ ಸಿ ಇದೆ. 1 ಕಪ್ ಕ್ಯಾಬೇಜ್ನಲ್ಲಿ 61% ದೈನಂದಿನ ಅವಶ್ಯಕತೆಯ ವಿಟಮಿನ್ ಸಿ ಇದೆ! 1 ಕಪ್ ಕ್ಯಾಬೆಜಿನ ಹೊರ ದಟ್ಟ ಹಸಿರು ವರ್ಣದ ಎಲೆಗಳಲ್ಲಿ 1 ಕಪ್ ಹಾಲಿನಲ್ಲಿದ್ದಕ್ಕಿಂತ ಜಾಸ್ತಿ ಕ್ಯಾಲ್ಸಿಯಂ ಇದೆ. ಕ್ಯಾಬೇಜ್ನಲ್ಲಿ ಬೀಟಾ-ಕೆರೋಟೀನ್ ಸಾಕಷ್ಟಿರುವುದರಿಂದ ಕ್ಯಾನ್ಸರ್ ವಿರೋಧಿ ತರಕಾರಿ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿದೆ. ಇಂತಿಪ್ಪ ಕೋಸಿಗೆ ಮತ್ತೆ ಅಡುಗೆ ಮನೆಯಲ್ಲಿ ಸ್ಥಾನ ಕೊಡುವುದು ಹೇಗೆ? ರುಚಿಕರವಾಗಿ ಬಳಸುವುದು ಹೇಗೆ? ಈ ಪಲ್ಯಗಳನ್ನು ಪ್ರಯತ್ನಿಸಿ ನೋಡಿ. ಮತ್ತೆ ಕ್ಯಾಬೇಜ್ ಫ್ಯಾನ್ ಆಗುತ್ತೀರಿ.
ಗ್ರೀನ್ ಮಸಾಲ ಕ್ಯಾಬೇಜ್ ಪಲ್ಯ
ಬೇಕಾದ ಪದಾರ್ಥಗಳು:
2 ಕಪ್ ಸಣ್ಣಗೆ ಹೆಚ್ಚಿದ ಅಥವಾ ತುರಿದ ಎಲೆಕೋಸು.
3/4 ಕಪ್ ಕೊತ್ತಂಬರಿ ಸೊಪ್ಪು
1/2 ಕಪ್ ಹಸಿರು ಬಟಾಣಿ
1 ದೊಡ್ಡ ಚಮಚ ತೆಂಗಿನಕಾಯಿತುರಿ
4 ಹಸಿಮೆಣಸಿನಕಾಯಿ
1 ಚೂರು ಹಸಿ ಶುಂಠಿ
3ರಿಂದ 4 ಎಸಳು ಬೆಳ್ಳುಳ್ಳಿ
ಉಪ್ಪು,ನಿಂಬೆರಸ ರುಚಿಗೆ ತಕ್ಕಷ್ಟು
ಸಾಸಿವೆ, ಅರಿಶಿಣ, ಉದ್ದಿನಬೇಳೆ, ಎಣ್ಣೆ ಒಗ್ಗರಣೆಗೆ
ಪಲ್ಯ ತಯಾರಿಸುವ ವಿಧಾನ:
ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆ ಹಾಕಿಕೊಂಡು, ಹಸಿಮೆಣಸಿನಕಾಯಿ ಸೇರಿಸಿ ಬಾಡಿಸಿ. ಅದಕ್ಕೆ ಕ್ಯಾಬೇಜ್ ತುರಿ, ಹಸಿರು ಬಟಾಣಿ, ಉಪ್ಪು ಸೇರಿಸಿ ಸಣ್ಣ ಬೆಂಕಿಯಲ್ಲಿ ಬೇಯಲು ಇಡಿ. ಶುಂಠಿ, ಬೆಳ್ಳುಳ್ಳಿ, ತೆಂಗಿನಕಾಯಿತುರಿ, ಕೊತ್ತಂಬರಿ ಸೊಪ್ಪು ಎಲ್ಲವನ್ನು ಮಿಕ್ಷಿಗೆ ಹಾಕಿ ನುಣ್ಣಗೆ ಪೇಸ್ಟ್ ನಂತೆ ರುಬ್ಬಿಕೊಳ್ಳಿ. ಈ ಮಸಾಲೆಯನ್ನು ಬೇಯುತ್ತಿರುವ ಪಲ್ಯಕ್ಕೆ ಸೇರಿಸಿ, ಮುಚ್ಚಿ ಹದವಾಗಿ ಬೇಯಿಸಿರಿ. ಕೊನೆಯಲ್ಲಿ ನಿಂಬೆರಸ ಸೇರಿಸಿ. ಈ ಪಲ್ಯ ಚಪಾತಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ. ಅನ್ನಕ್ಕೂ ಸೈ.
ಕ್ಯಾಬೇಜ್ ಕ್ಯಾರಟ್ ಪಲ್ಯ
ಬೇಕಾದ ಪದಾರ್ಥಗಳು:
2 ಕಪ್ ಸಣ್ಣಗೆ ಹೆಚ್ಚಿದ ಅಥವಾ ತುರಿದ ಎಲೆಕೋಸು.
1 ಕಪ್ ತುರಿದ ಕ್ಯಾರಟ್
1 ಚಮಚ ಕೆಂಪು ಮೆಣಸಿನಪುಡಿ
2ರಿಂದ 3 ಹಸಿಮೆಣಸಿನಕಾಯಿ
1ರಿಂದ 2 ಚಮಚ ಜೀರಿಗೆ-ಕೊತ್ತಂಬರಿ ಪುಡಿ ಮಿಶ್ರಣ
ಉಪ್ಪು, ನಿಂಬೆರಸ ರುಚಿಗೆ ತಕ್ಕಷ್ಟು.
ಸಾಸಿವೆ, ಅರಿಶಿಣ, ಉದ್ದಿನಬೇಳೆ, ಎಣ್ಣೆ ಒಗ್ಗರಣೆಗೆ
ಕೊತ್ತಂಬರಿ ಸೊಪ್ಪು, ತೆಂಗಿನಕಾಯಿತುರಿ ಸ್ವಲ್ಪ
ತಯಾರಿಸುವ ವಿಧಾನ:
ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆ ಹಾಕಿಕೊಂಡು, ಹಸಿಮೆಣಸಿನಕಾಯಿ ಸೇರಿಸಿ ಬಾಡಿಸಿ. ಅದಕ್ಕೆ ಕ್ಯಾಬೇಜ್ ತುರಿ, ಕ್ಯಾರಟ್ ತುರಿ, ಉಪ್ಪು ಸೇರಿಸಿ ಸಣ್ಣ ಬೆಂಕಿಯಲ್ಲಿ ಬೇಯಲು ಇಡಿ. ಅರ್ಧ ಬೆಂದ ಪಲ್ಯಕ್ಕೆ, ಮೆಣಸಿನಪುಡಿ, ಜೀರಿಗೆ-ಕೊತ್ತಂಬರಿ ಪುಡಿ ಸೇರಿಸಿ, ಮುಚ್ಚಿ ಹದವಾಗಿ ಬೇಯಿಸಿರಿ. ಕೊನೆಯಲ್ಲಿ ನಿಂಬೆರಸ, ಕೊತ್ತಂಬರಿ ಸೊಪ್ಪು, ಬೇಕಿದ್ದಲ್ಲಿ ಸ್ವಲ್ಪ ತೆಂಗಿನಕಾಯಿತುರಿ ಸೇರಿಸಿ. ಬಿಸಿ ಅನ್ನ, ಚಪಾತಿಯೊಂದಿಗೆ ಬಡಿಸಿರಿ.
ಒಂದಷ್ಟು ಟಿಪ್ಸ್:
* ನೀವು ಎಲೆಕೋಸನ್ನು ಯಾವ ಅಡುಗೆಗೆ ಬಳಸುವುದಾದರೂ, ಹೊರ ಎಲೆಗಳನ್ನು ಎಸೆಯಬೇಡಿ. ಚಿಕ್ಕದಾಗಿ ಹೆಚ್ಚಿ ಬಳಸಿದರೆ ಚೆನ್ನಾಗಿಯೇ ಬೇಯುತ್ತದೆ.
* ಪಲ್ಯಕ್ಕೆ ಒರೆಟೆನಿಸಿದರೆ, ಹುಳಿ/ಸಾಂಬಾರಿಗೆ ಹಾಕಬಹುದು. ಸಾಲಡ್, ರಾಯ್ತಕ್ಕೆ ತುರಿದು ಹಾಕಬಹುದು.
* ಹೆಚ್ಚಿದ ತಕ್ಷಣ ಅಡುಗೆ ಮಾಡಿ. ಹೆಚ್ಚಿದ ಎಲೆಗಳನ್ನು ಹಾಗೆಯೇ ಇಟ್ಟರೆ ವಿಟಮಿನ್ ಸಿ ನಾಶವಾಗುತ್ತದೆ.
* ಕ್ಯಾಬೇಜ್ ಅಡುಗೆಗಳನ್ನು ಮುಚ್ಚಿ ಬೇಯಿಸಿರಿ, ಖನಿಜಾಂಶಗಳು ನಾಶವಾಗುವುದಿಲ್ಲ.
* ಕ್ಯಾಬೇಜ್ ಕೊಳ್ಳುವಾಗ ಬಣ್ಣ ಹೆಚ್ಚು ದಟ್ಟವಾಗಿರುವವುಗಳನ್ನು ಕೊಳ್ಳಿ, ಅವುಗಳಲ್ಲಿ ಹೆಚ್ಚಿನ ಕಬ್ಬಿಣ ಹಾಗೂ ಕ್ಯಾಲ್ಸಿಯಂ ಇರುತ್ತದೆ.



Click it and Unblock the Notifications