Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಮೆಂತ್ಯದಹಿಟ್ಟಿನ ಗೊಜ್ಜಿನ ಪುಡಿ
ಮೆಂತ್ಯದ ಹಿಟ್ಟಿನ ಗೊಜ್ಜಿನ ಪುಡಿ ಮಾಡುವುದು ತುಂಬಾ ಸುಲಭ. ಯಾವುದಕ್ಕೂ ಈ ಗೊಜ್ಜಿನ ಪುಡಿ ನಿಮ್ಮ ಅಡುಗೆ ಮನೆಯ ಕಪಾಟಿನಲ್ಲಿರಲಿ. ಏಕೆಂದರೆ ಸಾರು-ಸಾಂಬಾರು ರುಚಿಸದೇ ಇದ್ದಾಗ ಬಿಸಿಬಿಸಿ ಅನ್ನಕ್ಕೆ ಮೆಂತ್ಯದ ಹಿಟ್ಟಿನ ಗೊಜ್ಜಿನ ಪುಡಿ ಕಲಸಿ ಚಪ್ಪರಿಸಿ ತಿನ್ನಬಹುದು. ಸಾಲದಕ್ಕೆ ಮೆಂತ್ಯೆಗೆ ವೈದ್ಯಕೀಯ ಗುಣಗಳೂ ಇವೆ. ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಆಯುರ್ವೇದ ವಿಜ್ಞಾನದಲ್ಲಿ ತಿಳಿಸಿದೆ. ತಡ ಯಾಕೆ ಒಮ್ಮೆ ಮಾಡಿ ನೋಡಿ.
ಜಾನಕಿ ರಾಮಕೃಷ್ಣ, ಬೆಂಗಳೂರು
ಬೇಕಾಗುವ ಸಾಮಗ್ರಿ:
ಕಡಲೇ ಬೇಳೆ : 50 ಗ್ರಾಂ
ತೊಗರಿ ಬೇಳೆ:50 ಗ್ರಾಂ
ಹೆಸರು ಬೇಳೆ: 50 ಗ್ರಾಂ
ಉದ್ದಿನ ಬೇಳೆ:50 ಗ್ರಾಂ
ಗೋಧಿ:40 ಗ್ರಾಂ
ಮೆಂತ್ಯ:1ಟೀ ಚಮಚ
ಎಣ್ಣೆ: ಒಗ್ಗರಣೆಗೆ
ಜೀರಿಗೆ:2 ಟೀ ಚಮಚ
ಮೆಣಸು: 25 ಗ್ರಾಂ
ಮಾಡುವ ವಿಧಾನ:
ಕಾದ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಪ್ರತ್ಯೇಕ ಪ್ರತ್ಯೇಕವಾಗಿ ಎಲ್ಲ ಪದಾರ್ಥಗಳನ್ನೂ ಒಂದೊಂದಾಗಿ ಹುರಿದುಕೊಳ್ಳಿ. ಮೆಂತ್ಯವನ್ನು ಸ್ವಲ್ಪ ಕೆಂಪಗಾಗುವವರೆಗೆ ಮಾತ್ರ ಹುರಿಯಿರಿ. ಎಲ್ಲ ಪದಾರ್ಥಗಳನ್ನೂ ಮಿಕ್ಸರ್ ನಲ್ಲಿ ನುಣ್ಣಗೆ ಅಂದರೆ ಮೈದಾ ಹಿಟ್ಟಿನ ಹದಕ್ಕೆ ಪುಡಿ ಮಾಡಿಟ್ಟುಕೊಳ್ಳಿ. ಈ ಪುಡಿ ನುಣ್ಣಗೆ ಇದ್ದಷ್ಟೂಗೊಜ್ಜು ರುಚಿಯಾಗಿರುತ್ತದೆ.
ಮೆಂತ್ಯದ ಹಿಟ್ಟಿನ ಗೊಜ್ಜು ತಯಾರಿಸುವಾಗ, ನಿಂಬೆ ಗಾತ್ರ ಹುಣಸೆಹಣ್ಣು ಶುಚಿಮಾಡಿ ನೀರಿನಲ್ಲಿನೆನೆಸಿ; ನಂತರ ಚೆನ್ನಾಗಿ ಕಿವುಚಿ ರಸ ತಯಾರಿಸಿ. ಈ ರಸಕ್ಕೆ (ಅಳತೆ ಒಂದು ಲೋಟ) ಮೆಂತ್ಯದ ಹಿಟ್ಟಿನ ಪುಡಿ 2 ಟೀ ಚಮಚ, ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ಈ ರೀತಿ ಕಲಸಿರುವ ಹಿಟ್ಟಿಗೆ ಬಾಳಕದ ಮೆಣಸಿನಕಾಯಿ ಅಥವಾ ಒಣ ಮೆಣಸಿನಕಾಯಿ ಒಗ್ಗರಣೆ ಕೊಡಬಹುದು. ಇದನ್ನು ಕುದಿಸುವ ಅಗತ್ಯವಿರುವುದಿಲ್ಲ.



Click it and Unblock the Notifications
