Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಗ್ ದುನಿಯಾ : ಮೊಟ್ಟೆಮನೆಗೆ ಸ್ವಾಗತ

ಇವಿಷ್ಟೂ ಪದಾರ್ಥಗಳು ಬೇಕು :
ಆರು ಕೋಳಿ ಮೊಟ್ಟೆ
ಸಣ್ಣ ಗಾತ್ರದ ನಾಲಕ್ಕು ಈರುಳ್ಳಿ
ಹಸುರು ಮೆಣಸಿನ ಕಾಯಿ 4
ಗರಂ ಮಸಾಲೆ ಪುಡಿ 1 ಚಮಚ
ಮೆಣಸಿನಪುಡಿ 1 ಚಮಚ
ದನಿಯ ಪುಡಿ 1 ಚಮಚ
ಚೂರು ಅರಿಶಿನದ ಪುಡಿ, ನಾಲಕ್ಕು ಲವಂಗ
ಎರಡು ಎಸಳು ಬೆಳ್ಳುಳ್ಳಿ, ಚೂರು ಹಸಿಶುಂಠಿ, ಸಾಸಿವೆ, ಕರಿಬೇವು, ಉಪ್ಪು
ಎರಡು ಟೊಮೆಟೋ, ಅರ್ಧ ಕಪ್ ತೆಂಗಿನ ತುರಿ. ಉಪ್ಪು.
ಮಾಡುವ ವಿಧಾನ :
* ನೀರಿಗೆ ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ಮೊಟ್ಟೆಗಳನ್ನು ಬೇಯುವುದಕ್ಕೆ ಹಾಕಿ. ಕುಕ್ಕರಿನಲ್ಲಿ ಬೇಯುವುದಕ್ಕೆ ಬಿಟ್ಟರೆ ಮೊಟ್ಟೆ ಬೆಂದು ಒಡೆಯುತ್ತದೆ. ಅದಕ್ಕೋಸ್ಕರ ಪಾತ್ರೆಯಲ್ಲಿ ನೀರು ಹಾಕಿ ಬೇಯಿಸಿದರೆ ಕ್ಷೇಮ. ಚೆನ್ನಾಗಿ ಬೆಂದುಕೊಳ್ಳಲು 20 ನಿಮಿಷವಾದರೂ ಬೇಕು.
* ತೆಂಗಿನ ತುರಿಯನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ ಒಂದು ಕಪ್ ಅಷ್ಟು ತೆಂಗಿನ ಹಾಲು ಮಾಡಿಟ್ಟುಕೊಳ್ಳಿರಿ.
* ಬಾಣಲೆಯಲ್ಲಿ ಚೂರು ಅಡುಗೆ ಎಣ್ಣೆ ಹಾಕಿ ಕಾದನಂತರ ಅದಕ್ಕೆ ದನಿಯ ಪುಡಿ, ಮೆಣಸಿನಪುಡಿ, ಗರಂ ಮಸಾಲಾ ಪುಡಿ, ಅರಿಶಿನದ ಪುಡಿ, ಲವಂಗ, ಬೆಳ್ಳುಳ್ಳಿಗಳನ್ನು ಹಾಕಿ ಹುರಿದುಕೊಳ್ಳಬೇಕು. ಆನಂತರ ಇದನ್ನು ಸ್ವಲ್ಪ ನೀರು ಬೆರೆಸಿ ಮಿಕ್ಸಿಗೆ ಹಾಕಿ ಚಟ್ನಿ ಮಾಡಿಟ್ಟುಕೊಳ್ಳಿರಿ.
* ಇನ್ನೊಂದು ಕಡೆಯಲ್ಲಿ ಹಸಿಮೆಣಸಿನಕಾಯಿ, ಈರುಳ್ಳಿ, ಹಸಿಶುಂಠಿ, ಟೊಮೆಟೋಗಳನ್ನು ಸಣ್ಣಗೆ ಹೆಚ್ಚಿ ಇಟ್ಟುಕೊಂಡಿರತಕ್ಕದ್ದು.
* ಒಂದು ಅಗಲಬಾಯಿಯ ನಾನ್ ಸ್ಟಿಕಿ ತವದಲ್ಲಿ ನಾಕಾರು ಚಮಚ ಅಡುಗೆ ಎಣ್ಣೆ ಹಾಕಿ ಬಿಸಿಮಾಡಿ. ಅದಕ್ಕೆ ಸಾಸಿವೆ, ಕರಿಬೇವು, ಈರುಳ್ಳಿ, ಹಸಿಶುಂಠಿ, ಹಸಿಮೆಣಸಿನಕಾಯಿ ಹಾಕಿ ನಿಧಾನವಾಗಿ ಬಾಡಿಸಿ ಅಥವಾ ತಾಳಿಸಿ ಅಥವಾ ಒಗ್ಗರಿಸಿ.
* ಈ ಒಗ್ಗರಣೆಗೆ ರುಬ್ಬಿಕೊಂಡ ಮಸಾಲೆ ಪದಾರ್ಥ ಹಾಕಿ ಸ್ವಲ್ಪ ನೀರನ್ನೂ ಹಾಕಿ ಕುದಿಯಲು ಬಿಡಿ. ಒಂದು ಕುದಿ ಬಂದನಂತರ ಅದಕ್ಕೆ ತೆಂಗಿನ ಹಾಲನ್ನು ಹಾಕಿ ಕೊನೆಯಲ್ಲಿ ಬೆಂದ ಮೊಟ್ಟೆಗಳ ಚಿಪ್ಪನ್ನು ಕಿತ್ತು ಬಿಸಾಕಿ ಒಂದೊಂದಾಗಿ ಇಳಿಬಿಡಿ. ಪ್ಯಾನ್ ಇಳಿಸುವುದಕ್ಕೆ ಮುಂಚೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
ಕೋಳಿ ಮೊಟ್ಟೆ ಕರಿಯನ್ನು ಯಾವುದರ ಜತೆ ಸವಿಯುವುದಕ್ಕೆ ನಿಮಗೆ ಇಷ್ಟ? ಗಂಜಿ, ಕೋರಿರೋಟಿ, ಅನ್ನ, ಗೋಧಿ ಚಪಾತಿ, ರಾಗಿ ಅಕ್ಕಿರೊಟ್ಟಿ, ನೀರು ದೋಸೆ ಅಥವಾ ಡೈಲಿ ಬ್ರೆಡ್?



Click it and Unblock the Notifications
