For Quick Alerts
ALLOW NOTIFICATIONS  
For Daily Alerts

ಪಾಲಕ್ ಎಲೆಯ ಪಕೋಡಾ ಪಾಕವಿಧಾನ

Posted By:
|

ಮಳೆಗಾಲದಲ್ಲಿ ಬಿಸಿ-ಬಿಸಿ ಪಕೋಡಾ ತಿನ್ನುವುದು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಪಕೋಡಾ ಆಳವಾಗಿ ಎಣ್ಣೆಯಲ್ಲಿ ಕರಿಯುವುದರಿಂದ ಎಣ್ಣೆಯುಕ್ತವಾಗಿದ್ದು, ಡಯೆಟ್‍ಗಳಲ್ಲಿ ಇರುವವರಿಗೆ ಸೂಕ್ತ ತಿಂಡಿಯಾಗಿರುವುದಿಲ್ಲ. ಆದರೆ ಪಾಲಕ್ ಸೊಪ್ಪಿನ ಪಕೋಡಾ ಈ ಅಪವಾದದಿಂದ ದೂರ ಎನ್ನಬಹುದು. ಪಾಲಕ್ ಸೊಪ್ಪು ಬಹುಬೇಗ ಬೇಯುವುದರಿಂದ ಇದನ್ನು ಎಣ್ಣೆಯಲ್ಲಿ ದೀರ್ಘಕಾಲದ ವರೆಗೆ ಬೇಯಿಸಬೇಕಾಗುವುದಿಲ್ಲ. ಅಲ್ಲದೆ ಪಾಲಕ್ ಎಲೆಯಲ್ಲಿ ಆರೋಗ್ಯಕ್ಕೆ ಅಗತ್ಯವಾದ ಖನಿಜಗಳು ಹಾಗೂ ವಿಟಮಿನ್‍ಗಳು ಇರುತ್ತವೆ. ಇದು ಮೆದುಳಿಗೆ ಉತ್ತಮ ಪೋಷಣೆ ನೀಡುವುದು.

ಕಡ್ಲೇ ಹಿಟ್ಟು, ಅಕ್ಕಿ ಹಿಟ್ಟು, ಮಸಾಲೆ ಪದಾರ್ಥ ಹಾಗೂ ಪಾಲಕ್ ಎಲೆಯ ಸಂಯೋಜನೆಯಲ್ಲಿ ಬಹು ರುಚಿಕರವಾದ ಪಕೋಡವನ್ನು ತಯಾರಿಸಬಹುದು. ಬಲು ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಇದನ್ನು ಸಾಯಂಕಾಲದ ಟೀ-ಕಾಫಿಯೊಂದಿಗೆ ಹಾಗೂ ನಿಮ್ಮ ಮನಸ್ಸು ಬಯಸಿದಾಗಲೆಲ್ಲಾ ತಯಾರಿಸಿ ಸವಿಯಬಹುದು. ಈ ರುಚಿಕರವಾದ ತಿಂಡಿಯನ್ನು ನೀವು ಸಹ ತಯಾರಿಸಬೇಕು ಎನ್ನುವ ಹಂಬಲವನ್ನು ಹೊಂದಿದ್ದರೆ ಈ ಮುಂದೆ ವಿವರಿಸಲಾದ ವಿಡಿಯೋ ಚಿತ್ರಣ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಿ.

palak pakoda recipe
ಪಾಲಕ್ ಪಕೋಡಾ ರೆಸಿಪಿ | ಪಾಲಕ್ ಎಲೆಯ ಪಕೋಡಾ ಪಾಕವಿಧಾನ | ಸ್ಟೆಪ್ ಬೈ ಸ್ಟೆಪ್ ಪಾಲಕ್ ಪಕೋಡಾ | ಪಾಲಕ್ ಪಕೋಡಾ ವಿಡಿಯೋ
ಪಾಲಕ್ ಪಕೋಡಾ ರೆಸಿಪಿ | ಪಾಲಕ್ ಎಲೆಯ ಪಕೋಡಾ ಪಾಕವಿಧಾನ | ಸ್ಟೆಪ್ ಬೈ ಸ್ಟೆಪ್ ಪಾಲಕ್ ಪಕೋಡಾ | ಪಾಲಕ್ ಪಕೋಡಾ ವಿಡಿಯೋ
Prep Time
5 Mins
Cook Time
10M
Total Time
15 Mins

Recipe By: ಕಾವ್ಯಾ

Recipe Type: ಕುರುಕಲು ತಿಂಡಿ

Serves: 3-4 ಮಂದಿಗೆ

Ingredients
  • ಉಪ್ಪು -ರುಚಿಗೆ ತಕ್ಕಷ್ಟು.

    ಎಣ್ಣೆ - ಕರಿಯಲು

    ಖಾರದ ಪುಡಿ -1,1/2 ಟೇಬಲ್ ಚಮಚ

    ಕಡ್ಲೇ ಹಿಟ್ಟು - 1 ಕಪ್

    ಪಾಲಕ್ ಎಲೆ- 10-12 ಎಲೆಗಳು

    ಜೀರಿಗೆ -1 ಟೇಬಲ್ ಚಮಚ

    ಅಕ್ಕಿ ಹಿಟ್ಟು-2 ಟೇಬಲ್ ಚಮಚ

    ನೀರು - 1 ಕಪ್.

Red Rice Kanda Poha
How to Prepare
  • ಪಾಲಕ್ ಎಲೆಯನ್ನು ಬಿಡಿಸಿಕೊಳ್ಳಿ.

    ಒಂದು ಬೌಲ್‍ಅಲ್ಲಿ ಕಡ್ಲೇ ಹಿಟ್ಟು, ಜೀರಿಗೆ, ಅಕ್ಕಿ ಹಿಟ್ಟು, ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ.

    ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.

    ಬಿಸಿ ಎಣ್ಣೆಯನ್ನು ತೆಗೆದುಕೊಳ್ಳಿ.

    ತಯಾರಿಸಿಕೊಂಡ ಮಿಶ್ರಣಕ್ಕೆ ಅಗತ್ಯವಿದ್ದರೆ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇರಿಸಿ, ಮೃದುವಾದ ಬೆಣ್ಣೆಯ ಹದಕ್ಕೆ ತಂದುಕೊಳ್ಳಿ.

    ಮಿಶ್ರಣ ಸಿದ್ಧವಾದ ಬಳಿಕ ಪಾಲಕ್ ಎಲೆಯನ್ನು ಅದರಲ್ಲಿ ಅದ್ದಿ ಖಾದಿರುವ ಎಣ್ಣೆಯಲ್ಲಿ ಬಿಡಿ.

    ಪಕೋಡದ ಎರಡು ಮಗ್ಗುಲಲ್ಲಿ ಚೆನ್ನಾಗಿ ಬೇಯುವಂತೆ ತಿರುವಿ.

    ಬಳಿಕ ಪಕೋಡವನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ.

Instructions
  • ಮಿಶ್ರಣಕ್ಕೆ ಸ್ವಲ್ಪ ಬಿಸಿ ಎಣ್ಣೆ ಮತ್ತು ಅಕ್ಕಿ ಹಿಟ್ಟು ಸೇರಿಸಿದರೆ ಗರಿಗರಿಯಾಗುವುದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.
Nutritional Information
  • ಬಡಿಸುವ ಪ್ರಮಾಣ - 1 ಪಕೋಡಾ
  • ಕ್ಯಾಲೋರಿ - 60 ಕ್ಯಾಲ್
  • ಕೊಬ್ಬು - 1 ಗ್ರಾಂ.
  • ಪ್ರೋಟೀನ್ - 3 ಗ್ರಾಂ.
  • ಕಾರ್ಬೋಹೈಡ್ರೇಟ್ - 9 ಗ್ರಾಂ.

ಹಂತ ಹಂತವಾದ ಚಿತ್ರವಿವರಣೆ

ಪಾಲಕ್ ಎಲೆಯನ್ನು ಬಿಡಿಸಿಕೊಳ್ಳಿ.

palak pakoda recipe

ಒಂದು ಬೌಲ್‍ಅಲ್ಲಿ ಕಡ್ಲೇ ಹಿಟ್ಟು, ಜೀರಿಗೆ, ಅಕ್ಕಿ ಹಿಟ್ಟು, ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ.

palak pakoda recipe
palak pakoda recipe
palak pakoda recipe
palak pakoda recipe

ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.

palak pakoda recipe

ಬಿಸಿ ಎಣ್ಣೆಯನ್ನು ತೆಗೆದುಕೊಳ್ಳಿ.

palak pakoda recipe

ತಯಾರಿಸಿಕೊಂಡ ಮಿಶ್ರಣಕ್ಕೆ ಅಗತ್ಯವಿದ್ದರೆ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇರಿಸಿ, ಮೃದುವಾದ ಬೆಣ್ಣೆಯ ಹದಕ್ಕೆ ತಂದುಕೊಳ್ಳಿ.

palak pakoda recipe

ಮಿಶ್ರಣ ಸಿದ್ಧವಾದ ಬಳಿಕ ಪಾಲಕ್ ಎಲೆಯನ್ನು ಅದರಲ್ಲಿ ಅದ್ದಿ ಖಾದಿರುವ ಎಣ್ಣೆಯಲ್ಲಿ ಬಿಡಿ.

palak pakoda recipe

ಪಕೋಡದ ಎರಡು ಮಗ್ಗುಲಲ್ಲಿ ಚೆನ್ನಾಗಿ ಬೇಯುವಂತೆ ತಿರುವಿ.

palak pakoda recipe

ಬಳಿಕ ಪಕೋಡವನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ.

palak pakoda recipe
[ 4.5 of 5 - 92 Users]
Story first published: Friday, August 31, 2018, 16:21 [IST]
X
Desktop Bottom Promotion