ನವರಾತ್ರಿ ವಿಶೇಷ: ನುಚ್ಚಿನುಂಡೆ ರೆಸಿಪಿ

By: Divya Pandit
Subscribe to Boldsky

ಫಾಸ್ಟ್ ಫುಡ್ ಯುಗದಲ್ಲಿರುವ ನಮಗೆ ಅದೆಷ್ಟೂ ಪುರಾತನಕಾಲದ ತಿನಿಸುಗಳ ಪರಿಚಯವೇ ಇರುವುದಿಲ್ಲ. ಅಂತಹ ಹಳೇ ಕಾಲದ ತಿಂಡಿಯಲ್ಲಿ ಒಂದು ನುಚ್ಚಿನುಂಡೆ. ಉಂಡೆ ಅಂದರೆ ಸಾಮಾನ್ಯವಾಗಿ ನಾವು ಸಿಹಿ ತಿಂಡಿ ಎಂದು ಅಂದುಕೊಳ್ಳುತ್ತೇವೆ. ಆದರೆ ಇದು ಸಿಹಿ ತಿಂಡಿಯಲ್ಲ. ಉಂಡೆ ಎಂಬ ಹೆಸರು ಪಡೆದ ಖಾರದ ತಿನಿಸು. ನುಚ್ಚಿನುಂಡೆಯು ಕರ್ನಾಟಕದ ಸಾಂಪ್ರದಾಯಿಕ ಪಾಕವಿಧಾನ. "ನುಚ್ಚು" ಎಂದರೆ ಕಡಿಯಾದ ಬೇಳೆ ಎನ್ನುವ ಅರ್ಥ ವಾದರೆ "ಉಂಡೆ" ಎಂದರೆ ಚೆಂಡು ಎಂದು ಅರ್ಥ.

ಈ ಪಾಕವಿಧಾನಕ್ಕೆ ತೊಗರಿ ಬೇಳೆಯ ಕಡಿ ಅಥವಾ ಕಡಲೇ ಬೇಳೆ ಕಡಿ ಮಿಶ್ರಣದಿಂದಲೂ ತಯಾರಿಸುತ್ತಾರೆ. ಇದು ರುಚಿಕರವಾದ ಮಸಾಲೆ ಮಿಶ್ರಣದೊಂದಿಗೆ ಬಾಯಿ ರುಚಿಗೆ ಒಳ್ಳೆಯ ಸಾಥ್ ನೀಡುತ್ತದೆ. ಹಬೆಯಯಲ್ಲಿ ಬೇಯಿಸುವ ಈ ತಿನಿಸು ಕೊಬ್ಬಿನಂಶದಿಂದ ಮುಕ್ತವಾಗಿರುತ್ತದೆ. ಜೊತೆಗೆ ಇದೊಂದು ಆರೋಗ್ಯ ಪೂರ್ಣ ತಿಂಡಿ ಎಂದು ಹೇಳಬಹುದು. ಟೀ ಸಮಯದಲ್ಲಿ ಅಥವಾ ಊಟದ ಸಮಯದಲ್ಲಿ ಇದನ್ನೊಂದು ಉಪ ಭಕ್ಷ್ಯವನ್ನಾಗಿ ಸ್ವೀಕರಿಸಬಹುದು.

ಇದರ ರುಚಿಯಲ್ಲಿ ಬದಲಾವಣೆ ಬೇಕಾದರೆ ಕ್ಯಾರೆಟ್ ಅಥವಾ ಕೊತ್ತಂಬರಿ ಸೊಪ್ಪನ್ನು ಬಳಸಬಹುದು. ಸುಲಭ ಹಾಗೂ ಸರಳವಾಗಿ ತಯಾರಿಸಬಹುದಾದ ಈ ತಿಂಡಿಯನ್ನು ನೀವೂ ಮಾಡಬೇಕೆಂಬ ಮನಸ್ಸಾದರೆ ಈ ಕೆಳಗೆ ನೀಡಿರುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪಡೆದುಕೊಳ್ಳಬಹುದು.

nuchina unde recipe
ನುಚ್ಚಿನುಂಡೆ ಪಾಕವಿಧಾನ | ಹಂತ ಹಂತವಾದ ನುಚ್ಚಿನುಂಡೆ ವಿವರಣೆ | ನುಚ್ಚಿನುಂಡೆ ವೀಡಿಯೋ ಪಾಕವಿಧಾನ | ನುಚ್ಚಿನ ಉಂಟೆ ಪಾಕವಿಧಾನ | ಹಬೆಯಲ್ಲಿ ಬೇಯಿಸಿದ ಬೇಳೆ ಕಡಿಯ ಪಾಕವಿಧಾನ.
ನುಚ್ಚಿನುಂಡೆ ಪಾಕವಿಧಾನ | ಹಂತ ಹಂತವಾದ ನುಚ್ಚಿನುಂಡೆ ವಿವರಣೆ | ನುಚ್ಚಿನುಂಡೆ ವೀಡಿಯೋ ಪಾಕವಿಧಾನ | ನುಚ್ಚಿನ ಉಂಟೆ ಪಾಕವಿಧಾನ | ಹಬೆಯಲ್ಲಿ ಬೇಯಿಸಿದ ಬೇಳೆ ಕಡಿಯ ಪಾಕವಿಧಾನ.
Prep Time
6 Hours
Cook Time
45M
Total Time
6 Hours 45 Mins

Recipe By: ಸುಮಾ ಜಯಂತ್

Recipe Type: ಉಪಹಾರ

Serves: 20 ನುಚ್ಚಿನುಂಡೆ

Ingredients
 • ತೊಗರಿ ಬೇಳೆ - 1 ಬೌಲ್

  ನೀರು -1/2 ಲೀಟರ್+ 3ಕಪ್

  ಚಿಕ್ಕ ಗಾತ್ರದ ಹಸಿ ಮೆಣಸಿನಕಾಯಿ -10-20(ನಿಮಗೆ ಖಾರಬೇಕಾದಷ್ಟು)

  ಸಿಪ್ಪೆ ತೆಗೆದ ಶುಂಠಿ- 4(ಒಂದು ಇಂಚಿನ ತುಂಡು)

  ತೆಂಗಿನ ತುರಿ -1 ಕಪ್

  ಹೆಚ್ಚಿಕೊಂಡ ತೆಂಗಿನ ಕಾಯಿ -1/2 ಕಪ್

  ಹೆಚ್ಚಿಕೊಂಡ ಸಬ್ಬಸ್ಸಿಗೆ ಸೊಪ್ಪು - 2 ಕಪ್

  ರುಚಿಗೆ ತಕ್ಕಷ್ಟು ಉಪ್ಪು

  ಜೀರಿಗೆ - 2 ಟೀ ಚಮಚ

  ಎಣ್ಣೆ - ಬಳಿದುಕೊಳ್ಳಲು ಸ್ವಲ್ಪ

Red Rice Kanda Poha
How to Prepare
 • 1. ಒಂದು ದೊಡ್ಡ ಮಿಶ್ರಣದ ಪಾತ್ರೆಗೆ ತೊಗರಿ ಬೇಳೆಯನ್ನು ಹಾಕಿ.

  2. ಇದಕ್ಕೆ 3 ಕಪ್ ನೀರನ್ನು ಬೆರೆಸಿ, 5-6 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಉಳಿದ ನೀರನ್ನು ತೆಗೆಯಿರಿ.

  3. ಮಿಕ್ಸರ್ ಪಾತ್ರೆಯಲ್ಲಿ ಹಸಿಮೆಣಸಿನಕಾಯನ್ನು ಸೇರಿಸಿ.

  4. ಶುಂಠಿಯ ಚೂರನ್ನು ಸೇರಿಸಿ.

  5. ನೆನೆಸಿಕೊಂಡ ಬೇಳೆಯನ್ನು ಒಂದು ಸೌಟ್‍ನಷ್ಟು ಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸಿ ಪಾತ್ರೆಗೆ ಸೇರಿಸಿ.

  6. ಇವೆಲ್ಲವನ್ನು ಒಮ್ಮೆ ಮಿಕ್ಸಿಯಲ್ಲಿ ಜರಿಜರಿಯಾಗಿ ರುಬ್ಬಿಗೊಳ್ಳಬೇಕು.

  7. ನಂತರ ಒಂದು ಬೌಲ್‍ಗೆ ವರ್ಗಾಯಿಸಿ.

  8. ಅದೇ ಮಿಕ್ಸಿ ಪಾತ್ರೆಯಲ್ಲಿ ಇನ್ನೊಂದು ಸೌಟ್ ನೆನೆಸಿದ ಬೇಳೆಯನ್ನು ಬೆರೆಸಿ, ಜರಿಜರಿಯಾಗಿ ರುಬ್ಬಿಕೊಳ್ಳಿ.

  9. ಮೊದಲು ರುಬ್ಬಿಕೊಂಡ ಮಿಶ್ರಣಕ್ಕೆ ಇದನ್ನು ವರ್ಗಾಯಿಸಿ.

  10. ಇದೇ ವಿಧಾನದಲ್ಲಿ ನೆನೆಸಿಕೊಂಡ ಎಲ್ಲಾ ಬೇಳೆಯನ್ನು ರುಬ್ಬಿಕೊಂಡು ಮಿಶ್ರಣದ ಬೌಲ್‍ಗೆ ವರ್ಗಾಯಿಸಿ.

  11. ನಂತರ ತೆಂಗಿನ ತುರಿಯನ್ನು ಸೇರಿಸಿ.

  12. ಹೆಚ್ಚಿಕೊಂಡ ತೆಂಗಿನಕಾಯನ್ನು ಸೇರಿಸಿ.

  13. ಹೆಚ್ಚಿಕೊಂಡ ಸಬ್ಬಸ್ಸಿಗೆ ಸೊಪ್ಪು ಮತ್ತು ಉಪ್ಪನ್ನು ಬೆರೆಸಿ.

  14. ಎಲ್ಲವನ್ನೂ ಚೆನ್ನಾಗಿ ಬೆರೆಸಿ ಮಿಶ್ರಗೊಳಿಸಿ.

  15. ಮಿಶ್ರಣಕ್ಕೆ ಜೀರಿಗೆಯನ್ನು ಬೆರೆಸಿ ಪುನಃ ಮಿಶ್ರಗೊಳಿಸಿ, ಪಕ್ಕಕ್ಕಿಡಿ.

  16. ಇಡ್ಲಿ ಕುಕ್ಕರ್‌ನಲ್ಲಿ ಅರ್ಧ ಲೀಟರ್ ನೀರನ್ನು ಬೆರೆಸಿ.

  17. ನೀರಿನಲ್ಲಿ ಇಡ್ಲಿ ಸ್ಟ್ಯಾಂಡ್ ಅನ್ನು ಇರಿಸಿ.

  18. ಪ್ರತಿಯೊಂದು ಇಡ್ಲಿ ತಟ್ಟೆಗೂ ಎಣ್ಣೆಯನ್ನು ಸವರಿ.

  19. ಮಿಶ್ರಣವನ್ನು ತೆಗೆದುಕೊಂಡು ಅಂಗೈನಲ್ಲಿ ಸಣ್ಣ ಸಣ್ಣ ಅಂಡಾಕಾರದ ಉಂಡೆಯನ್ನಾಗಿ ಮಾಡಿ.

  20. ಉಂಡೆಯನ್ನು ಇಡ್ಲೀ ತಟ್ಟೆಯಲ್ಲಿ ಇಡಿ.

  21. ಹೀಗೆ ಎಲ್ಲಾ ತಟ್ಟೆಯಲ್ಲೂ ಇಟ್ಟಮೇಲೆ, ಮುಚ್ಚಳವನ್ನು ಮುಚ್ಚಿ. 15 ನಿಮಿಷ ಬೇಯಿಸಿ.

  22. ಮುಚ್ಚಳವನ್ನು ತೆಗೆದು, ನಿಧಾನವಾಗಿ ಬೆಂದ ಉಂಡೆಯನ್ನು ತೆಗೆಯಿರಿ.

  23. ಒಂದು ಪ್ಲೇಟ್‍ನಲ್ಲಿ ಹಾಕಿ, ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

Instructions
 • 1. ಸಬ್ಬಸ್ಸಿಗೆ ಸೊಪ್ಪನ್ನು ಸೇರಿಸುವುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.
 • 2. ಸಬ್ಬಸ್ಸಿಗೆ ಸೊಪ್ಪಿನ ಬದಲಿಗೆ ಕೊತ್ತಂಬರಿ ಸೊಪ್ಪು ಮತ್ತು ಬೇಯಿಸಿದ ಕ್ಯಾರೆಟ್ ತುರಿಯನ್ನು ಬಳಸಬಹುದು.
Nutritional Information
 • ಸರ್ವಿಂಗ್ ಸೈಜ್ - 1 ನುಚ್ಚಿನುಂಡೆ
 • ಕ್ಯಾಲೋರಿ - 70 ಕ್ಯಾಲ್
 • ಫ್ಯಾಟ್ - 0.9 ಗ್ರಾಂ.
 • ಪ್ರೋಟೀನ್ - 1 ಗ್ರಾಂ.
 • ಕಾರ್ಬೋಹೈಡ್ರೇಟ್ - 10 ಗ್ರಾಂ.
 • ಸಕ್ಕರೆ - 1 ಗ್ರಾಂ.
 • ಫೈಬರ್ - 1.6 ಗ್ರಾಂ.

ನುಚ್ಚಿನ ಉಂಟೆ ಪಾಕವಿಧಾನ

1. ಒಂದು ದೊಡ್ಡ ಮಿಶ್ರಣದ ಪಾತ್ರೆಗೆ ತೊಗರಿ ಬೇಳೆಯನ್ನು ಹಾಕಿ.

nuchina unde recipe

2. ಇದಕ್ಕೆ 3 ಕಪ್ ನೀರನ್ನು ಬೆರೆಸಿ, 5-6 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಉಳಿದ ನೀರನ್ನು ತೆಗೆಯಿರಿ.

nuchina unde recipe

3. ಮಿಕ್ಸರ್ ಪಾತ್ರೆಯಲ್ಲಿ ಹಸಿಮೆಣಸಿನಕಾಯನ್ನು ಸೇರಿಸಿ.

nuchina unde recipe

4. ಶುಂಠಿಯ ಚೂರನ್ನು ಸೇರಿಸಿ.

nuchina unde recipe

5. ನೆನೆಸಿಕೊಂಡ ಬೇಳೆಯನ್ನು ಒಂದು ಸೌಟ್‍ನಷ್ಟು ಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸಿ ಪಾತ್ರೆಗೆ ಸೇರಿಸಿ.

nuchina unde recipe

6. ಇವೆಲ್ಲವನ್ನು ಒಮ್ಮೆ ಮಿಕ್ಸಿಯಲ್ಲಿ ಜರಿಜರಿಯಾಗಿ ರುಬ್ಬಿಗೊಳ್ಳಬೇಕು.

nuchina unde recipe

7. ನಂತರ ಒಂದು ಬೌಲ್‍ಗೆ ವರ್ಗಾಯಿಸಿ.

nuchina unde recipe

8. ಅದೇ ಮಿಕ್ಸಿ ಪಾತ್ರೆಯಲ್ಲಿ ಇನ್ನೊಂದು ಸೌಟ್ ನೆನೆಸಿದ ಬೇಳೆಯನ್ನು ಬೆರೆಸಿ, ಜರಿಜರಿಯಾಗಿ ರುಬ್ಬಿಕೊಳ್ಳಿ.

nuchina unde recipe

9. ಮೊದಲು ರುಬ್ಬಿಕೊಂಡ ಮಿಶ್ರಣಕ್ಕೆ ಇದನ್ನು ವರ್ಗಾಯಿಸಿ.

nuchina unde recipe
nuchina unde recipe

10. ಇದೇ ವಿಧಾನದಲ್ಲಿ ನೆನೆಸಿಕೊಂಡ ಎಲ್ಲಾ ಬೇಳೆಯನ್ನು ರುಬ್ಬಿಕೊಂಡು ಮಿಶ್ರಣದ ಬೌಲ್‍ಗೆ ವರ್ಗಾಯಿಸಿ.

nuchina unde recipe

11. ನಂತರ ತೆಂಗಿನ ತುರಿಯನ್ನು ಸೇರಿಸಿ.

nuchina unde recipe

12. ಹೆಚ್ಚಿಕೊಂಡ ತೆಂಗಿನಕಾಯನ್ನು ಸೇರಿಸಿ.

nuchina unde recipe

13. ಹೆಚ್ಚಿಕೊಂಡ ಸಬ್ಬಸ್ಸಿಗೆ ಸೊಪ್ಪು ಮತ್ತು ಉಪ್ಪನ್ನು ಬೆರೆಸಿ.

nuchina unde recipe
nuchina unde recipe

14. ಎಲ್ಲವನ್ನೂ ಚೆನ್ನಾಗಿ ಬೆರೆಸಿ ಮಿಶ್ರಗೊಳಿಸಿ.

nuchina unde recipe

15. ಮಿಶ್ರಣಕ್ಕೆ ಜೀರಿಗೆಯನ್ನು ಬೆರೆಸಿ ಪುನಃ ಮಿಶ್ರಗೊಳಿಸಿ, ಪಕ್ಕಕ್ಕಿಡಿ.

nuchina unde recipe
nuchina unde recipe

16. ಇಡ್ಲಿ ಕುಕ್ಕರ್‍ನಲ್ಲಿ ಅರ್ಧ ಲೀಟರ್ ನೀರನ್ನು ಬೆರೆಸಿ.

nuchina unde recipe

17. ನೀರಿನಲ್ಲಿ ಇಡ್ಲಿ ಸ್ಟ್ಯಾಂಡ್ ಅನ್ನು ಇರಿಸಿ.

nuchina unde recipe

18. ಪ್ರತಿಯೊಂದು ಇಡ್ಲಿ ತಟ್ಟೆಗೂ ಎಣ್ಣೆಯನ್ನು ಸವರಿ.

nuchina unde recipe

19. ಮಿಶ್ರಣವನ್ನು ತೆಗೆದುಕೊಂಡು ಅಂಗೈನಲ್ಲಿ ಸಣ್ಣ ಸಣ್ಣ ಅಂಡಾಕಾರದ ಉಂಡೆಯನ್ನಾಗಿ ಮಾಡಿ.

nuchina unde recipe

20. ಉಂಡೆಯನ್ನು ಇಡ್ಲೀ ತಟ್ಟೆಯಲ್ಲಿ ಇಡಿ.

nuchina unde recipe

21. ಹೀಗೆ ಎಲ್ಲಾ ತಟ್ಟೆಯಲ್ಲೂ ಇಟ್ಟಮೇಲೆ, ಮುಚ್ಚಳವನ್ನು ಮುಚ್ಚಿ. 15 ನಿಮಿಷ ಬೇಯಿಸಿ.

nuchina unde recipe

22. ಮುಚ್ಚಳವನ್ನು ತೆಗೆದು, ನಿಧಾನವಾಗಿ ಬೆಂದ ಉಂಡೆಯನ್ನು ತೆಗೆಯಿರಿ.

nuchina unde recipe

23. ಒಂದು ಪ್ಲೇಟ್‍ನಲ್ಲಿ ಹಾಕಿ, ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

nuchina unde recipe
[ of 5 - Users]
Subscribe Newsletter