Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ದಿನ ಮಾಡಿ ನುಚ್ಚುಗೋಧಿಯ ಪಾಯಸ
ಜನವರಿ 22ಕ್ಕೆ ಇಡೀ ದೇಶವೇ ಎದುರು ನೋಡುತ್ತಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ. ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮ ನೆಲೆಸಲಿದ್ದಾನೆ. ಈ ಸಡಗರವನ್ನು ಇಡೀ ದೇಶವೇ ಆಚರಿಸುತ್ತಿದೆ. ಮನೆ-ಮನೆಗಳಲ್ಲಿ ಸಂಭ್ರಮ, ಈ ದಿನ ಶ್ರೀರಾಮ ಆರಾಧಿಸಿ, ಸಿಹಿಯನ್ನು ಮಾಡಲಾಗುವುದು. ಜನವರಿ 22ಕ್ಕೆ ನೀವು ನುಚ್ಚುಗೋಧಿಯ ಪಾಯಸ ಮಾಡಬಯಸುವುದಾದರೆ ಇಲ್ಲಿದೆ ನೋಡಿ ರೆಸಿಪಿ:

ಬೇಕಾಗುವ ಸಾಮಗ್ರಿ
1/2 ಕಪ್ ನುಚ್ಚು ಗೋಧಿ(ಗೋಧಿ ರವೆ)
1 ಕಪ್ ಬೆಲ್ಲದ ಪುಡಿ
1 ಚಮಚ ಹೆಸರು ಬೇಳೆ
1 ಕಪ್ ಹಾಲು
ಏಲಕ್ಕಿ ಪುಡಿ 1/2 ಚಮಚ
1/2 ಕಪ್ ಪುಡಿ
1/4 ಕಪ್ ತೆಂಗಿನ ತುರಿ
(optional)
ಅಲಂಕಾರಕ್ಕೆ
1 ಚಮಚ ತುಪ್ಪ ಗೋಡಂಬಿ, ಬಾದಾಮಿ
ಮಾಡುವ ವಿಧಾನ:
* ದೊಡ್ಡ ಪಾತ್ರೆಯನ್ನು ಬಿಸಿ ಮಾಡಿ ಉರಿ ಕಡಿಮೆ ಮಾಡಿ ನುಚ್ಚು ಗೋಧಿ ಹಾಕಿ
ರೋಸ್ಟ್ ಮಾಡಿ, ತುಂಬಾ ರೋಸ್ಟ್ ಮಾಡಬೇಡಿ. 3-4 ನಿಮಿಷ ಹುರಿದರೆ ಸಾಕು. ನಂತರ
ತಟ್ಟೆಗೆ ಹಾಕಿ ಬದಿಯಲ್ಲಿ ಇಡಿ.
* ಹೆಸರು ಬೇಳೆಯನ್ನು ಕೂಡ 2-3 ನಿಮಿಷ ಹುರಿಯಿರಿ
* ನುಚ್ಚುಗೋಧಿ ಹಾಗೂ ಹೆಸರು ಬೇಳೆಯನ್ನು ಕುಕ್ಕರ್‌ನಲ್ಲಿ ಹಾಕಿ ಅದರ ಎರಡಯಪಟ್ಟು
ನೀರು ಹಾಕಿ ಕಡಿಮೆ ಉರಿಯಲ್ಲಿ 4 ವಿಶಲ್ ಆಗುವವರೆಗೆ ಬೇಯಿಸಿ.
* ಗ ಬೆಲ್ಲದ ಪುಡಿಯನ್ನು ನೀರಿನಲ್ಲಿ ಹಾಕಿ ಮಿಕ್ಸ್ ಮಾಡಿ, ನೀರು ಬೇಕಿದ್ದರೆ
ಸ್ವಲ್ಪ ಸೇರಿಸಬಹುದು.
* ಬೆಲ್ಲದ ಪುಡಿ ಕರಗಿದ ಮೇಲೆ ಆ ಬೆಲ್ಲದ ನೀರನ್ನು ಸೋಸಿ, ಬೆಲ್ಲದ ಕಶ್ಮಲ
ತಳದದಲ್ಲಿರುತ್ತದೆ, ಅದನ್ನು ಬಿಸಾಡಿ,
* ಈಗ ಬೆಲ್ಲದ ನೀರನ್ನು 5 ನಿಮಿಷ ಕುದಿಸಿ.
* ಅದಕ್ಕೆ ಬೇಯಿಸಿದ ನುಚ್ಚು ಗೋಧಿ ಸೇರಿಸಿ, ಸೌಟ್‌ನಿಂದ ತಿರುಗಿಸಿ.
* ನಂತರ ಹಾಲನ್ನು ಹಾಕಿ ತಿರುಗಿಸಿ
* ಈಗ ಮತ್ತೊಂದು ಪ್ಯಾನ್‌ನಲ್ಲಿ ತುಪ್ಪ ಹಾಕಿ ಅದಕ್ಕೆ ಬಾದಾಮಿ, ಗೋಡಂಬಿ ಹಾಕಿ,
ಅದನ್ನು ಪಾಯಸದ ಜೊತೆ ಹಾಕಿ ಮಿಕ್ಸ್ ಮಾಡಿ.
ರೆಡಿಯಾದ ಪಾಯಸವನ್ನು ದೇವರಿಗೆ ಇಟ್ಟು ಸವಿಯಿರಿ.



Click it and Unblock the Notifications