Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರುಚಿಕರವಾದ ಪ್ರಾನ್ ಸ್ಟಾರ್ಟರ್ಸ್ ರೆಸಿಪಿ
ಪ್ರಾನ್ ಅಥವಾ ಸೀಗಡಿ ಮೀನಿನಿಂದ ರುಚಿಕರವಾದ ಸ್ಟಾರ್ಟರ್ಸ್ ತಯಾರಿಸಬಹುದು. ಇಲ್ಲಿ ನಾವು ರವೆ ಮತ್ತು ಸೀಗಡಿ ಮೀನಿನಿಂದ ತಯಾರಿಸುವ ರೆಸಿಪಿ ನೀಡಲಾಗಿದೆ.
ಈ ರೆಸಿಪಿ ತಯಾರಿಸಲು ಸಲಭವಾಗಿದ್ದು ಮೀನು ಪ್ರಿಯರಿಗೆ ಇದರ ರುಚಿ ತುಂಬಾ ಪ್ರಿಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ಸಾಯಂಕಾಲದ ಟೀ ಅಥವಾ ಕಾಫಿ ಜೊತೆ ತಿನ್ನಬಹುದು.

ಬೇಕಾಗುವ ಸಾಮಾಗ್ರಿಗಳು:
* ಸ್ವಲ್ಪ ದೊಡ್ಡ ಗಾತ್ರದ ಸೀಗಡಿ ಮೀನು 10-15
* ರವೆ ಅರ್ಧ ಕಪ್
* ನಿಂಬೆ ರಸ 1 ಚಮಚ
* ಶುಂಠಿ ಪೇಸ್ಟ್ 1 ಚಮಚ
* ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಕೆಂಪು ಮೆಣಸಿನ ಪುಡಿ 2 ಚಮಚ
* ಪುಡಿ ಮಾಡಿದ ಕರಿಮೆಣಸಿನ ಪುಡಿ 1 ಚಮಚ
* ಬ್ರೆಡ್ ತುಂಡುಗಳು 3 ಚಮಚ
* ರುಚಿಗೆ ತಕ್ಕ ಉಪ್ಪು
* ಎಣ್ಣೆ 1 ಕಪ್
ಇತರ ಸಾಮಾಗ್ರಿಗಳು:
* ಮೈದಾ 1 ಕಪ್
* ಅಕ್ಕಿ ಹಿಟ್ಟು 2 ಚಮಚ
* ಜೋಳದ ಹಿಟ್ಟು 2 ಚಮಚ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಸೀಗಡಿ ಮೀನನ್ನು ಶುಚಿಗೊಳಿಸಿ ನೀರಿನಲ್ಲಿ ಹಾಕಿ 10-12 ನಿಮಿಷ ಬೇಯಿಸಬೇಕು.
2. ನಂತರ ಬೇಯಿಸಿದ ಮೀನನ್ನು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಕರಿಮೆಣಸಿನ ಪುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿಯ ಪೇಸ್ಟ್, ರುಚಿಗೆ ತಕ್ಕ ಉಪ್ಪು, ನಿಂಬೆ ರಸ, ಕೆಂಪು ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ 2 ಗಂಟೆ ಕಾಲ ಇಡಬೇಕು.
3. ನಂತರ ಇತರ ಸಾಮಾಗ್ರಿಗಳನ್ನು ಮಿಶ್ರಣ ಮಾಡಿ ಸ್ವಲ್ಪ ನೀರು ಹಾಕಿ ಗಟ್ಟಿಯಾದ ಪೇಸ್ಟ್ ರೀತಿ ಮಾಡಬೇಕು.
4. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಬೇಕು.
5. ಈಗ ಮೀನುಗಳನ್ನು ಈ ಮೈದಾ ಪೇಸ್ಟ್ ನಲ್ಲಿ ಅದ್ದಿ ನಂತರ ರವೆ ಹಾಗೂ ಬ್ರೆಡ್ ಚೂರಿನಲ್ಲಿ ಹೊರಳಾಡಿಸಿ ಕಾದ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದರೆ ರುಚಿಕರವಾದ ಪ್ರಾನ್ ಸ್ಟ್ರಾಟರ್ಸ್ ರೆಡಿ.



Click it and Unblock the Notifications
