Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಚೀಸ್ ಹಾಕಿ ಮಾಡುವ ಸ್ಪೆಷೆಲ್ ಎಗ್ ಗ್ರೇವಿ
ಪಂಜಾಬಿ ಶೈಲಿಯ ಈ ಮೊಟ್ಟೆ ಗ್ರೇವಿ ಖಾರವಾಗಿದ್ದು ಇದನ್ನು ಪನ್ನೀರ್ ಹಾಕಿ ತಯಾರಿಸುವುದರಿಂದ ಸಾಮಾನ್ಯ ಮೊಟ್ಟೆ ಸಾರಿಗಿಂತ ರುಚಿಯಲ್ಲಿ ಸ್ವಲ್ಪ ಭಿನ್ನವಾಗಿರುತ್ತದೆ. ಈ ಮೊಟ್ಟೆ ಗ್ರೇವಿಯನ್ನು ದೋಸೆ, ಚಪಾತಿ, ರೊಟ್ಟೆ ಜೊತೆ ತಿನ್ನಲು ಸೂಪರ್ ಆಗಿರುತ್ತದೆ.
ಈ ವೀಕೆಂಡ್ ನಲ್ಲಿ ಸ್ವಲ್ಪ ವಿಭಿನ್ನ ರುಚಿಯ ಮೊಟ್ಟೆ ಸಾರು ಬೇಕೆಂದು ಬಯಸುವವರು ಚೀಸ್ ಹಾಕಿ ಮಾಡುವ ಈ ಎಗ್ ಗ್ರೇವಿ ಟ್ರೈ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು
6 ಮೊಟ್ಟೆ (ಬೇಯಿಸಿ ಸಿಪ್ಪೆ ಸುಲಿದಿರಬೇಕು)
1 ಈರುಳ್ಳಿ(ಕತ್ತರಿಸಿದ್ದು)
3-4 ಹಣ್ಣಾದ ಟೊಮೆಟೊ (ಪೇಸ್ಟ್ ಮಾಡಿಡಬೇಕು)
1 ಚಮಚ ಶುಂಠಿ ಪೇಸ್ಟ್1-2 ಹಸಿ ಮೆಣಸಿನ ಕಾಯಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ಉಪ್ಪು
ಖಾರಕ್ಕೆ ತಕ್ಕ ಖಾರದ ಪುಡಿ
1 ಚಮಚ ಅರ್ಧ ಅರಿಶಿಣ ಪುಡಿ
1ಗರಂ ಮಸಾಲ
2-3ಚಮಚ ಎಣ್ಣೆ
1 ಕಪ್ ಬೇಯಿಸಿದ ಬಟಾಣಿ
250 ಗ್ರಾಂ ಪನ್ನೀರ್
ತಯಾರಿಸುವ ವಿಧಾನ:
* ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಪನ್ನೀರ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಒಂದು ಪಾತ್ರೆಯಲ್ಲಿ ಹಾಕಿಡಿ.
* ಈಗ ಸಾರಿನ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ನಂತರ ಹಸಿ ಮೆಣಸಿನಕಾಯಿ ಹಾಕಿ ಶುಂಠಿ , ಬೆಳ್ಳುಳ್ಳಿ ಪೇಸ್ಟ್ ಹಾಕಿ ಟೊಮೆಟೊ ಪೇಸ್ಟ್ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಸೌಟ್ ನಿಂದ ತಿರುಗಿಸಿ . ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ, ಕೊತ್ತಂಬವರಿ ಪುಡಿ ಹಾಕಿ.
* ನಂತರ 1 ಕಪ್ ನೀರು ಹಾಕಿ ಕುದಿಸಿ ಗ್ರೇವಿ ರೀತಿಯಲ್ಲಿ ಮಾಡಿ. ನಂತರ ಬೇಯಿಸಿ ಬಟಾಣಿ, ಮೊಟ್ಟೆ, ಹುರಿದ ಪನ್ನೀರ್ ಹಾಕಿ ಕಡಿಮೆ ಹುರಿಯಲ್ಲಿ 5 ನಿಮಿಷ ಕುದಿಸಿ, ಕೊತ್ತಂಬರಿ ಸೊಪ್ಪು ಹಾಕಿ ಉರಿಯಿಂದ ಇಳಿಸಿದರೆ ಪಂಜಾಬಿ ಮೊಟ್ಟೆ ಗ್ರೇವಿ ರೆಡಿ.



Click it and Unblock the Notifications
