Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಳಗಿನ ಉಪಹಾರಕ್ಕೆ ಎಗ್ ಸಲಾಡ್
ನಿಮ್ಮ ದಿನವನ್ನು ಆರೋಗ್ಯಕರವಾದ ರುಚಿಕರವಾದ ತಿಂಡಿಯೊಂದಿಗೆ ಆರಂಭಿಸಿ. ಎಗ್ ಸಲಾಡ್ ಸ್ಯಾಂಡ್ ವಿಚ್ ಮಾಡಲು ಸುಲಭ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಕೆಲಸಕ್ಕೆ ಹೋಗುವ ತಾಯಂದಿರು ತಮ್ಮ ಮುದ್ದು ಮಕ್ಕಳಿಗೆ ಇದನ್ನು ಮಾಡಿಕೊಡಬಹುದು. ಇದರಲ್ಲಿ ಪೌಷ್ಟಿಕಾಂಶಗಳು ಅಧಿಕವಾಗಿದ್ದು ನಿಮ್ಮ ಮಗುವಿಗೆ ದಿನವಿಡೀ ಚೈತನ್ಯವನ್ನು ಒದಗಿಸುತ್ತದೆ.
ಕೆಲಸಕ್ಕೆ ಹೋಗುವ ಅಮ್ಮಂದಿರು ಈ ಪೌಷ್ಟಿಕಾಂಶಭರಿತ ತಿಂಡಿಯನ್ನು ತಮ್ಮ ಊಟದ ಡಬ್ಬಿಗೆ ಕೂಡ ಹಾಕಿಕೊಂಡು ಹೋಗಬಹುದು.

ಬೇಕಾಗುವ ಸಾಮಗ್ರಿಗಳು
1. ಮೊಟ್ಟೆ- 6 (ಬೇಯಿಸಿಕೊಳ್ಳಿ)
2. ಮೆಯನೇಸ್- 4 ಟೀಚಮಚ
3. ಈರುಳ್ಳಿ- 1
4. ಪಾರ್ಸಲಿ- 1 ಟೀಚಮಚ
5. ಮೆಣಸು- 1 ಟೀಚಮಚ
6. ನಿಂಬೆ ರಸ- 1 ಟೀಚಮಚ
7. ಸಾಸಿವೆ- 1 ಟೀಚಮಚ
8. ಕೆಂಪು ಮೆಣಸು- 1/2 ಟೀಚಮಚ
9. ಬ್ರೆಡ್- 8 ಸ್ಲೆಸ್ (ಟೋಸ್ಟೆಡ್)
10. ಲ್ಯೂಟಸ್- 1 (ಕತ್ತರಿಸಿಕೊಳ್ಳಿ)
11. ಟೊಮೆಟೊ- 1 (ಸ್ಲೈಸ್ ಮಾಡಿಕೊಳ್ಳಿ)
ಮಾಡುವ ವಿಧಾನ
1. ಮೊದಲಿಗೆ ಮೊಟ್ಟೆಗಳನ್ನು ಸಾಸ್ ಪ್ಯಾನಿನಲ್ಲಿಟ್ಟು ನೀರು ಹಾಕಿ 5 ನಿಮಿಷ ಬೇಯಿಸಿ.
2. ನಂತರ ಮೊಟ್ಟೆಗಳನ್ನು ಮತ್ತೊಂದು ಪಾತ್ರೆಗೆ ವರ್ಗಾಯಿಸಿಕೊಳ್ಳಿ. ಮೊಟ್ಟೆಯ ಮೇಲೆ ತಣ್ಣೀರು ಹಾಕಿ ಚಮಚ ಬಳಸಿ ಅದರ ಹೊರಮೈಗೆ ಹಲವು ಕಡೆ ಹೊಡೆಯಿರಿ.
3. ನಂತರ ಒಂದೊಂದೆ ಮೊಟ್ಟೆಯ ಸಿಪ್ಪೆ ಬಿಡಿಸಿ.
4. ನಂತರ ಸಲಾಡ್ ತಯಾರಿಸಿ. ಮೆಯನೆಸ್, ಈರುಳ್ಳಿ, ಪಾರ್ಸಲಿ, ಉಪ್ಪು, ಮೆಣಸು, ನಿಂಬೆ ರಸ, ಸಾಸಿವೆ ಮತ್ತು ಕೆಂಪುಮೆಣಸು ಇವುಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಮೊಟ್ಟೆಯ ತುಂಡುಗಳನ್ನು ಸೇರಿಸಿ. ಎಲ್ಲವನ್ನೂ ನಿಧಾನವಾಗಿ ಕಲಸಿ.
5. ನಂತರ ನಾಲ್ಕು ಬ್ರೆಡ್ಡಿನ ತುಂಡುಗಳ ಮೇಲೂ ಸಲಾಡನ್ನು ಸಮವಾಗಿ ಹಚ್ಚಿ. ಇದರ ಮೇಲೆ ಲ್ಯೂಟಸ್ ಎಲೆಗಳು ಬೇಕಿದ್ದರೆ ಟೊಮೆಟೊ ತುಂಡುಗಳನ್ನು ಇಡಿ. ಮತ್ತೊಂದು ಬ್ರೆಡ್ಡಿನ ತುಂಡನ್ನು ಮುಚ್ಚಿ ತಿನ್ನಲು ನೀಡಿ.
ಇದು ಎಗ್ ಸಲಾಡ್ ಸ್ಯಾಂಡ್ ವಿಚ್ ತಯಾರಿಸುವ ವಿಧಾನ. ಇದರ ಜೊತೆ ಪುದೀನ ಚಟ್ನಿಯನ್ನು ಬಳಸಿಕೊಳ್ಳಬಹುದು.



Click it and Unblock the Notifications
