Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೊಂಬಾಟ್ ಮೊಟ್ಟೆ ರೆಸಿಪಿಯೊಂದಿಗೆ ದಾಲ್ ತಡ್ಕಾ
ಕೋಲ್ಕತ್ತಾ ಡಿಶ್ ಆದ ದಾಲ್ ತಡ್ಕಾ ಮತ್ತು ಮೊಟ್ಟೆ ರೆಸಿಪಿ ನಿಮ್ಮ ಬಾಯಲ್ಲಿ ನೀರು ಬರುವಂತೆ ಮಾಡುವುದು ಖಂಡಿತ. ನೀವು ಕೋಲ್ಕತ್ತಾದಲ್ಲಿ ದಾಲ್ ತಡ್ಕಾ ಕೇಳಿದರೆ ಮೊಟ್ಟೆಯಿಂದ ಒಗ್ಗರಣೆ ಮಾಡಲಾದ ರುಚಿಯಾದ ದಾಲ್ ತಡ್ಕಾ ನಿಮಗೆ ದೊರೆಯುತ್ತದೆ.
ಊಟದ ರುಚಿ ಹೆಚ್ಚಿಸುವ ಮಸಾಲಾ ದಾಲ್ ರೆಸಿಪಿ
ಹೌದು, ಇದೊಂದು ಕೋಲ್ಕತ್ತಾದಲ್ಲಿ ಮಾತ್ರ ದೊರೆಯುವ ವಿಶೇಷ ಡಿಶ್ ಆಗಿದ್ದು ಇದನ್ನು 'ತೋಕಾ' ಎಂದು ಕರೆಯುತ್ತಾರೆ. ಈ ಸರಳವಾದ ವಿಶೇಷವಾದ ರೆಸಿಪಿಯನ್ನು ನಮ್ಮ ಈ ಲೇಖನದಲ್ಲಿ ನಿಮಗಾಗಿ ತಿಳಿಸಿಕೊಡಲಿದ್ದು ಈ ಕೋಲ್ಕತ್ತಾ ಸ್ಪೆಶಲ್ ಡಿಶ್ ಅನ್ನು ನಿಮಗೂ ಸವಿಯಬಹುದಾಗಿದೆ.

ಮಾಡಲು ಸರಳವಾಗಿರುವ ಮತ್ತು ತಿನ್ನಲು ರುಚಿಯಾಗಿರುವ ಈ ಡಿಶ್ ನಿಮ್ಮನ್ನು ಸಕ್ರಿಯ ಹಾಗೂ ಆರೋಗ್ಯವಾಗಿರಿಸುವಲ್ಲಿ ಸಹಕಾರಿಯಾಗಿದೆ. ಹಾಗಿದ್ದರೆ ಇನ್ನೇಕೆ ತಡ ಈ ಸ್ಪೆಶಲ್ ಮೊಟ್ಟೆ ದಾಲ್ ತಡ್ಕಾ ರೆಸಿಪಿಯನ್ನು ತಯಾರಿಸಲು ನೀವು ರೆಡಿ ಮಾಡಿಕೊಳ್ಳಿ
ದಾಲ್ ತಡ್ಕಾ ಸ್ಟಾರ್ ಊಟ ಮನೆಯಲ್ಲಿಯೆ ರೆಡಿ
ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು
ಸಾಮಾಗ್ರಿಗಳು:
*ಪೂರ್ಣ ಮೂಂಗ್ ದಾಲ್ - 1/2 ಕಪ್
*ಉದ್ದಿನ ಬೇಳೆ - 1/2 ಕಪ್
*ಚನ್ನಾ ದಾಲ್ - 1/2 ಕಪ್ (ನೆನೆಸಿದ್ದು)
*ಈರುಳ್ಳಿ - 1
*ಶುಂಠಿ - 1 ಇಂಚು
*ಬೆಳ್ಳುಳ್ಳಿ - 6-8 ಎಸಳು
*ಟೊಮೇಟೊ - 1
*ಅರಶಿನ - 1 ಸ್ವಲ್ಪ
*ಒಣ ಕೆಂಪು ಮೆಣಸು - 2
*ಬೇ ಲೀವ್ಸ್ - 2
*ಹಸಿ ಮೆಣಸು - 4 (ಕತ್ತರಿಸಿದ್ದು)
*ಮೆಣಸಿನ ಹುಡಿ - 1/2 ಸ್ಪೂನ್
*ಕೊತ್ತಂಬರಿ ಹುಡಿ - 1 ಸ್ಪೂನ್
*ಹುರಿದ ಜೀರಿಗೆ ಪುಡಿ - 1 ಸ್ಪೂನ್
*ಗರಂ ಮಸಾಲಾ ಹುಡಿ - 1/2 ಸ್ಪೂನ್
*ಸಾಸಿವೆ ಎಣ್ಣೆ - 2 ಸ್ಪೂನ್
*ತುಪ್ಪ - 1 ಸ್ಪೂನ್
*ಇಂಗು - 1 ಸಣ್ಣದು
*ಸಕ್ಕರೆ - 1/2 ಸ್ಪೂನ್
*ಮೊಟ್ಟೆಗಳು - 2
.ಉಪ್ಪು - ರುಚಿಗೆ ತಕ್ಕಷ್ಟು
ರುಚಿ ರುಚಿಯಾದ ಈರುಳ್ಳಿ ಟೊಮೇಟೊ ಪಲ್ಯ
ಮಾಡುವ ವಿಧಾನ:
1. ಮೂರು ಪ್ರಕಾರದ ಬೇಳೆಗಳನ್ನು ಮೊದಲು ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ.
2. ಇದೇ ಸಮಯದಲ್ಲಿ ಈರುಳ್ಳಿ ಹಾಗೂ ಟೊಮೆಟೋವನ್ನು ಕತ್ತರಿಸಿಕೊಳ್ಳಿ.
3. ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ.
4. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಬೇ ಲೀಫ್ ಕೆಂಪು ಮೆಣಸು ಹಸಿಮೆಣಸು ಮತ್ತು ಸಕ್ಕರೆಯೊಂದಿಗೆ ಒಗ್ಗರಣೆ ಸಿದ್ಧ ಮಾಡಿ.
5. ಪ್ಯಾನ್‌ನಲ್ಲಿ 2 ನಿಮಿಷಗಳ ಕಾಲ ಕತ್ತರಿಸಿದ ಈರುಳ್ಳಿಯನ್ನು ಸೌಟಾಡಿಸಿ. ನಂತರ ಶುಂಠಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಪೇಸ್ಟ್ ಅನ್ನು ಕೂಡ ಪ್ಯಾನ್‌ಗೆ ಜೊತೆಗೆ ಸೌಟಾಡಿಸಿ.
6. 2 ರಿಂದ 3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಇದನ್ನು ಬೆಚ್ಚಗೆ ಮಾಡಿ.
7. ಟೊಮೇಟೊ ಸೇರಿಸಿ, ಉಪ್ಪು, ಕೆಂಪು ಮೆಣಸು, ಕೊತ್ತಂಬರಿ ಹುಡಿ, ಅರಶಿನ ಮತ್ತು ಹುರಿದ ಜೀರಿಗೆ ಪುಡಿಯನ್ನು ಸೇರಿಸಿ.
8. ಈ ಮಸಾಲೆಗಳಿಂದ ಎಣ್ಣೆ ಬೇರ್ಪಡುವವರೆಗೂ ಬೇಯಿಸಿ.
9. ಬೇಯಿಸಿದ ಬೇಳೆಗಳನ್ನು ಪ್ಯಾನ್‌ಗೆ ಹಾಕಿ ಮತ್ತು ಎಲ್ಲಾ ಮಸಾಲೆಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದು ಗಂಟು ಬೀಳದಂತೆ ನೋಡಿಕೊಳ್ಳಿ.
10. ಇನ್ನೊಂದು ಪ್ಯಾನ್‌ನಲ್ಲಿ ತುಪ್ಪವನ್ನು ಕಾಯಿಸಿ ಅದಕ್ಕೆ ಇಂಗು ಸೇರಿಸಿ.
11. ಈ ಪ್ಯಾನ್‌ಗೆ ಮೊಟ್ಟೆಗಳನ್ನು ಒಡೆದು ಹಾಕಿ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
12. ಮೊಟ್ಟೆಗಳಿರುವ ಪ್ಯಾನ್‌ಗೆ ಸಿದ್ಧವಾದ ದಾಲ್ ಅನ್ನು ಹುಯ್ಯಿರಿ.
13. ದಾಲ್ ದಪ್ಪಗಾಗುವರೆಗೂ ಅದನ್ನು ಚೆನ್ನಾಗಿ ಕಲಸುತ್ತಿರಿ.
14. ಕೊನೆಗೆ ಗರಂ ಮಸಾಲಾವನ್ನು ಸೇರಿಸಿ.
ರುಮಾಲ್ ರೋಟಿ ಅಥವಾ ನಾನ್‌ಗಳೊಂದಿಗೆ ಸವಿಯಲು ಈ ತಡ್ಕಾ ಸೂಪರ್ ಕಾಂಬಿನೇಶನ್ ಆಗಿದೆ.



Click it and Unblock the Notifications
